ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 51 – 12 : 42
ಅಮೃತ ಘಳಿಗೆ : ಸಂಜೆ 04 : 00 – 05 : 31
ಗುರುವಾರ, 02 ಮೇ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಕೃಷ್ಣ
ತಿಥಿ : ನವಮಿ
ನಕ್ಷತ್ರ : ಧನಿಷ್ಠ
ಯೋಗ : ಶುಕ್ಲ
ಕರಣ : ತೈತಲೆ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 05 : 58
ಸೂರ್ಯಾಸ್ತ : ಸಂಜೆ 06 : 35
ರಾಹುಕಾಲ : 01 : 51 – 03 : 26
ಯಮಗಂಡ ಕಾಲ : 05 : 58 – 07 : 33
ಗುಳಿಕಕಾಲ : 09 : 08 – 10 : 42
ರಾಶಿ ಫಲ
ಮೇಷ : ವ್ಯಾಯಾಮ ಮತ್ತು ಯೋಗವನ್ನು ಜೀವನದ ಒಂದು ಭಾಗವಾಗಿಸಿಕೊಳ್ಳಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಣದ ಹರಿವು ಹೆಚ್ಚಾಗಲಿದೆ.
ವೃಷಭ : ಕುಟುಂಬದ ಸದಸ್ಯರನ್ನು ಆರೋಗ್ಯವಾಗಿಡಲು ನೀವು ಯಶಸ್ವಿಯಾಗುವಿರಿ. ಒಳ್ಳೆಯದನ್ನು ಅನುಭವಿಸುವಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಮಿಥುನ : ಅನೇಕ ರೀತಿಯ ಹೂಡಿಕೆಗಳ ಬಗ್ಗೆ ಮನಸ್ಸು ಆಕರ್ಷಿತವಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ.
ಕಟಕ : ಕುಟುಂಬ ಹಾಗೂ ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳುವಿರಿ. ಮನೆಯಲ್ಲಿ ಅನುಕೂಲಕರ ವಾತಾವರಣವಿರಲಿದೆ. ದೂರ ಪ್ರಯಾಣ ಹೊರಡುವ ಸಾಧ್ಯತೆಗಳಿವೆ.
ಸಿಂಹ : ವಿದೇಶಿ ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಪೋಷಕರಿಂದ ಹೆಚ್ಚಿನ ಪ್ರೀತಿ ದೊರೆಯಲಿದೆ. ಅಹಂಕಾರದ ವರ್ತನೆಯನ್ನು ತಪ್ಪಿಸಿ.
ಕನ್ಯಾ : ಆರೋಗ್ಯದ ಕಡೆ ಕಾಳಜಿ ವಹಿಸಿ. ಹಿರಿಯರೊಂದಿಗೆ ಸಭ್ಯ ವರ್ತನೆ ಇರಲಿ. ಹೆಚ್ಚು ಮಾನಸಿಕ ಒತ್ತಡ ಅನುಭವಿಸಲಿದ್ದೀರಿ.
ತುಲಾ : ಸಣ್ಣ-ಪುಟ್ಟ ಅನಾರೋಗ್ಯದ ಸಮಸ್ಯೆಗಳು ಕಾಡಲಿವೆ. ರಿಯಲ್ ಎಸ್ಟೇಟ್ ಉದ್ಯಮದಿಂದ ಲಾಭ ದೊರೆಯಲಿದೆ. ಮೇಲಾಧಿಕಾರಿಗಳ ಕೋಪಕ್ಕೆ ತುತ್ತಾಗುವಿರಿ.
ವೃಶ್ಚಿಕ : ಸಮಯಕ್ಕೆ ಸರಿಯಾಗಿ ಊಟ ಮಾಡಿ. ಅನೇಕ ವಿಧಾನಗಳ ಮೂಲಕ ಹಣ ಗಳಿಸಲಿದ್ದೀರಿ. ಕುಟುಂಬದ ಸಂಪೂರ್ಣ ಬೆಂಬಲ ದೊರೆಯಲಿದೆ.
ಧನಸ್ಸು : ಮೇಲಾಧಿಕಾರಿಯ ಕೋಪಕ್ಕೆ ತುತ್ತಾಗುವಿರಿ. ಸಾಹಸ ಮನೋಭಾವ ಕಡಿಮೆಯಾಗಲಿದೆ. ಶಾಂತವಾಗಿ ವರ್ತಿಸಿ.
ಮಕರ : ಮಾನಸಿಕ ನೆಮ್ಮದಿ ಕಡಿಮೆಯಾಗಲಿದೆ. ಸ್ವಂತ ಮನೆ ಖರೀದಿಸಲಿದ್ದೀರಿ. ಸಮಯ ವ್ಯರ್ಥ ಮಾಡದೇ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಿ.
ಕುಂಭ : ಸಾಲ ಮಾಡಲಿದ್ದೀರಿ. ನಿಮ್ಮ ಗುರಿಯನ್ನು ಸಾಧಿಸಲು ಮೊದಲಿಗಿಂತಲೂ ಹೆಚ್ಚು ಶ್ರಮ ವಹಿಸಬೇಕಾಗುವುದು. ಪ್ರತಿಯೊಂದು ಕೆಲಸವನ್ನು ಧೈರ್ಯದಿಂದ ನಿರ್ವಹಿಸಿ.
ಮೀನ : ಕುಟುಂಬದ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳಲಿದ್ದೀರಿ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಹೊಸ ಸ್ನೇಹಿತರ ಪರಿಚಯವಾಗಲಿದೆ.