ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 52 – 12 : 42
ಅಮೃತ ಘಳಿಗೆ : ರಾತ್ರಿ 07 : 22 – 09 : 01
ಶನಿವಾರ, 27ಏಪ್ರಿಲ್2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ತದಿಗೆ/ ಚೌತಿ
ನಕ್ಷತ್ರ : ಜೇಷ್ಠ
ಯೋಗ : ಪರಿಘ
ಕರಣ : ವಿಷ್ಠಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 01
ಸೂರ್ಯಾಸ್ತ : ಸಂಜೆ 06 : 34
ರಾಹುಕಾಲ : 09 : 09 – 10 : 43
ಯಮಗಂಡ ಕಾಲ : 01 : 51 – 03 : 26
ಗುಳಿಕಕಾಲ : 06 : 01 – 07 : 35
ರಾಶಿ ಫಲ
ಮೇಷ : ಹೊಸ ಉದ್ಯಮ ಪ್ರಾರಂಭಿಸಲಿದ್ದೀರಿ. ಸ್ವಾರ್ಥಿಗಳೊಂದಿಗಿನ ನಿಮ್ಮ ಸಂಬಂಧಗಳು ಬಲಗೊಳ್ಳಬಹುದು. ಸಕಾರಾತ್ಮಕ ಆಲೋಚನೆಯಿಂದ ಕೂಡಿರುತ್ತೀರಿ.
ವೃಷಭ : ಮಧುಮೇಹಿಗಳು ಆರೋಗ್ಯದ ಕಡೆ ಗಮನಹರಿಸಿ. ಮನೆಗಾಗಿ ಸಾಕಷ್ಟು ಹಣ ವ್ಯಯ ಮಾಡಲಿದ್ದೀರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು.
ಮಿಥುನ : ವಿದ್ಯಾರ್ಥಿಗಳು ಅತಿ ಹೆಚ್ಚು ಕಲಿಯಲಿದ್ದಾರೆ. ಉದ್ಯೋಗದಲ್ಲಿ ಸಮಸ್ಯೆಗಳು ಉದ್ಭವಿಸಲಿವೆ. ಹಿತಶತ್ರುಗಳಿಂದ ನಷ್ಟಅನುಭವಿಸಲಿದ್ದೀರಿ.
ಕಟಕ : ಒತ್ತಡದ ಜೀವನ ತಪ್ಪಿಸಲು ಯೋಗ ಮತ್ತು ಧ್ಯಾನ ರೂಢಿಸಿಕೊಳ್ಳಿ. ಸ್ನೇಹಿತರೊಂದಿಗೆ ಸಮಸ್ಯೆಯನ್ನು ಹಂಚಿಕೊಳ್ಳಿ. ನವ ಪ್ರೇಮಿಗಳಲ್ಲಿ ವಿರಸ ಮೂಡಲಿದೆ.
ಸಿಂಹ : ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ. ಬಲ್ಲವರಿಂದಲೇ ವಂಚನೆಗೆ ಒಳಗಾಗಲಿದ್ದೀರಿ.
ಕನ್ಯಾ : ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.
ತುಲಾ : ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯದಲ್ಲಿ ಕುಂಠಿತ. ಮೊಣಕಾಲಿನ ನೋವು ಕಾಣಿಸಿಕೊಳ್ಳಬಹುದು. ಕಾನೂನು ತೊಡಕುಗಳಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು.
ವೃಶ್ಚಿಕ : ಅನಾರೋಗ್ಯದ ಸಮಸ್ಯೆ ಕಾಡಲಿದೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನವಿರಲಿ. ಜನರು ನಿಮ್ಮನ್ನು ಅಹಂಕಾರಿಗಳೆಂದು ಭಾವಿಸಲಿದ್ದಾರೆ.
ಧನಸ್ಸು : ಸ್ತ್ರೀಯರಿಗೆ ಋತುಚಕ್ರದ ಸಮಸ್ಯೆ ಕಾಡಲಿದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದ ಸ್ಥಳದಲ್ಲಿ ಅಪಶ್ರುತಿ ಬಳಸದಿರಿ.
ಮಕರ : ಕುಟುಂಬದ ಸದಸ್ಯರು ನಿಮ್ಮ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ. ವಾಂತಿ, ಬೇಧಿ ಸಮಸ್ಯೆಯನ್ನು ನಿರ್ಲಕ್ಷಿಸದಿರಿ. ವ್ಯಾಪಾರದ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ.
ಕುಂಭ : ಬಂಧುಗಳ ಸಮಸ್ಯೆಯಿಂದ ಮನಸ್ಸು ಕಂಗಾಲಾಗಲಿದೆ. ಆಪತ್ಕಾಲದ ನಿಧಿಯನ್ನು ಬಳಸಲಿದ್ದೀರಿ. ನಕಾರಾತ್ಮಕ ಆಲೋಚನೆಯಿಂದ ದೂರವಿರಿ.
ಮೀನ : ಕುಟುಂಬದಲ್ಲಿ ಅಪಹಾಸ್ಯಕ್ಕೆ ಒಳಗಾಗಲಿದ್ದೀರಿ. ಸೊಂಟ ಮತ್ತು ಕಾಲಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಟ್ಟಜನರ ಸಹವಾಸ ತಪ್ಪಿಸಿ.