ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 57 – 12 : 46
ಅಮೃತ ಘಳಿಗೆ : ಬೆಳಿಗ್ಗೆ 05 : 59 – 07 : 23
ಸೋಮವಾರ, 08 ಏಪ್ರಿಲ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ : ಅಮಾವಾಸ್ಯೆ
ನಕ್ಷತ್ರ : ಉತ್ತರಾ ಬಾದ್ರ
ಯೋಗ : ಇಂದ್ರ
ಕರಣ : ಚತುಷ್ಪಾದ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 11
ಸೂರ್ಯಾಸ್ತ : ಸಂಜೆ 06 : 32
ರಾಹುಕಾಲ : 07 : 44 – 09 : 16
ಯಮಗಂಡ ಕಾಲ : 10 : 49 – 12 : 21
ಗುಳಿಕಕಾಲ : 01 : 54 – 03 : 27
ರಾಶಿ ಫಲ
ಮೇಷ : ಹಣಕಾಸಿನ ಸಮಸ್ಯೆ ಎದುರಾಗಲಿದೆ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಹೊಸ ಉದ್ಯಮ ಪ್ರಾರಂಭಿಸಲು ಸಕಾಲವಲ್ಲ.
ವೃಷಭ : ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಮನೆಯಲ್ಲಿ ಮದುವೆ ತಯಾರಿಗಳು ನಡೆಯಲಿವೆ. ಮನಸ್ಸಿನಲ್ಲಿ ತೃಪ್ತಿಯ ಭಾವನೆ ಮೂಡಲಿದೆ.
ಮಿಥುನ : ನಿಮ್ಮ ಕೈ ಕೆಳಗಿನ ಉದ್ಯೋಗಿಯಿಂದ ಸಹಾಯ ಪಡೆಯುವಿರಿ. ಸಂಗಾತಿಯೊಂದಿಗೆ ದೂರ ಪ್ರಯಾಣ ಹೊರಡುವಿರಿ. ಮನಸ್ಸಿನ ಭಯಗಳು ದೂರವಾಗಲಿವೆ.
ಕಟಕ : ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿ. ಭಾವನಾತ್ಮಕ ವಿಚಾರಗಳಿಗೆ ಮರುಳಾಗದಿರಿ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ಕಾಡಲಿದೆ.
ಸಿಂಹ : ಪ್ರೀತಿ ಪಾತ್ರರೊಂದಿಗೆ ವೈಮನಸ್ಸು ಮೂಡಲಿದೆ. ಶತ್ರುಗಳು ಹೆಚ್ಚಾಗಲಿದ್ದಾರೆ. ಅನ್ಯರ ವಿಚಾರದಲ್ಲಿ ಅನಗತ್ಯ ಪ್ರವೇಶ ಒಳ್ಳೆಯದಲ್ಲ.
ಕನ್ಯಾ : ಆಡಳಿತಾತ್ಮಕ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲಿದ್ದೀರಿ. ವ್ಯವಹಾರದಲ್ಲಿ ಜಾಗೃತಿಯಿಂದ ವರ್ತಿಸಿ.
ತುಲಾ : ಕುಟುಂಬದಲ್ಲಿ ಸಂತೋಷವಿರಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ. ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.
ವೃಶ್ಚಿಕ : ಆದಾಯ ವೃದ್ಧಿಯಾಗಲಿದೆ. ಪ್ರೀತಿಯ ಸಂಬಂಧಗಳಿಗೆ ಸಾಕಷ್ಟು ಸಮಯ ನೀಡಲಿದ್ದೀರಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ.
ಧನಸ್ಸು : ಸಂಗಾತಿಯೊಂದಿಗೆ ಉತ್ತಮವಾಗಿ ನಡೆದುಕೊಳ್ಳಿ. ಶ್ರದ್ಧೆಯಿಂದ ಕೆಲಸ ಮಾಡಿ. ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡಲಿದೆ.
ಮಕರ : ಮನರಂಜನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಮಾತಿನ ಮೇಲೆ ಹಿಡಿತವಿರಲಿ. ಸಭ್ಯತೆಯಿಂದ ವರ್ತಿಸಿ.
ಕುಂಭ : ಉದ್ಯೋಗದಲ್ಲಿ ಒತ್ತಡವಿರಲಿದೆ. ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಹಿರಿಯರನ್ನು ಗೌರವಿಸಿ.