ಉದ್ಯಮಿಗಳ ನಿಯೋಗಕ್ಕೆ ಸಚಿವ ಎಂ. ಬಿ. ಪಾಟೀಲ ಭರವಸೆ
ಬೆಳಗಾವಿ: ಇಲ್ಲಿನ ಹೊರವಲಯದಲ್ಲಿ ಇರುವ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಇದುವರೆಗೂ ಖಾತಾ ಪಡೆಯದೆ ಇರುವ ಉದ್ಯಮಿಗಳು ಅರ್ಜಿ ಸಲ್ಲಿಸಿದರೆ, ಮುಂದಿನ 31 ದಿನಗಳಲ್ಲಿ ಖಾತಾ ಮಾಡಿಸಿ ಕೊಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಗುರುವಾರ ಇಲ್ಲಿನ ಸುವರ್ಣ ಸೌಧದಲ್ಲಿ ಉತ್ತರ ಬೆಳಗಾವಿ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳ ಜತೆ ವಿವಿಧ ಸಮಸ್ಯೆಗಳನ್ನು ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 233 ಉದ್ಯಮಗಳು ಇವೆ. ಇವುಗಳ ಪೈಕಿ 202ಕ್ಕೆ ಸೇಲ್ ಡೀಡ್ ಆಗಿದ್ದು, 131 ಉದ್ಯಮಿಗಳಿಗೆ ಮಾತ್ರ ಖಾತಾ ಸಿಕ್ಕಿದೆ. ಉಳಿದ ಉದ್ಯಮಗಳಿಗೂ ಖಾತೆ ಸೌಲಭ್ಯ ಮಾಡಿಕೊಡಬೇಕು ಎಂದು ಉದ್ಯಮಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಚಿವರು ಈ ಭರವಸೆ ನೀಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಸಮಸ್ಯೆಗಳು ಬಹುಕಾಲದಿಂದ ನನೆಗುದಿಗೆ ಬಿದ್ದಿವೆ. ಖಾತೆ ಸೌಲಭ್ಯ ಗ್ರಾಮ ಪಂಚಾಯತಿ ಮೂಲಕ ಆಗಬೇಕು ಎಂದು ಹೇಳಿದರು.
2 ಲಕ್ಷ ರೂ.ವರೆಗೆ ಕೃಷಿ ಸಾಲ ಮನ್ನಾ ಮಾಡಲು ಆಗ್ರಹ
2017ರಿಂದ ಆಸ್ತಿ ತೆರಿಗೆ ವಸೂಲಿ ಕ್ರಮ
ಕೈಗಾರಿಕಾ ಬಡಾವಣೆಯಲ್ಲಿನ ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ಹಲವು ವರ್ಷಗಳಿಂದ ವಸೂಲಿ ಮಾಡಿಲ್ಲ. ಹೀಗಾಗಿ ಮಾರ್ಗದರ್ಶಿ ಬೆಲೆ ಅನ್ವಯವಾದ 2017ರಿಂದ ಆಸ್ತಿ ತೆರಿಗೆ ವಸೂಲಿ ಮಾಡಲು ತೀರ್ಮಾನಿಸಲಾಯಿತು. ಇದಕ್ಕೆ ಎಲ್ಲ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ ಎಂದರು.
ಹೊನಗಾದಲ್ಲಿ ಇರುವ ಕ್ಯಾಂಟೀನ್ ಕಟ್ಟಡವನ್ನು ಆಡಳಿತ ಕಚೇರಿ ಆರಂಭಿಸಲು ನಿಯೋಗವು ಕೇಳಿದೆ. ಸರಕಾರವು ಇದಕ್ಕೆ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ನುಡಿದರು.
ರಾಜ್ಯದ ಹೊಸ ವಿವಿಗಳಿಗೆ ಮೂಲ ಸೌಕರ್ಯ
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಅಜಿತ್ ಪಾಟೀಲ, ನಾಗೇಂದ್ರ ಇದ್ದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಕೈಗಾರಿಕಾ ಇಲಾಖೆ ನಿರ್ದೇಶಕ ರಮೇಶ ಉಪಸ್ಥಿತರಿದ್ದರು.