ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ :ಇಲ್ಲ
ಅಮೃತ ಘಳಿಗೆ : ಸಂಜೆ 05 : 12 – 06 : 44
ಬುಧವಾರ, 01 ಮೇ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ: ಅಷ್ಠಮಿ
ನಕ್ಷತ್ರ : ಶ್ರವಣ
ಯೋಗ : ಶುಭ
ಕರಣ : ಬಾಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 05 : 59
ಸೂರ್ಯಾಸ್ತ : ಸಂಜೆ 06 : 35
ರಾಹುಕಾಲ : 12 : 17 – 01 : 51
ಯಮಗಂಡ ಕಾಲ : 07 : 33 – 09 : 08
ಗುಳಿಕಕಾಲ : 10 : 42 – 12 : 17
ರಾಶಿ ಫಲ
ಮೇಷ : ನಿಮಗೆ ಅನಿಸಿದ್ದನ್ನು ಮಾಡಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ. ಸಂಗಾತಿಯೊಂದಿಗೆ ಮನರಂಜನಾತ್ಮಕ ಸಮಯ ಕಳೆಯಲಿದ್ದೀರಿ.
ವೃಷಭ : ಚಿಂತೆ ಮತ್ತು ಒತ್ತಡವು ಆರೋಗ್ಯವನ್ನು ನಾಶ ಮಾಡಲಿದೆ. ನಿಮ್ಮನ್ನು ಪ್ರೀತಿಸುವವರನ್ನು ಗುರುತಿಸುವಲ್ಲಿ ವಿಫಲರಾಗುತ್ತೀರಿ. ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತೀರಿ.
ಮಿಥುನ : ನಿಮ್ಮ ಪ್ರೀತಿಯ ಕಥೆಗೆ ಹೊಸ ತಿರುವು ದೊರೆಯಲಿದೆ. ಸಾಹಿತಿಗಳಿಗೆ ಉತ್ತಮ ದಿನ. ಭವಿಷ್ಯದ ಯೋಜನೆಗಳನ್ನು ರೂಪಿಸಲಿದ್ದೀರಿ.
ಕಟಕ : ದೇಹದ ಫಿಟ್ ನೆಸ್ ಬಗ್ಗೆ ಗಮನ ಹರಿಸಲಿದ್ದೀರಿ. ಸ್ನೇಹಿತರು ಹಣಕಾಸಿನ ಸಹಾಯ ಮಾಡಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ.
ಸಿಂಹ : ಕೆಟ್ಟ ಅಭ್ಯಾಸಗಳಿಂದ ದೂರವಿರಿ. ಕುಟುಂಬದವರೊಂದಿಗಿನ ವಾಗ್ವಾದ ತಪ್ಪಿಸಿ. ವಾಹನ ಖರೀಸುವ ಯೋಗವಿದೆ.
ಕನ್ಯಾ : ಸ್ವಾಭಿಮಾನಕ್ಕೆ ಧಕ್ಕೆ ಬರಲಿದೆ. ಸಹೋದ್ಯೋಗಿಗಳ ಮಾತಿಗೆ ಬೆಲೆ ಕೊಡಿ. ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ.
ತುಲಾ : ದೂರ ಪ್ರಯಾಣವನ್ನು ತಪ್ಪಿಸಿ. ಧಿಡೀರ್ ಹಣ ಮಾಡಲು ಪ್ರಯತ್ನಿಸಲಿದ್ದೀರಿ. ಹಾಸ್ಯದ ವಾತಾವರಣ ಸೃಷ್ಟಿಸಲಿದ್ದೀರಿ.
ವೃಶ್ಚಿಕ : ಸಕಾರಾತ್ಮಕ ಆಲೋಚನೆಯಿಂದ ದಿನ ಪ್ರಾರಂಭಿಸಲಿದ್ದೀರಿ. ಹಣಕಾಸಿನ ಲಾಭಗಳು ವಿವಿಧ ಮೂಲಗಳಿಂದ ಬರುತ್ತವೆ. ಉದ್ಯೋಗದಲ್ಲಿ ಬದಲಾವಣೆಗಳು ಕಂಡುಬರುತ್ತವೆ.
ಧನಸ್ಸು : ಕನಸು ನನಸಾಗಲಿದೆ. ಪ್ರಾಮಾಣಿಕವಾಗಿ ಶ್ರಮ ವಹಿಸಿ ಕಾರ್ಯ ಮಾಡಿ. ಆಪ್ತರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ.
ಮಕರ : ದೂರ ಪ್ರಯಾಣಕ್ಕೆ ಯೋಜನೆ ರೂಪಿಸಲಿದ್ದೀರಿ. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿರಲಿವೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ.
ಕುಂಭ : ಹಿರಿಯರ ಆಶೀರ್ವಾದದಿಂದ ಮನಃಶಾಂತಿ ದೊರೆಯಲಿದೆ. ಖರ್ಚು ಅಧಿಕವಾಗಲಿದೆ. ಸ್ವಂತ ನಿರ್ಧಾರದ ಮೇಲೆ ಊಡಿಕೆಗಳನ್ನು ಮಾಡಬಹುದು.
ಮೀನ : ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಲಿದ್ದೀರಿ. ಪಾರ್ಟಿಗಾಗಿ ಹಣ ವ್ಯಯ ಮಾಡಲಿದ್ದೀರಿ. ಸಂಗಾತಿಯ ಮಾತಿನಂತೆ ನಡೆದುಕೊಳ್ಳುವಿರಿ.