ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ :ಇಲ್ಲ
ಅಮೃತ ಘಳಿಗೆ : ಸಂಜೆ 03 : 06 – 04 : 50
ಬುಧವಾರ, 24 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ: ಪಾಡ್ಯ
ನಕ್ಷತ್ರ : ಸ್ವಾತಿ
ಯೋಗ : ಸಿದ್ಧಿ
ಕರಣ : ಬಾಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 02
ಸೂರ್ಯಾಸ್ತ : ಸಂಜೆ 06 : 33
ರಾಹುಕಾಲ : 12 : 18 – 01 : 52
ಯಮಗಂಡ ಕಾಲ : 07 : 36 – 09 : 10
ಗುಳಿಕಕಾಲ : 10 : 44 – 12 : 18
ರಾಶಿ ಫಲ
ಮೇಷ : ನಿಮ್ಮ ನಿರ್ಧಾರಗಳಿಗೆ ಸಂಬಂಧಿಸಿದಂತೆ ತೊಂದರೆಗಳನ್ನು ಎದುರಿಸಲಿದ್ದೀರಿ. ತಾಳ್ಮೆ ಕಳೆದುಕೊಳ್ಳುವುದು ಬೇಡ. ಸಕಾಲಕ್ಕೆ ಕೆಲಸಗಳು ಪೂರ್ಣಗೊಳ್ಳಲಿವೆ.
ವೃಷಭ : ಉದ್ಯೋಗ ಮತ್ತು ವ್ಯವಹಾರದಲ್ಲಿ ವಾತಾವರಣ ತುಂಬಾ ಸ್ಪರ್ಧಾತ್ಮಕವಾಗಿರಲಿದೆ. ಅಧಿಕ ಕೆಲಸದ ಒತ್ತಡದಿಂದ ದೇಹಾಲಸ್ಯ ಉಂಟಾಗಲಿದೆ. ಬಲವಂತವಾಗಿ ಕೆಲಸ ಮಾಡಬೇಕಾಗುವುದು.
ಮಿಥುನ : ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ. ವಿವಾಹೇತರ ಸಂಬಂಧಗಳನ್ನು ತಪ್ಪಿಸಿ. ರಹಸ್ಯಗಳನ್ನು ಅನಿರೀಕ್ಷಿತವಾಗಿ ಬಹಿರಂಗ ಪಡಿಸಲಿದ್ದೀರಿ.
ಕಟಕ : ಶೀತ ಸಂಬಂಧಿ ಕಾಯಿಲೆಗಳಿಗೆ ಒಳಗಾಗಲಿದ್ದೀರಿ. ಅನಗತ್ಯ ವಾಗ್ವಾದವನ್ನು ತಪ್ಪಿಸಿ. ಬಜೆಟ್ ಮೇಲೆ ಗಮನವಿರಲಿ.
ಸಿಂಹ : ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡವಿರಲಿದೆ. ದೀರ್ಘ ಕಾಲದ ಕಾಯಿಲೆ ಕಾಣಿಸಿಕೊಳ್ಳಬಹುದು. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಕನ್ಯಾ : ದಾಂಪತ್ಯದಲ್ಲಿ ಕಲಹ. ದೇಹದಲ್ಲಿ ನಿಶ್ಶಕ್ತಿ ಕಾಣಿಸಿಕೊಳ್ಳಲಿದೆ. ಜನರು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಲಿದ್ದಾರೆ.
ತುಲಾ : ಸಾಲ ಪಡೆಯುವುದರಿಂದ ತೊಂದರೆ ಅನುಭವಿಸಲಿದ್ದೀರಿ. ದುರಾಸೆಯಿಂದ ದೂರವಿರಬೇಕು. ಪ್ರೇಮಿಗಳಲ್ಲಿ ವಿರಸ ಕಂಡುಬರಲಿದೆ.
ವೃಶ್ಚಿಕ : ನೆರೆಹೊರೆಯವರು ನಿಮ್ಮ ಪ್ರಗತಿಯ ಬಗ್ಗೆ ಅಸೂಯೆ ಪಡುತ್ತಾರೆ. ಕೋಪವನ್ನು ನಿಯಂತ್ರಿಸಿ. ಸಂಧಿವಾತದ ಸಮಸ್ಯೆ ಕಾಡಬಹುದು.
ಧನಸ್ಸು : ಉದ್ಯೋಗದ ಸ್ಥಳದಲ್ಲಿ ನಿಮ್ಮ ಕಾರ್ಯವೈಖರಿಯಿಂದ ಗರುತು ಉಂಟು ಮಾಡಲಿದ್ದೀರಿ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ಚಾಲನೆ ಮಾಡುವಾಗ ಜಾಗರೂಕರಾಗಿರಿ.
ಮಕರ : ಪಾಲುದಾರಿಕೆ ವ್ಯವಹಾರ ಮಾಡಲಿದ್ದೀರಿ. ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ಥೈರಾಯಿಡ್ ಸಮಸ್ಯೆ ಇರುವ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕುಂಭ : ಉದ್ಯೋಗದಲ್ಲಿ ಒತ್ತಡ ಕಂಡುಬರಲಿದೆ. ಬ್ಯಾಂಕಿನಿಂದ ಪಡೆದ ಸಾಲದಿಂದ ಕೆಲವು ಸಮಸ್ಯೆಗಳು ಹೆಚ್ಚಾಗಲಿವೆ. ಹಣಕಾಸಿನ ವಿಚಾರಕ್ಕೆ ಕುಟುಂಬದಲ್ಲಿ ಕಲಹ ಉಂಟಾಗಲಿದೆ.
ಮೀನ : ಅನಿರೀಕ್ಷಿತ ದೂರ ಪ್ರಯಾಣ ಮಾಡಲಿದ್ದೀರಿ. ದುಷ್ಟ ಆಲೋಚನೆಗಳಿಂದ ವಿಮುಕ್ತರಾಗುವಿರಿ. ಸಂಗಾತಿಯ ಸಲಹೆ ಪಡೆದು ಕಾರ್ಯ ಆರಂಭಿಸಿ.