ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 08 – 12 : 56
ಗುರುವಾರ, 29 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಪಂಚಮಿ
ನಕ್ಷತ್ರ : ಚಿತ್ತ
ಯೋಗ : ವೃದ್ಧಿ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 36
ಸೂರ್ಯಾಸ್ತ : ಸಂಜೆ 06 : 28
ರಾಹುಕಾಲ : 02: 01 – 03: 30
ಯಮಗಂಡ ಕಾಲ : 06 : 36– 08: 05
ಗುಳಿಕಕಾಲ : 09 : 34 – 11: 03
ರಾಶಿ ಫಲ
ಮೇಷ : ಕೌಟುಂಬಿಕ ಸೌಖ್ಯ. ಉದ್ಯೋಗದಲ್ಲಿ ಬಡ್ತಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಲಿದೆ.
ವೃಷಭ : ಸಾಲವನ್ನು ಮರು ಪಾವತಿಸುವಿರಿ. ವ್ಯಾಪಾರದಲ್ಲಿ ಅಭಿವೃದ್ಧಿ. ತತ್ವಜ್ಞಾನಿಗಳಂತೆ ವರ್ತಿಸುತ್ತೀರಿ.
ಮಿಥುನ : ಆತ್ಮೀಯರೊಂದಿಗೆ ಜಗಳವಾಗುವ ಸಾಧ್ಯತೆ. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ದುಶ್ಚಟಗಳಿಂದ ದೂರವಿರಿ.
ಕಟಕ : ಆದಾಯದ ಮೂಲಗಳು ವೃದ್ಧಿಸಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಖರ್ಚಿನ ಮೇಲೆ ಹಿಡಿತವಿರಲಿ.
ಸಿಂಹ : ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ವ್ಯಾಪಾರದಲ್ಲಿ ಅಭಿವೃದ್ಧಿ. ಬಾಕಿಯ ಹಣ ವಸೂಲಿಯಾಗಲಿದೆ.
ಕನ್ಯಾ : ಬೆಲೆ ಬಾಳುವ ವಸ್ತುಗಳು ಕಳುವಾಗುವ ಸಾಧ್ಯತೆ. ಅಮೂಲ್ಯದ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ : ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಿರಿಯರ ಆಶೀರ್ವಾದ ಪಡೆಯಿರಿ. ಕೆಲಸದಲ್ಲಿ ಲಾಭವುಂಟು.
ವೃಶ್ಚಿಕ : ಏಕಾಗ್ರತೆಯ ಕೊರತೆ ಕಂಡುಬರಲಿದೆ. ದೂರ ಪ್ರಯಾಣ ಸಂಭವ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಧನಸ್ಸು : ವ್ಯಾಪಾರದಲ್ಲಿ ಲಾಭಾಂಶ ವೃದ್ಧಿಯಾಗಲಿದೆ. ನಿಮ್ಮ ಸಲಹೆಗಳಿಗೆ ಬೆಲೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಮಕರ : ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗಲಿವೆ. ನಿಮ್ಮ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.
ಕುಂಭ : ಮೇಲಾಧಿಕಾರಿಯೊಂದಿಗಿನ ಬಾಂಧವ್ಯ ಉತ್ತಮವಾಗಲಿದೆ. ಆಸ್ತಿ ಖರೀದಿಸಬಹುದು. ಕುಟುಂಬದೊಂದಿಗೆ ಸಮಯ ಕಳೆಯುವಿರಿ.
ಮೀನ : ವ್ಯಾಪಾರದಲ್ಲಿ ನಷ್ಟ ಸಂಭವ. ಮಕ್ಕಳ ಚಟುವಟಿಕೆ ಮೇಲೆ ಗಮನವಿರಲಿ. ಸಹೋದ್ಯೋಗಿಗಳಿಂದ ತೊಂದರೆ ಎದುರಾಗಲಿದೆ.
