Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, September 6, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ರೈತರ ಸಾಲದ ಮರುಪಾವತಿ 2025ರ ಜನವರಿ ವರೆಗೆ ವಿಸ್ತರಿಸಿ

by admin December 7, 2023
written by admin December 7, 2023 0 comments 3 minutes read
3FacebookTwitterPinterestEmail
291
ಒಂದು ವರ್ಷದ ಬಡ್ಡಿ ಸರ್ಕಾರವೇ ತುಂಬಲು ಶಾಸಕ ಜಿ.ಟಿ.ದೇವೇಗೌಡ ಆಗ್ರಹ

ಬೆಳಗಾವಿ: ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ರೈತರ ಸಾಲವನ್ನು ಮನ್ನಾ ಮಾಡಿ ಇಲ್ಲವೇ 2025 ರ ಜನವರಿ ವರೆಗೆ ಸಾಲದ ಮರುಪಾವತಿಯನ್ನು ವಿಸ್ತರಿಸಬೇಕು. ಒಂದು ವರ್ಷದ ಬಡ್ಡಿಯನ್ನು ಸರ್ಕಾರವೇ ತುಂಬುವಂತೆ ಶಾಸಕ ಹಾಗೂ ಮಾಜಿ ಸಚಿವ ಜಿ ಟಿ ದೇವೇಗೌಡ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ರೈತರು ಸಕಾಲಕ್ಕೆ ಮರುಪಾವತಿ ಮಾಡದೇ ಹೋದರೆ ಆ ವರ್ಷದ ಪೂರ್ತಿ ಬಡ್ಡಿಯನ್ನು ಕಟ್ಟಬೇಕಾಗಿರುವುದರಿಂದ ರೈತರು ಬೆಳೆ ಇಲ್ಲದೆ, ಸಾಲವನ್ನು ಮರುಪಾವತಿ ಮಾಡಲಾಗದೆ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದರು.

ವಿಧಾಸಭೆಯಲ್ಲಿ ನಡೆದ ಬರಗಾಲದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಅವರು ಜೂನ್ ಕೊನೆ ವಾರದಲ್ಲಿ ಸ್ವಲ್ಪ ಮಳೆ ಬಂತು ಉತ್ತರ ಕರ್ನಾಟಕ ಭಾಗದ ರೈತರು ತೊಗರಿ, ಹೆಸರು, ಉದ್ದು, ಹಲಸಂದೆ ಬಿತ್ತನೆ ಮಾಡಿದರು. ಬಿತ್ತನೆ ಸಮಯಕ್ಕೆ ಬೇಕಾದ ಬಿತ್ತನೆ ಬೀಜ, ಗೊಬ್ಬರವನ್ನು ಸರ್ಕಾರ ನೀಡಲಿಲ್ಲ. ಈ ಮಳೆಯೂ ಬಾರದೆ ಮೊಳಕೆ ಬಂದು ಎಲ್ಲಾ ಬೆಳೆಗಳು ಸಂಪೂರ್ಣ ನಾಶವಾಯಿತು ಎಂದು ಹೇಳಿದರು.

ಯಾವ ಸಚಿವರು ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶದ ಬಗ್ಗೆ ವಿಚಾರಿಸಲಿಲ್ಲ

ಸರ್ಕಾರದ ಯಾವ ಸಚಿವರು ಕೂಡ ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶವಾದ ಬಗ್ಗೆ ವಿಚಾರಿಸಲಿಲ್ಲ. ರೈತರಿಗೆ ಆತ್ಮಸ್ಥೈರ್ಯದ ಮಾತುಗಳಾಡಲಿಲ್ಲ, ನಿಮ್ಮ ಗಮನ ಏನಿದ್ದರೂ ಐದು ಗ್ಯಾರಂಟೀ ಹಣ ಹೊಂದಿಸುವುದು  ಮತ್ತು ಪಂಚಾರಾಜ್ಯ ಚುನಾವಣೆ ಕಡೆ ಗಮನ ಕೊಟ್ಟು ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವವನ್ನು ತರಾಟೆಗೆ ತೆಗೆದುಕೊಂಡರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 4 ಸಾವಿರ ರೂ. ಸೇರಿ ಒಟ್ಟಾರೆ ರೈತರಿಗೆ 10 ಸಾವಿರ ರೂ. ನೀಡುತ್ತಿದ್ದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 4 ಸಾವಿರ ಕೊಡುವುದನ್ನು ನಿಲ್ಲಿಸಲಾಗಿದೆ.

ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ಭಾಗಶಃ ಪ್ರಯತ್ನ

ಮೊದಲ್ಲಿದ್ದ ಸರ್ಕಾರಗಳು ಬರ ಪರಿಹಾರ ಎಂದು ಖರ್ಚು ಮಾಡಿ ಆಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದವು.  ಆದರೆ, ಈ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ, ಕೇಂದ್ರ ಸರ್ಕಾರ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುತ್ತಿರಿ. ಬಾಯಿಗೆ ಬಂದಂಗೆ ಮಾತಾಡುತ್ತೀರಿ, ಇವೆಲ್ಲವನ್ನೂ ನೋಡಿ ಅವರು ಹೇಗೆ ತಾನೇ ಸಹಾಯ ಮಾಡುತ್ತಾರೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡರೆ ಅವರು ಸಹಾಯ ಮಾಡುತ್ತಾರೆ. ಇನ್ನಾದರೂ ರಾಜ್ಯದ ರೈತರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲದ ಮಿತಿಯನ್ನು  3 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿ ಆದೇಶ ಹೊರಡಿಸಿದ್ದೀರಿ. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.

ತಿಂಗಳಲ್ಲಿ ಕೈಗಾರಿಕೆಗೆ ಖಾತೆ

ಹಿಂದೆ ಇದ್ದ ಸರ್ಕಾರಗಳು ರೈತರಿಗೆ 7 ಗಂಟೆ ವಿದ್ಯುತ್ ನೀಡುತ್ತಿದ್ದವು. ಆದರೆ ಈಗ 3 ರಿಂದ 4 ಘಂಟೆ ನೀಡುತ್ತಿಲ್ಲ, 5 ಘಂಟೆ ನೀಡುತ್ತೇವೆ ಎಂದು ಹೇಳಿದ್ದಿರಿ. ಅದನ್ನು ಸಹ ನೀಡಲಿಲ್ಲ, ರಾಜ್ಯದ ಎಲ್ಲಾ ಕಡೆ ರೈತರು ಪ್ರತಿಭಟನೆ ಮಾಡಿದರು. ನಂತರ 7 ಘಂಟೆ ನೀಡುವುದಾಗಿ ಘೋಷಣೆ ಮಾಡಿದ್ದೀರಿ. ಒಂದು ಕಡೆ ಬೆಳಿಗ್ಗೆ 3 ಘಂಟೆ, ರಾತ್ರಿ 4 ಘಂಟೆ ನೀಡುತ್ತೇವೆ ಎಂದು ಹೇಳುತ್ತೀರಿ; ಮತ್ತೊಂದು ಕಡೆ ಬೆಳಿಗ್ಗೆ ಸಮಯದಲ್ಲೇ 7 ಘಂಟೆ ನೀಡುತ್ತೇವೆ ಎಂದು ಹೇಳುತ್ತೀರಿ ಅದನ್ನು ಸಹ ಸರಿಯಾಗಿ ಪೂರೈಸುತ್ತಿಲ್ಲಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ1,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ

ಇಂಧನ ಸಚಿವರೇ ರಾಜ್ಯದಲ್ಲಿ1,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇರುವುದನ್ನು ಹೇಳಿದ್ದಾರೆ. ಸೆಂಟ್ರಲ್ ಗ್ರೀಡ್ ನಲ್ಲಿ ವಿದ್ಯುತ್ ಲಭ್ಯವಿದೆ. ಆದರೆ ಫ್ರೀಯಾಗಿ ಸಿಗುವುದ್ದಿಲ್ಲ, ದುಡ್ಡು ಕೊಟ್ಟು ಖರೀದಿ ಮಾಡಬೇಕು. ಖರೀದಿಗೆ ನಿಮ್ಮಲ್ಲಿ ದುಡ್ಡಿಲ್ಲ. ಈ ಕಡೆ ವಿದ್ಯುತ್ ಇಲ್ಲ, ಇನ್ನೆಲ್ಲಿ ವಿದ್ಯುತ್ ಪೋರೈಸುತ್ತಿರಿ ಎಂದು ದೇವೇಗೌಡ ತರಾಟೆಗೆ ತೆಗೆದುಕೊಂಡರು.

ನನ್ನ ಮತ ಕ್ಷೇತ್ರದ ಚಿಕ್ಕಾನ್ಯ, ದೊಡ್ಡಕನ್ಯಾ, ದೂರ ಮತ್ತು ಎಡಹಳ್ಳಿ ಗ್ರಾಮಗಳ ಭಾಗಗಳಲ್ಲಿ ಹುಲಿ, ಚಿರತೆಗಳ ಹಾವಳಿಯಾಗಿದ್ದು, ಆ ಭಾಗದ ಜನರು ನಮಗೆ ಬೇರೆ ಏನು ಬೇಡ ಕರೆಂಟ್ ಕೊಡಿ, ರಾತ್ರಿ ತಿರುಗಾಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ರಾಜ್ಯದ ರೈತರು ಹಾಗೂ ಜನರು ವಿದ್ಯುತ್ ಕೊರತೆ ಇಂದ ಅನುಭವಿಸುತ್ತಿರುವ ತೊಂದರೆಯನ್ನು ಸದನಕ್ಕೆ ತಿಳಿಸಿದರು.

ರೈತರ ಯಾವ ಕಷ್ಟಕ್ಕೂ ನೀವು ಎ ಟಿ ಎಂ ಆಗಲ್ಲಿಲ್ಲ

ಮೊದಲು 20 ಸಾವಿರ ಪಾವತಿಸಿದರೆ ಸಾಕು ರೈತರ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್, ಕಂಬ, ವೈರ್ ಎಲ್ಲವನ್ನು ನೀಡುತ್ತಿದ್ದರು. ಆದರೆ ಈಗ 100 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 2.5 ಲಕ್ಷ ಖರ್ಚಾಗುತ್ತದೆ. 63 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 1.15 ಲಕ್ಷ ಖರ್ಚಾಗುತ್ತದೆ. 25 ಕೆ ವಿ ಟ್ರಾನ್ಸ್ ಫಾರ್ಮರ್ ಹಾಕಿಸಲು 80 ಸಾವಿರ ಖರ್ಚಾಗುತ್ತದೆ. 1 ಕಿಲೋ ಮೀಟರ್ ವೈರ್ ಗೆ 60 ಸಾವಿರ ವೆಚ್ಚವಾಗುತ್ತಿರುವುದರಿಂದ, ಈ ಹಿಂದಿನ ಸರ್ಕಾರಗಳು ನೀಡುತ್ತಿದ್ದ ದರದಲ್ಲೇ ನೀಡಲು ಕ್ರಮಕೈಗೊಳ್ಳುವಂತೆ  ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಹೈ ಕಮಾಂಡ್ ಗೆ ಎ ಟಿ ಎಂ ಹೇಳಿದ್ದರು. ಅದರಂತೆ ನೀವು ಹೈ ಕಮಾಂಡ್ ಗೆ, ಐದು ಗ್ಯಾರಂಟಿಗಳಿಗೆ ಹಾಗೂ ಪಂಚ ರಾಜ್ಯ ಚುನಾವಣೆಗಳಿಗೆ ಎ ಟಿ ಎಂ ಆದ್ರಿ. ಆದರೆ, ರೈತರ ಯಾವ ಕಷ್ಟಕ್ಕೂ ನೀವು ಎ ಟಿ ಎಂ ಆಗಲ್ಲಿಲ್ಲ ಎಂದು ಸರ್ಕಾರದ ನಡೆ ವಿರುದ್ದ ಚಾಟಿ ಬೀಸಿದರು…

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
demandedextendedFarmers loang-t-deve-gowdaGovernmentjanuary-2025one-yearpayinterestrepayment
3 FacebookTwitterPinterestEmail
admin

previous post
ತಿಂಗಳಲ್ಲಿ ಕೈಗಾರಿಕೆಗೆ ಖಾತೆ
next post
ಬಿಜೆಪಿಯವರು ಕೇಂದ್ರದಿಂದ ಪರಿಹಾರ ತರಲಿ

You may also like

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026

ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

September 4, 2026

ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

September 4, 2026

ಸೆ.21ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ

September 3, 2026

ಸಚಿವ ಜಮೀರ್ ಅಹಮದ್ ತಲೆದಂಡ ಸನ್ನಿಹಿತ !

September 2, 2026

ಶಿವಕುಮಾರ್ ಸರ್ಕಾರ ಕಿತ್ತೊಗೆಯುಲು ಬಿಜೆಪಿ ಶಪಥ

September 1, 2026

‘ಇವರಲ್ಲಿ ಯಾರಿಗೆ ಕೊಕ್ , ನೀವೇ ನಿರ್ಧರಿಸಿ ಡಿಕೆಶಿ’

August 31, 2026

ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪಾದಯಾತ್ರೆ

August 29, 2026

ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

August 28, 2026

ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

August 27, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (559)
  • ಅಂಕಣ (109)
  • ಉದ್ಯೋಗ (346)
  • ದಿನ ಭವಿಷ್ಯ (110)
  • ರಾಜಕೀಯ (2,052)
  • ರಾಜ್ಯ (2,367)
  • ರಾಷ್ಟ್ರ (2,332)
  • ವಿಶ್ಲೇಷಣೆ (202)
  • ಶಿಕ್ಷಣ (408)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026

KMS Special

  • ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

    September 5, 2026
  • ಪ್ರಾಸಿಕ್ಯೂಷನ್ ಪಟ್ಟಿಯಲ್ಲಿ ಪ್ರತಿಪಕ್ಷದವರ ಹೆಸರು ಇದೆ

    September 4, 2026
  • ಕೃಷಿ ಸಾಲ ಮನ್ನಾ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ

    September 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5 ಉದ್ಯೋಗ ಮೀಸಲು

September 5, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ