ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿ ಬಸ್, ನಿಲ್ದಾಣದಲ್ಲಿ ಪ್ಯಾನಿಕ್ ಬಟನ್
ಬೆಂಗಳೂರು: ನಿರ್ಭಯಾ ಯೋಜನೆಯಡಿ ಮಹಿಳಾ ಸುರಕ್ಷತೆಯ ವೈಶಿಷ್ಟ್ಯತೆಗಾಗಿ 5,000 ಬಸ್‌ಗಳಲ್ಲಿ ಬಸ್ಸಿನಲ್ಲಿ ಕಣ್ಗಾವಲು(In-bus surveillance)ವ್ಯವಸ್ಥೆ ಮತ್ತು ಬಸ್ ನಿಲ್ಧಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ(PIS) ಯನ್ನು ಪ್ರದರ್ಶಿಸುವ ವ್ಯವಸ್ಥೆಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೊಬೈಲ್ ಅಪ್ಲೀಕೇಶನ್ ನ್ನೊಳಗೊಂಡ ಎವಿಎಲ್ ಎಸ್ (AVLS) ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯಡಿ ಈಗಾಗಲೇ ಘಟಕಗಳಲ್ಲಿನ ಎಲ್ಲಾ ವಾಹನಗಳಲ್ಲಿ ಒಂದು ಎಟಿಡಿ(ATD) ಒಂದು ಪ್ಯಾನಿಕ್ ಬಟನ್ (Panic button), ಒಂದು ಎಂಎನ್ ವಿಆರ್ (MNVR) ಹಾಗೂ ಎರಡು ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿರುತ್ತದೆ. ತಂತ್ರಾಂಶದ ಬಳಕೆಯು ಹಂತ ಹಂತವಾಗಿ ಎಲ್ಲಾ ಘಟಕಗಳಲ್ಲೂ ಪ್ರಾರಂಭವಾಗುತ್ತಿರುತ್ತದೆ.
ಮಹಿಳಾ ಸುರಕ್ಷತೆಯನ್ನು ಪ್ರಧಾನವಾಗಿಟ್ಟುಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿರುತ್ತದೆ. ಅದರಂತೆ, ಬಸ್ಸುಗಳಲ್ಲಿ ಪ್ಯಾನಿಕ್ ಬಟನ್ ಅನ್ನು ಅಳವಡಿಸಲಾಗಿದ್ದು, ಮೊಬೈಲ್ ಆಪ್‌ನಲ್ಲಿ ಎಸ್‌ಓಎಸ್ ಬಟನ್‌ಅನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಇದರಿಂದ ಮಹಿಳಾ ಪ್ರಯಾಣಿಕರು ಬಸ್ಸಿನಲ್ಲಿ ಯಾವುದೇ ಅಹಿತಕರ ಘಟನಗಳ ಸಂದರ್ಭದಲ್ಲಿ ಬಳಸಬಹುದಾಗಿರುತ್ತದೆ.
ಪ್ಯಾನಿಕ್ ಮತ್ತು ಎಸ್ ಓಎಸ್ (SOS) ಎಚ್ಚರಿಕೆ
ಸಿಸಿಸಿ ಆಪರೇಟರ್ ತಂಡವು ಎವಿಎಲ್ ಎಸ್ ಅಪ್ಲಿಕೇಶನ್‌ನಲ್ಲಿ ಪ್ಯಾನಿಕ್ ಎಚ್ಚರಿಕೆ ಮತ್ತು ಪ್ರಯಾಣಿಕರ ಮೊಬೈಲ್ ಎಸ್ ಓಎಸ್ ಎಚ್ಚರಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
ಪ್ಯಾನಿಕ್ ಮತ್ತು ಎಸ್ ಓಎಸ್ ಎಚ್ಚರಿಕೆಯ ಸಂಭಾವ್ಯ ಕಾರಣಗಳು
ಮಹಿಳಾ ಪ್ರಯಾಣಿಕರಿಗೆ ತೊಂದರೆ, ಸಂಕಷ್ಟದಲ್ಲಿರುವ ಮಹಿಳಾ ಪ್ರಯಾಣಿಕರು, ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜಗಳ, ಪ್ರಯಾಣಿಕರ ನಡುವೆ ಜಗಳ, ಪ್ರಯಾಣಿಕರಿಗೆ ಯಾವುದೇ ತೊಂದರೆ, ಅಧಿಕಾರಿಗಳಿಂದ ಆಡಿಟಿಂಗ್/ಪರಿಶೀಲನೆ ಮಾಡಲಾಗುವುದು.
ಪ್ಯಾನಿಕ್ ಬಟನ್ ಅಥವಾ ಎಸ್‌ಓಎಸ್ ಬಟನ್‌ಅನ್ನು ಪ್ರಯಾಣಿಕರು ಬಳಸಿದಲ್ಲಿ/ಒತ್ತಿದಲ್ಲಿ ನಿಯಂತ್ರಣ ಕೊಠಡಿರವರು ಅನುಸರಿಸಬೇಕಾದ ಎಸ್ ಓಪಿಯು ಈ ಕೆಳಗಿನಂತಿರುತ್ತದೆ.
ಪ್ರಯಾಣಿಕರು ಎಸ್‌ಓಎಸ್/ಪ್ಯಾನಿಕ್ ಬಟನ್ ಪ್ರೆಸ್ ಮಾಡಿದಲ್ಲಿ, ಸ್ವಯಂಚಾಲಿತ ಅಲರ್ಟ್ ನಿಯಂತ್ರಣ ಕೊಠಡಿಗೆ ಹಾಗೂ ಕಂಟ್ರೋಲ್ ರೂಂನಿಂದ ನೀಡಲಾದ ಮೊಬೈಲ್ ನಂಬರ್‌ಗಳಿಗೆ ಇಂಟಿಗ್ರೇಟ್ ಮಾಡಿದ್ದು, ಸದರಿ ಮೊಬೈಲ್ ಸಂಖ್ಯೆಗೆ ಅಲರ್ಟ್ ಬರುತ್ತದೆ.
ನಿಯಂತ್ರಣ ಕೊಠಡಿ ರವರು ಅಲರ್ಟ್ ಬಂದಂತಹ ವಾಹನದ ಚಾಲನಾ ಸಿಬ್ಬಂದಿಗಳನ್ನು ಸಂಪರ್ಕಿಸುವುದು ಹಾಗೂ ಅಲ್ಲಿನ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಳ್ಳುವುದು.
ಅಲರ್ಟ್‌ನ ಸತ್ಯಾಸತ್ಯಾತೆ
ಅಲರ್ಟ್‌ನ ಸತ್ಯಾಸತ್ಯಾತೆಯ ಬಗ್ಗೆ ತಿಳಿದು, ಒಂದು ವೇಳೆ ಅಲರ್ಟ್ ಬಂದಿರುವುದ ನಿಜವಾದ ಕಾರಣವೇನು ಎಂಬುದು ತಿಳಿದು ಬಂದಲ್ಲಿ ನಿಯಂತ್ರಣ ಕೊಠಡಿಯವರು ಅಲರ್ಟ್ ಬಂದಂತಹ ವಾಹನವನ್ನು ಟ್ರಾಕ್ ಮಾಡುವುದು ಹಾಗೂ ಸದರಿ ಮಾಹಿತಿಯನ್ನು ಹತ್ತಿರದ ಸಾರಥಿ ವಾಹನಗಳು ಆ ಸ್ಥಳವನ್ನು ತಲುಪಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸುವುದು.
ಪ್ಯಾನಿಕ್ ಬಟನ್ ಅಥವಾ ಎಸ್‌ಓಎಸ್ ಬಟನ್‌ಅನ್ನು ಪ್ರಯಾಣಿಕರು ಬಳಸಿದಲ್ಲಿ ಸಾರಥಿ ಶಾಖೆಯವರು ಅನುಸರಿಸಬೇಕಾದ ಎಸ್ಓಪಿಯು ಈ ಕೆಳಗಿನಂತಿರುತ್ತದೆ.
ಪ್ರಯಾಣಿಕರು ಎಸ್‌ಓಎಸ್/ಪ್ಯಾನಿಕ್ ಬಟನ್ ಪ್ರೆಸ್ ಮಾಡಿದಲ್ಲಿ, ಸ್ವಯಂಚಾಲಿತ ಅಲರ್ಟ್ ಹತ್ತಿರದ ಸಾರಥಿ ವಾಹನಗಳಿಗೆ ರವಾನಿಸಲಾಗುವುದು.
ಸಾರಥಿ ಸಿಬ್ಬಂದಿಗಳು ಅಲರ್ಟ್ ಬಂದಂತಹ ವಾಹನದ ಚಾಲನಾ ಸಿಬ್ಬಂದಿಗಳನ್ನು ಸಂಪರ್ಕಿಸುವುದು ಹಾಗೂ ಅಲ್ಲಿನ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಳ್ಳುವುದು.
ವಾಹನವನ್ನು ಟ್ರಾಕ್ ಮಾಡುವುದು
ಅಲರ್ಟ್ ಸತ್ಯಾಸತ್ಯಾತೆಯ ಬಗ್ಗೆ ತಿಳಿದು, ಸಾರಥಿ ಸಿಬ್ಬಂದಿಗಳು ಸದರಿ ವಾಹನವನ್ನು ಟ್ರಾಕ್ ಮಾಡುವುದು ಹಾಗೂ ಸದರಿ ಸ್ಥಳವನ್ನು ತಲುಪುವುದು.
ಸದರಿ ಸ್ಥಳವನ್ನು ತಲುಪಿ ಅಲ್ಲಿನ ಪರಿಸ್ಥಿಯನ್ನು ಅವಲೋಕಿಸಿ, ತಕ್ಷಣ ಕಾರ್ಯ ತತ್ಪರರಾಗುವುದು ಹಾಗೂ ಸದರಿ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು.
ಅವಶ್ಯಕತೆ ಬಂದಲ್ಲಿ, ತಕ್ಷಣವೇ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿಯನ್ನು ತಲುಪಿಸಿ, ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವುದು. ಇಂತಹ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.