ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 56 – 12 : 45
ಅಮೃತ ಘಳಿಗೆ : ಇಲ್ಲ
ಗುರುವಾರ, 11 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ : ತದಿಗೆ
ನಕ್ಷತ್ರ : ಕೃತ್ತಿಕ
ಯೋಗ : ಪ್ರೀತಿ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 09
ಸೂರ್ಯಾಸ್ತ : ಸಂಜೆ 06 : 32
ರಾಹುಕಾಲ : 01 : 53 – 03 : 26
ಯಮಗಂಡ ಕಾಲ : 06 : 09 – 07 : 42
ಗುಳಿಕಕಾಲ : 09 : 15 – 10 : 48
ರಾಶಿ ಫಲ
ಮೇಷ : ತಾಯಿಯಿಂದ ಸಹಾಯ ದೊರೆಯಲಿದೆ. ಹಿರಿಯರನ್ನು ಗೌರವಿಸಿ. ತಲೆನೋವಿನ ಸಮಸ್ಯೆ ಕಾಡಬಹುದು.
ವೃಷಭ : ಕುಟುಂಬದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಬಹುದು. ಆಸ್ತಿ ವಿವಾದ ಉಂಟಾಗಬಹುದು. ತಾಳ್ಮೆಯಿಂದ ವರ್ತಿಸಿದರೆ ಅನುಕೂಲ.
ಮಿಥುನ : ಆಸ್ತಿ ವಿವಾದ ಹೆಚ್ಚಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಸಣ್ಣ ವಿಚಾರಗಳಿಗೆ ಜಗಳ ಮಾಡುವುದನ್ನು ತಪ್ಪಿಸಿ.
ಕಟಕ : ದಾಂಪತ್ಯದಲ್ಲಿ ವಿರಸ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಒಡಹುಟ್ಟಿದವರಿಂದ ಸಹಾಯ ದೊರೆಯಲಿದೆ.
ಸಿಂಹ : ಮನೆಯಲ್ಲಿ ಸಂತೋಷಕರ ವಾತಾವರಣವಿರಲಿದೆ. ಪೋಷಕರೊಂದಿಗೆ ಸಮಯ ಕಳೆಯಲಿದ್ದೀರಿ. ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು.
ಕನ್ಯಾ : ಒಡಹುಟ್ಟಿದವರ ಸಹಾಯ ದೊರೆಯಲಿದೆ. ಶಿಸ್ತುಬದ್ಧ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಪ್ರೇಮಿಗಳಲ್ಲಿ ವಿರಸ ಕಂಡುಬರಲಿದೆ.
ತುಲಾ : ಸಂಗಾತಿಯಿಂದ ಕಾರ್ಯಗಳು ಪೂರ್ಣಗೊಳ್ಳಲಿವೆ. ಒತ್ತಡದ ಜೀವನ ನಿಮ್ಮದಾಗಲಿದೆ. ಪಾಲುದಾರಿಕೆ ವ್ಯವಹಾರದಿಂದ ಲಾಭ ಗಳಿಸಲಿದ್ದೀರಿ.
ವೃಶ್ಚಿಕ : ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡುಬರಲಿದೆ. ಪ್ರೇಮಿಗಳಿಗೆ ಉತ್ತಮ ದಿನ.
ಧನಸ್ಸು : ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆಸ್ತಿ ಬಗ್ಗೆ ವಿವಾದ ಉಂಟಾಗಲಿದೆ. ಆಹಾರ ಸೇವನೆ ಬಗ್ಗೆ ಎಚ್ಚರಿಕೆಯಿಂದಿರಿ.
ಮಕರ : ದಾಂಪತ್ಯ ಜೀವನ ಸುಖಕರವಾಗಿರಲಿದೆ. ಪ್ರೇಮಿಗಳು ವಿವಾಹವಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಸಹಾಯ ದೊರೆಯಲಿದೆ.
ಕುಂಭ : ತಾಳ್ಮೆಯಿಂದ ವರ್ತಿಸಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೈದ್ಯರಿಗೆ ಉತ್ತಮ ದಿನ.
ಮೀನ : ಅನಗತ್ಯ ವಿಚಾರಗಳಿಗೆ ತಲೆ ಹಾಕದರಿ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯೊಂದಿಗೆ ದೂರ ಪ್ರಯಾಣ ಹೊರಡುವ ಸಾಧ್ಯತೆ.