ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 : 11 – 12 : 57
ಅಮೃತ ಘಳಿಗೆ: 02 : 17 – 03 : 42
ಕಿರು ಪಂಚಾಂಗ
ಶುಕ್ರವಾರ, 09 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ದಿನ ವಿಶೇಷ :ಅಮವಾಸ್ಯೆ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ಚತುರ್ದಶಿ/ ಅಮವಾಸ್ಯೆ
ನಕ್ಷತ್ರ : ಶ್ರವಣ
ಯೋಗ : ವ್ಯತೀಪಾತ
ಕರಣ : ಶಕುನಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 44
ಸೂರ್ಯಾಸ್ತ : ಸಂಜೆ 06 : 23
ರಾಹುಕಾಲ : 11: 06 – 12: 34
ಯಮಗಂಡ ಕಾಲ : 03 : 29 – 04 : 56
ಗುಳಿಕಕಾಲ : 08 : 12 – 09 : 39
ರಾಶಿ ಫಲ
ಮೇಷ : ಒತ್ತಡದ ದಿನ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವರು. ಉದ್ಯೋಗದ ಸ್ಥಳದಲ್ಲಿ ಅನುಕೂಲಕರ ವಾತಾವರಣ.
ವೃಷಭ : ಯಾರ ಬಳಿಯೂ ವಾದಿಸುವುದು ಒಳ್ಳಿತಲ್ಲ. ಅನ್ಯರ ವಿಚಾರಕ್ಕೆ ಸಮಯ ವ್ಯರ್ಥ ಮಾಡಬೇಡಿ. ಸಹೋದ್ಯೋಗಿಗಳಿಂದ ಸಹಾಯ ಪಡೆಯುತ್ತೀರಿ.
ಮಿಥುನ : ಉದಾಸೀನ ಮನಃಸ್ಥಿತಿ ಇರುತ್ತದೆ. ಪ್ರೇಮಿಗಳಲ್ಲಿ ವಿರಸ ತಲೆದೋರಬಹುದು. ಹಿಂಜರಿಕೆಯ ಮನೋಭಾವದಿಂದ ಬಳಲುತ್ತೀರಿ.
ಕಟಕ : ನಿಮ್ಮ ಮಾತನ್ನು ಎಲ್ಲರೂ ಆಲಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೆ ಹೆಚ್ಚು ಗಮನ ಹರಿಸುತ್ತೀರಿ. ಕುಟುಂಬದಲ್ಲಿ ಸಂತೋಷಕರ ವಾತಾವರಣ ಇರಲಿದೆ.
ಸಿಂಹ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲಬಹುದು. ಕಾನೂನಾತ್ಮಕ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಕನ್ಯಾ : ಆತ್ಮ ಸ್ಥೈರ್ಯ ಹೆಚ್ಚಲಿದೆ. ಮಕ್ಕಳ ವರ್ತನೆ ಬಗ್ಗೆ ಎಚ್ಚರವಿರಲಿ. ದಾಂಪತ್ಯದಲ್ಲಿ ವಿರಸ.
ತುಲಾ : ಉದ್ಯೋಗ ಸ್ಥಳದಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭ ಸಮಾಚಾರ. ವ್ಯಾಪಾರದಲ್ಲಿ ಲಾಭಾಂಶ ಕಂಡುಬರುವುದು.
ವೃಶ್ಚಿಕ : ಹೊಸ ಉದ್ಯೋಗ ಪ್ರಾರಂಭಿಸಬಹುದು. ರುಚಿಕರ ಆಹಾರ ಸೇವಿಸುವಿರಿ. ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.
ಧನಸ್ಸು : ಅನ್ಯರೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಹಿರಿಯರ ಸಲಹೆಯನ್ನು ಪಡೆಯಿರಿ. ಶೀತ ಸಂಬಂಧಿ ಸಮಸ್ಯೆಗಳು ಕಾಡಬಹುದು.
ಮಕರ : ಕುಟುಂಬದಲ್ಲಿ ಸಂತೋಷಕರ ವಾತಾವರಣ. ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿದೆ. ಸ್ಥಗಿತ ಕೆಲಸಗಳನ್ನು ಪೂರ್ಣಗೊಳಿಸುವಿರಿ.
ಕುಂಭ : ಕೋಪವನ್ನು ನಿಯಂತ್ರಿಸಿ. ಭಾವನಾತ್ಮಕವಾಗಿ ಮೋಸ ಹೋಗದಿರಿ. ದೈಹಿಕ ಅನಾರೋಗ್ಯಕ್ಕೆ ತುತ್ತಾಗಬಹುದು.
ಮೀನ : ಕುಟುಂಬದಲ್ಲಿ ಸಂತಸಕರ ವಾತಾವರಣ. ಹಿರಿಯರ ಆಶೀರ್ವಾದ ಪಡೆಯಿರಿ, ಮಕ್ಕಳಿಂದ ಸಂತೋಷ ಹೆಚ್ಚಲಿದೆ.