ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 06 – 12 : 54
ಅಮೃತ ಘಳಿಗೆ : ಸಂಜೆ 06 : 55 – 08 : 19
ಭಾನುವಾರ, 10 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಅಮಾವಾಸ್ಯೆ
ನಕ್ಷತ್ರ : ಪೂರ್ವಭಾದ್ರ
ಯೋಗ : ಸಾಧ್ಯ
ಕರಣ : ನಾಗವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 30
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 05 : 00 – 06 : 30
ಯಮಗಂಡ ಕಾಲ : 12 : 30 – 02 : 00
ಗುಳಿಕಕಾಲ : 03 : 30 – 05 : 00
ರಾಶಿ ಫಲ
ಮೇಷ : ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸುವಿರಿ. ಉದ್ಯೋಗದ ಸ್ಥಳದಲ್ಲಿ ಬದಲಾವಣೆಗಳಾಗಲಿವೆ. ಮೇಲಾಧಿಕಾರಿಗಳು ನಿಮ್ಮ ಕಾರ್ಯದಿಂದ ಸಂತೋಷಗೊಳ್ಳುವರು.
ವೃಷಭ : ಮನೆ ಖರೀದಿಯ ಯೋಗವುಂಟು. ವ್ಯಾಪಾರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸ್ನೇಹಿತರು ಸಹಾಯ ನೀಡಲಿದ್ದಾರೆ.
ಮಿಥುನ : ಸನ್ಮಾನ ದೊರೆಯಲಿದೆ. ಕೆಲಸದ ವಿಚಾರದಲ್ಲಿ ಜಾಗರೂಕರಾಗಿರಿ. ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಿ.
ಕಟಕ : ಅನ್ಯರ ಕೆಲಸದಲ್ಲಿ ಹಸ್ತಕ್ಷೇಪ ಸಲ್ಲದು. ಆರೋಗ್ಯದ ಕಡೆ ಗಮನವಿರಲಿ. ವೈವಾಹಿಕ ಜೀವನದಲ್ಲಿ ಸಮಸ್ಯೆ ತಲೆದೋರಬಹುದು.
ಸಿಂಹ : ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ.
ಕನ್ಯಾ : ಕಠಿಣ ಪರಿಶ್ರಮದ ನಂತರ ಉತ್ತಮ ಫಲಿತಾಂಶ ದೊರೆಯಲಿದೆ. ಸಂಚಾರಿ ನಿಯಮಗಳನ್ನು ಪಾಲಿಸಿ. ಮಾತಿನ ಮೇಲೆ ಹಿಡಿತವಿರಲಿ.
ತುಲಾ : ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಕಲಹ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದು.
ವೃಶ್ಚಿಕ : ನೀವು ಅಂದುಕೊಂಡ ಕಾರ್ಯವು ಆಗದಿರಬಹುದು. ಕೆಟ್ಟ ಅಭ್ಯಾಸಗಳಿಂದ ದೂರವಿರಿ. ಮನೋ ಚಾಂಚಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
ಧನಸ್ಸು : ಆದಾಯದ ಮೂಲಗಳು ಹೆಚ್ಚಲಿವೆ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನ ಹರಿಸುವರು. ವಿಭಿನ್ನ ಕಾರ್ಯ ಶೈಲಿಯನ್ನು ರೂಢಿಸಿಕೊಳ್ಳುವಿರಿ.
ಮಕರ : ವಿವಾಹೇತರ ಸಂಬಂಧಗಳ ಬಗ್ಗೆ ಜಾಗರೂಕರಾಗಿರಿ. ಆಸ್ತಿ ವಿವಾದಗಳಿಂದ ದೂರವಿರಿ. ಕಮಿಷನ್ ಕೈ ತಪ್ಪಬಹುದು.
ಕುಂಭ : ಅನ್ಯರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು. ನಿಮ್ಮ ವಿಚಾರಗಳನ್ನು ಅನ್ಯರು ತಿರಸ್ಕರಿಸಬಹುದು. ಕಚೇರಿ ಕೆಲಸವನ್ನು ಮನೆಯಲ್ಲಿ ಮಾಡಬೇಕಾಗಬಹುದು.
ಮೀನ : ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸುವರು. ಕೆಟ್ಟ ಅಭ್ಯಾಸಗಳಿಂದ ನಷ್ಟ ಅನುಭವಿಸುವಿರಿ. ಸಂಗಾತಿಯೊಂದಿಗೆ ಸಂಬಂಧ ಉತ್ತಮಗೊಳ್ಳಲಿದೆ.