21 ಏಪ್ರಿಲ್ ಭಾನುವಾರದಿಂದ 27 ಏಪ್ರಿಲ್ 2024ರ ಶನಿವಾರದವರೆಗೆ
ರಾಶಿ ಫಲ
ಮೇಷ : ವ್ಯಾಪಾರದಲ್ಲಿ ನಿಮ್ಮ ವಿರೋಧಿಗಳಿಗೆ ಉತ್ತಮ ಸ್ಪರ್ಧೆ ನೀಡುತ್ತೀರಿ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚು. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ. ಕುಟುಂಬದವರೊಂದಿಗೆ ಸಂಬಂಧ ಉತ್ತಮವಾಗಿರಲಿದೆ. ಆಹಾರ ಸೇವನೆ ಬಗ್ಗೆ ಎಚ್ಚರಿಕೆಯಿಂದಿರಿ. ಜನರು ನಿಮ್ಮ ಬಗ್ಗೆ ತಪ್ಪಾಗಿ ಊಹೆ ಮಾಡಿಕೊಳ್ಳಬಹುದು.
ವೃಷಭ : ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವೈವಾಹಿಕ ಜೀವನದಲ್ಲಿ ಮಾಧುರ್ಯತೆ ಕಡಿಮೆ ಆಗಲಿದೆ. ಆತ್ಮೀಯರೊಂದಿಗೆ ಪ್ರವಾಸಕ್ಕೆ ಹೊರಡಲಿದ್ದೀರಿ. ವ್ಯವಹಾರದಲ್ಲಿ ಪ್ರಗತಿ ಹೆಚ್ಚಾಗಲಿದೆ. ವೈದ್ಯಕೀಯ ಕ್ಷೇತ್ರದ ಜನರಿಗೆ ಗೌರವ ಹೆಚ್ಚಾಗಲಿದೆ. ನಿರೀಕ್ಷೆಗಿಂತ ಖರ್ಚು ಅಧಿಕಗೊಳ್ಳುವುದರಿಂದ ಕೋಪಗೊಳ್ಳುವಿರಿ. ಆಸ್ತಿ ವ್ಯವಹಾರದ ಬಗ್ಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಕೋಪವನ್ನು ಹತ್ತೋಟಿಯಲ್ಲಿಡಿ.
ಮಿಥುನ : ಗಂಡ-ಹೆಂಡತಿಯರ ನಡುವ ಪರಸ್ಪರ ಗೌರವದ ಭಾವನೆ ಅಧಿಕವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತೀರಿ. ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಕಾರ್ಯವೈಖರಿಯನ್ನು ಬದಲಾಯಿಸಲಿದ್ದೀರಿ. ಧೀಡಿರ್ ಹಣಕಾಸು ಪ್ರಯೋಜನ ಪಡೆಯಲಿದ್ದೀರಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ. ಆರೋಗ್ಯದ ಕಡೆ ಗಮನಹರಿಸಿ. ಕಾನೂನು ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ. ತಾಳ್ಮೆಯಿಂದ ಕೆಲಸ ಮಾಡಿದರೆ ಲಾಭದಾಯಕವಾಗಲಿದೆ.
ಕಟಕ : ಸರ್ಕಾರಿ ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗಲಿದೆ. ನಿಮ್ಮ ಆಸೆಗಳು ಈಡೇರಬಹುದು. ಅಧ್ಯಯನದಲ್ಲಿ ಸುಧಾರಣೆಯಾಗಲಿದೆ. ಧಾರ್ಮಿಕ ಕಾರ್ಯಗಳ ಬಗ್ಗೆ ನಂಬಿಕೆ ಹೆಚ್ಚಾಗುವುದು. ದುಬಾರಿ ವಸ್ತುಗಳ ಖರೀದಿಯಿಂದಾಗಿ ಹಣದ ಮುಗ್ಗಟ್ಟು ಎದುರಾಗಲಿದೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು ಎದುರಾಗಲಿವೆ. ವಿದ್ಯುತ್ ಉಪಕರಣ ಬಳಸುವಾಗ ಎಚ್ಚರಿಕೆ ವಹಿಸಿ. ಉದ್ಯೋಗದ ಸ್ಥಳದಲ್ಲಿ ವಾಗ್ವಾದವಾಗುವುದನ್ನು ತಪ್ಪಿಸಿ.
ಸಿಂಹ : ನಿಮ್ಮ ಉಳಿತಾಯದ ಬಗ್ಗೆ ತುಂಬಾ ಗಂಭೀರವಾಗಿರುತ್ತೀರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದು. ಹೊಸ ಕೆಲಸದ ಮನಸ್ಸಿನಲ್ಲಿ ಉತ್ಸಾಹವಿರಲಿದೆ. ಮದುವೆ ವಿಚಾರದಲ್ಲಿ ಆತುರ ಸಲ್ಲದು. ಮೊಣಕಾಲಿನ ನೋವು ಕಾಣಿಸಿಕೊಳ್ಳಬಹುದು. ಮನೆಯಲ್ಲಿ ಸಣ್ಣ-ಪುಟ್ಟ ಜಗಳ ಉಂಟಾಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಿ.
ಕನ್ಯಾ : ಈ ವಾರ ನಿಮ್ಮ ಆದಾಯ ವೃದ್ಧಿಸಲಿದೆ. ಹಣದ ವ್ಯವಹಾರದಿಂದ ಅಧಿಕ ಲಾಭ ಗಳಿಸಲಿದ್ದೀರಿ. ಪಾಲುದಾರಿಕೆ ಕೆಲಸದಿಂದ ಆರ್ಥಿಕ ಲಾಭವಿದೆ. ಹೊಸ ಪ್ರೇಮ ಸಂಬಂಧಗಳು ಕೂಡಿ ಬರಲಿವೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ರಹಸ್ಯ ವಿದ್ಯೆಗಳನ್ನು ಅಭ್ಯಾಸ ಮಾಡುವಿರಿ. ಹಳೆಯ ಸ್ನೇಹಿತರಿಗೆ ಹಣಕಾಸು ನೆರವು ನೀಡುವಿರಿ. ವೃತ್ತಿಯ ಅಭದ್ರತೆಯ ಭಾವನೆ ಕಾಡಲಿದೆ. ಸಂಗಾತಿಗೆ ಕಿರುಕುಳ ನೀಡಲಿದ್ದೀರಿ. ಮಾತಿನಲ್ಲಿ ಮಾಧುರ್ಯತೆ ಇರಲಿ. ಕೋಪವನ್ನು ನಿಯಂತ್ರಿಸಿ. ನಿಮ್ಮ ನಡವಳಿಕೆಯಿಂದ ಜನರು ನಿರಾಸೆಗೊಳ್ಳುವರು.
ತುಲಾ : ಗಂಭೀರ ಸಮಸ್ಯೆಗಳ ಬಗ್ಗೆ ಯೋಚಿಸುವಿರಿ. ಉದ್ಯೋಗದ ಸ್ಥಳದಲ್ಲಿ ಗೌರವ ಅಧಿಕವಾಗಲಿದೆ. ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ಉತ್ತಮಗೊಳ್ಳುವುದು. ಧಿಡೀರನೆ ಶುಭ ಸಮಾಚಾರ ಕೇಳುವಿರಿ. ಹಳೆಯ ತಪ್ಪುಗಳನ್ನು ಮತ್ತೆ ಮಾಡುವುದನ್ನು ನಿಲ್ಲಿಸಿ. ಇತರರಿಂದ ಹೆಚ್ಚಿನದನ್ನು ನಿರೀಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಲಿದ್ದೀರಿ. ಕೆಟ್ಟ ಜನರೊಂದಿಗೆ ಗುರುತಿಸಿಕೊಳ್ಳುವಿರಿ. ಹನುಮಾನ್ ಚಾಲೀಸ್ ಪಠಣೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸಂದರ್ಭಗಳಿಗೆ ಬಲಿಯಾಗಿ ಅವಕಾಶ ವಂಚಿತವಾಗಲಿದ್ದೀರಿ.
ವೃಶ್ಚಿಕ : ಶುಭ ಸಮಾಚಾರ ಕೇಳುವುದರಿಂದ ಆತ್ಮಸ್ಥೈರ್ಯ ಹೆಚ್ಚಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲಿದ್ದೀರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಚಟುವಟಿಕೆಗಳಿಂದ ಲಾಭ ಗಳಿಸಲಿದ್ದೀರಿ. ವಿರೋಧಿಗಳ ಟೀಕೆಗೆ ಕೆರಳಲಿದ್ದೀರಿ. ಆರೋಗ್ಯದ ಕಡೆಗೆ ಗಮನ ಹರಿಸಿ. ಒಂಟಿಯಾಗಿ ಪ್ರಯಾಣ ಮಾಡುವುದು ಒಳ್ಳೆಯದಲ್ಲ.
ಧನಸ್ಸು : ಹೊಸ ಪ್ರೇಮ ಸಂಬಂಧಗಳು ಪ್ರಾರಂಭವಾಗಬಹುದು. ಸಮಯಕ್ಕೆ ಸರಿಯಾಗಿ ಸ್ನೇಹಿತರು ಸಹಾಯ ಮಾಡಲಿದ್ದಾರೆ. ಮೇಲಾಧಿಕಾರಿಗಳ ಪ್ರೀತಿಗೆ ಪಾತ್ರರಾಗುತ್ತೀರಿ. ವ್ಯಾಪಾರದಲ್ಲಿ ಲಾಭ ಕಂಡುಬರಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲಿದ್ದೀರಿ. ಅನಗತ್ಯ ವಿಷಯಗಳಲ್ಲಿ ಸಿಕ್ಕಿ ಹಾಕಿಕೊಂಡು ಸಮಯ ವ್ಯರ್ಥ ಮಾಡಬೇಡಿ. ತಾಯಿಯ ಆರೋಗ್ಯದ ಕಡೆ ಗಮನಹರಿಸಿ. ಸುಳ್ಳು ಹೇಳುವುದರಿಂದ ನಂಬಿಕೆ ಕಳೆದುಕೊಳ್ಳುವಿರಿ.
ಮಕರ : ಸ್ನೇಹಿತರು, ಸಂಬಂಧಿಕರಿಗಾಗಿ ಸಮಯವನ್ನು ಮೀಸಲಿಡಿ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕೌಟುಂಬಿಕ ಕಲಹಗಳು ಬಗೆಹರಿಯಲಿವೆ. ರಾಜಕೀಯ ವ್ಯಕ್ತಿಗಳಿಗೆ ಯಶಸ್ಸು ಸಿಗಲಿದೆ. ವಿವಾಹೇತರ ಸಂಬಂಧಗಳಿಂದ ದೂರವಿರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುವಿರಿ. ನಿಮಗಿಂತ ಹಿರಿಯರೊಂದಿಗಿನ ವಾಗ್ವಾದವನ್ನು ತಪ್ಪಿಸಿ.
ಕುಂಭ : ಪ್ರಯಾಣ ಹೊರಡುವ ಸಾಧ್ಯತೆಗಳಿವೆ. ಹೊಸ ಹೂಡಿಕೆಯು ನಿಮಗೆ ಪ್ರಯೋಜನಕಾರಿಯಾಗುವುದು. ಕುಟುಂಬದೊಂದಿಗೆ ಸಮಯ ಕಳೆಯಲಿದ್ದೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ಪಡೆಯುವಿರಿ. ಓದಿನ ಕಡೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸುವರು. ಕಲಾವಿದರಿಗೆ ಗೌರವ ಹೆಚ್ಚಲಿದೆ. ಔಷಧ ಸೇವನೆಯ ಬಗ್ಗೆ ಎಚ್ಚರಿಕೆಯಿಂದ ಇರಿ. ನಕಾರಾತ್ಮಕ ಜನರಿಂದ ಅಂತರ ಕಾಯ್ದುಕೊಳ್ಳಿ. ಮೃಧುವಾದ ಭಾಷೆಯನ್ನು ಬಳಸಿ.
ಮೀನ : ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಆರ್ಥಿಕ ಪರಿಸ್ಥತಿ ಉತ್ತಮವಾಗಿರಲಿದೆ. ವಿಮಾ ಪಾಲಿಸಿಗಳಲ್ಲಿ ಹಣ ಹೂಡಿಕೆ ಮಾಡಲಿದ್ದೀರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸು ಪಡೆಯುವಿರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆಹಾರ ಪದ್ಧತಿಯಲ್ಲಿ ಬದಾವಣೆಗಳನ್ನು ಮಾಡಿಕೊಳ್ಳುವಿರಿ. ಸ್ನೇಹಿತರೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದಿರಿ. ನಿಮ್ಮ ಕೋಪವನ್ನು ಮಕ್ಕಳ ಮೇಲೆ ತೋರಿಸದಿರಿ.