ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 06 – 12 : 54
ದಿನ ವಿಶೇಷ : ಮಹಾಶಿವರಾತ್ರಿ/ ಪ್ರದೋಷ
ಶುಕ್ರವಾರ, 8 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ತ್ರಯೋದಶಿ
ನಕ್ಷತ್ರ : ಶ್ರವಣ
ಯೋಗ : ಶಿವ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 31
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 11 : 01 – 12 : 30
ಯಮಗಂಡ ಕಾಲ : 03 : 30 – 05 : 00
ಗುಳಿಕಕಾಲ : 08 : 01 – 09 : 31
ರಾಶಿ ಫಲ
ಮೇಷ : ತಾಳ್ಮೆಯಿಂದ ವ್ಯವಹರಿಸಿ. ಸಾಲವನ್ನು ಮರು ಪಾವತಿಸುವಿರಿ. ಮನೆಯ ವಾತಾವರಣ ಸಮಾಧಾನ ತರುವುದು.
ವೃಷಭ : ಭವಿಷ್ಯದ ಯೋಜನೆ ರೂಪಿಸುವಿರಿ. ದೇವಾಲಯಗಳಿಗೆ ಭೇಟಿ ನೀಡಬಹುದು. ಹೊಸ ಕೋರ್ಸ್ ಗಳಿಗೆ ಸೇರುವ ಸಾಧ್ಯತೆಯುಂಟು.
ಮಿಥುನ : ಅಪರಿಚಿತರನ್ನು ನಂಬದಿರಿ. ಅತಿಯಾದ ಆಲೋಚನೆಯಿಂದ ಗೊಂದಲಕ್ಕೆ ಒಳಗಾಗುವಿರಿ. ಖರ್ಚಿನ ಮೇಲೆ ಹಿಡಿತವಿರಲಿ.
ಕಟಕ : ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಲಾಭವುಂಟು. ಶಿಸ್ತುಬದ್ಧ ಜೀವನ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದು.
ಸಿಂಹ : ಖರ್ಚು ಅಧಿಕವಾಗಲಿದೆ. ಆತುರದಲ್ಲಿ ಕೈಗೊಳ್ಳುವ ಕಾರ್ಯಕ್ಕೆ ವಿಘ್ನ ಎದುರಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
ಕನ್ಯಾ : ಮಕ್ಕಳ ವಿಚಾರದ ಬಗ್ಗೆ ಚಿಂತಿತರಾಗುತ್ತೀರಿ. ಮನರಂಜನೆಗಾಗಿ ಹಣ ವ್ಯಯ ಮಾಡಲಿದ್ದೀರಿ. ಪ್ರೇಮಿಗಳು ದೂರವಾಗುವ ಸಾಧ್ಯತೆ ಇದೆ.
ತುಲಾ : ಕೆಲಸದ ವೇಳಾಪಟ್ಟಿಯಲ್ಲಿ ಏರಿಳಿತ ಕಂಡು ಬರಲಿದೆ. ಹೊಸ ವಸ್ತ್ರ ಖರೀದಿಸುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಕಾರ್ಯನಿರ್ವಹಿಸುವ ಸನ್ನಿವೇಶ ನಿರ್ಮಾಣವಾಗುವುದು.
ವೃಶ್ಚಿಕ : ನಿಮ್ಮ ವ್ಯಕ್ತಿತ್ವದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ನಿಮ್ಮ ಎಲ್ಲಾ ಆಸೆಗಳು ಈಡೇರಲಿವೆ. ಸಕಾರಾತ್ಮಕ ಆಲೋಚನೆಗಳಿಂದ ಕೂಡಿರುತ್ತೀರಿ.
ಧನಸ್ಸು : ಉತ್ತಮ ವಾಗ್ಮೀಗಳಾಗಿರುತ್ತೀರಿ. ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ಣಗೊಳ್ಳುವುದಿಲ್ಲ.
ಮಕರ : ಆಸ್ತಿ ಖರೀದಿಯ ಯೋಗವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ವೈವಾಹಿಕ ಜೀವನ ಉತ್ತಮವಾಗಿರಲಿದೆ.
ಕುಂಭ : ಮೊಣಕಾಲು ನೋವು ಅಧಿಕವಾಗಬಹುದು. ತಲೆನೋವು ಸಮಸ್ಯೆ ಕಾಡಬಹುದು. ನಿಮ್ಮ ವಿರುದ್ಧ ಸುಳ್ಳು ವದಂತಿ ಹರಡುವ ಸಾಧ್ಯತೆ ಇದೆ.
ಮೀನ : ಲಾಟರಿಯಿಂದ ಲಾಭ ಪಡೆಯುವಿರಿ. ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.