ದಾಖಲಾತಿ ಪರಿಶೀಲನೆ ಡಿಸೆಂಬರ್ 28ರವರೆಗೆ
ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿನ ಹುದ್ದೆಗಳ ಸಂಖ್ಯೆಯನ್ನು 300 ಕ್ಕೆ ಸೀಮಿತಗೊಳಿಸಿ ಹುದ್ದೆಗಳ ವರ್ಗೀಕರಣವನ್ನು ಪ್ರಕಟಿಸಲಾಗಿದೆ.
ಅಧಿಸೂಚನೆಯ ಕ್ರ.ಸಂ. VII ರಲ್ಲಿ ತಿಳಿಸಿರುವ ಆಯ್ಕೆ ವಿಧಾನದಂತೆ ದಿನಾಂಕ: 02-02-2020 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಟ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ದಿನಾಂಕ : 26-12-2023 ರಿಂದ ದಿ: 28-12-2023 ರವರೆಗೆ 9.30 ರಿಂದ ಕರಾರಸಾ ನಿಗಮದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ದಾಖಲಾತಿ/ ದೇಹದಾರ್ಡ್ಯತೆ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಅರ್ಹ ಅಭ್ಯರ್ಥಿಗಳು ದಿನಾಂಕ: 18-12-2023 ರ ಮಧ್ಯಾಹ್ನ 1ಗಂಟೆಯ ನಂತರ ಕರೆಪತ್ರ ಡೌನ್-ಲೋಡ್ ಮಾಡಿಕೊಳ್ಳಲು ಈಗಾಗಲೇ ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಮೂಲಕ ತಿಳಿಸಲಾಗಿದೆ.
ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.com ರಲ್ಲಿ ಕರೆಪತ್ರವನ್ನು ಡೌನ್-ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ನಮೂದಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕದಂದು ದಾಖಲಾತಿ / ದೇಹದಾರ್ಡ್ಯತೆ ಪರಿಶೀಲನೆಗೆ ತಪ್ಪದೇ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಬಂಧ ತಾತ್ಕಾಲಿಕವಾಗಿ ರಚಿಸಲಾಗಿರುವ ಕರಾರಸಾ ನಿಗಮದ Help desk ದೂರವಾಣಿ ಸಂ.080 22221321-321, 7760990061, 7760990044 ಮತ್ತು 7760981930 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಗ್ಯಾಸ್ಟ್ರಬಲ್ ಗೆ ಜೀರಿಗೆ ಕಾಳು ಪರಿಹಾರ
ವಿಶೇಷ ಸೂಚನೆ
ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ಹಾಗೂ ಸಂದರ್ಶನಕ್ಕೆ ಅಂಕಗಳು ಇರುವುದಿಲ್ಲ. ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡವಾರು ಅಂಕ ಹಾಗೂ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ / ಮೀಸಲಾತಿ ನಿಯಮಗಳ ಆಧಾರದ ಮೇಲೆ ನೇಮಕಾತಿ ಮಾಡುವುದರಿಂದ ಯಾವುದೇ ಶಿಫಾರಸ್ಸು, ಪ್ರಭಾವ ಹಾಗೂ ಅಮಿಷ/ಅವ್ಯವಹಾರಗಳಿಗೆ ಒಳಗಾಗಬಾರದೆಂದು ನಿಗಮ ಸ್ಪಷ್ಟಪಡಿಸಿದೆ.