ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 53 – 12 : 43
ಅಮೃತ ಘಳಿಗೆ : ಸಂಜೆ 04 : 58 – 06 : 41
ಗುರುವಾರ, 25 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ಬಿದಿಗೆ
ನಕ್ಷತ್ರ : ವಿಶಾಖ
ಯೋಗ : ವ್ಯತೀಪಾತ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 02
ಸೂರ್ಯಾಸ್ತ : ಸಂಜೆ 06 : 34
ರಾಹುಕಾಲ : 01 : 52 – 03 : 26
ಯಮಗಂಡ ಕಾಲ : 06 : 02 – 07 : 36
ಗುಳಿಕಕಾಲ : 09 : 10 – 10 : 44
ರಾಶಿ ಫಲ
ಮೇಷ : ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ.
ವೃಷಭ : ಸಂಗಾತಿಯ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗಲಿವೆ. ಸೋಮಾರಿತನ ಅಧಿಕವಾಗಲಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗರೂಕರಾಗಿರಿ.
ಮಿಥುನ : ಏಕಾಗ್ರತೆಯಿಂದ ನೀವು ಬಯಸಿದ ಫಲಿತಾಂಶ ಪಡೆಯುವಿರಿ. ಕೋಪಗೊಳ್ಳುವುದನ್ನು ತಪ್ಪಿಸಿ. ಜಾಣ್ಮೆಯಿಂದ ಸಮಸ್ಯೆ ಬಗೆಹರಿಸಲಿದ್ದೀರಿ.
ಕಟಕ : ಕುಟುಂಬದಲ್ಲಿ ಹಬ್ಬದ ವಾತಾವರಣವಿರಲಿದೆ. ದೈನಂದಿನ ದಿನಚರಿ ಅಸ್ತವ್ಯಸ್ತಗೊಳ್ಳಲಿದೆ. ಗಂಟಲು ನೋವಿನ ಸಮಸ್ಯೆ ಅಧಿಕವಾಗಲಿದೆ.
ಸಿಂಹ : ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರಲಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಕನ್ಯಾ : ನೀವು ಯಾರಿಂದಲೂ ಹೆಚ್ಚು ನಿರೀಕ್ಷಿಸಬೇಡಿ. ವಿವಾಹದ ವಿಚಾರಗಳು ಮುಂದೂಡಿಕೆಯಾಗಲಿವೆ. ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗಬಹುದು.
ತುಲಾ : ಆಲೋಚನೆಗಳಲ್ಲಿ ಚಂಚಲತೆ ಇರಲಿದೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸಂದಿಗ್ಧತೆ ಎದುರಾಗಲಿದೆ. ರಾಜಕೀಯ ವ್ಯಕ್ತಿಗಳು ಎಚ್ಚರಿಕೆಯಿಂದ ಇರಿ.
ವೃಶ್ಚಿಕ : ಉದ್ಯೋಗದಲ್ಲಿ ಲಾಭ ಗಳಿಸಲಿದ್ದೀರಿ. ಸೋಮಾರಿತನ ತಪ್ಪಿಸಿ. ಇಂಟರ್ ನೆಟ್ ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ಇರಲಿ.
ಧನಸ್ಸು : ಸಾರ್ವಜನಿಕ ಸಭೆಯಲ್ಲಿ ಮುಜುಗರಕ್ಕೆ ಒಳಗಾಗಲಿದ್ದೀರಿ. ನಿಮ್ಮ ದೌರ್ಬಲ್ಯಗಳನ್ನು ಅನ್ಯರಿಗೆ ತಿಳಿಸದಿರಿ. ಕಲಾವಿದರಿಗೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ.
ಮಕರ : ಸಹೋದ್ಯೋಗಿಗಳು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ರಹಸ್ಯ ಶತ್ರುಗಳ ಬಗ್ಗೆ ಮನಸ್ಸಿನಲ್ಲಿ ಭಯ ಉಂಟಾಗಲಿದೆ. ಗ್ರಾಹಕರ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಹುದು.
ಕುಂಭ : ಋಣಾತ್ಮಕ ಆಲೋಚನೆಗಳಿಂದ ದೂರವಿರಿ. ಸರ್ಕಾರಿ ಉದ್ಯೋಗಿಗಳಿಗೆ ಶುಭ ದಿನ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಮೀನ : ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಮಕ್ಕಳಿಂದ ಸಂತೋಷಗೊಳ್ಳುವಿರಿ. ಮದುವೆಗೆ ಸಂಬಂಧಿಸಿದ ಅಡೆತಡೆಗಳು ನಿವಾರಣೆ ಆಗಲಿವೆ.