ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ :ಇಲ್ಲ
ಅಮೃತ ಘಳಿಗೆ : ಮಧ್ಯಾಹ್ನ 03 : 40 – 05 : 12
ಬುಧವಾರ, 03 ಏಪ್ರಿಲ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ: ನವಮಿ
ನಕ್ಷತ್ರ : ಉತ್ತರಾಷಾಡ
ಯೋಗ : ಶಿವ
ಕರಣ : ತೈತಲೆ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 14
ಸೂರ್ಯಾಸ್ತ : ಸಂಜೆ 06 : 31
ರಾಹುಕಾಲ : 12 : 23 – 01 : 55
ಯಮಗಂಡ ಕಾಲ : 07 : 46 – 09 : 19
ಗುಳಿಕಕಾಲ : 10 : 51 – 12 : 23
ರಾಶಿ ಫಲ
ಮೇಷ : ಟೀಂ ವರ್ಕ್ ನಲ್ಲಿ ಯಶಸ್ಸು ದೊರೆಯುವುದು. ಧನಾಗಮನವಾಗಲಿದೆ. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ವೃಷಭ : ನಿರೀಕ್ಷೆಯಂತೆ ಕಾರ್ಯಗಳು ನೆರವೇರಲಿವೆ. ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸಿ. ದೂರ ಪ್ರಯಾಣ ಒಳ್ಳೆಯದಲ್ಲ.
ಮಿಥುನ : ಜನರು ನಿಮ್ಮನ್ನು ಲಘುವಾಗಿ ಪರಿಗಣಿಸಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಹಠಾತ್ ಬದಲಾವಣೆ ಕಂಡುಬರಲಿದೆ.
ಕಟಕ : ಸಾಮಾಜಿಕ ಸಂಬಂಧಗಳು ಗಟ್ಟಿಯಾಗಲಿವೆ. ಹಿಂದಿನ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಚರ್ಚೆಗಳಲ್ಲಿ ಮೈಲುಗೈ ಸಾಧಿಸುವಿರಿ.
ಸಿಂಹ : ಅನ್ಯರ ಬಗ್ಗೆ ಯೋಚಿಸಬೇಡಿ. ಕೆಟ್ಟ ಸಹವಾಸದಿಂದ ದೂರವಿರಿ. ಕೋಪಗೊಳ್ಳುವುದು ಒಳ್ಳೆಯದಲ್ಲ.
ಕನ್ಯಾ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ತುಲಾ : ಮೇಲಾಧಿಕಾರಿಯ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದಿರಬಹುದು. ಅನಾರೋಗ್ಯದ ಸಮಸ್ಯೆ ಕಾಡಲಿದೆ. ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ.
ವೃಶ್ಚಿಕ : ಅವಿವಾಹಿತರಿಗೆ ವಿವಾಹದ ಚಿಂತೆ ಕಾಡುವುದು. ಸಕಾರಾತ್ಮಕ ಆಲೋಚನೆಯಿಂದ ವರ್ತಿಸಿ. ಪ್ರಭಾವಿ ವ್ಯಕ್ತಿಯಿಂದ ಪ್ರೋತ್ಸಾಹ ಪಡೆಯುವಿರಿ.
ಧನಸ್ಸು : ದೂರದ ಸಂಬಂಧಿಕರ ಭೇಟಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಭಾವನೆಗಳಿಗೆ ಗಮನ ಕೊಡಿ. ಮನೆ ಕೆಲಸದಲ್ಲಿ ನಿರತರಾಗುವಿರಿ.
ಮಕರ : ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಪ್ರೇಮಿಗಳಿಗೆ ಉತ್ತಮ ದಿನ.
ಕುಂಭ : ಸಾಲ ಮಾಡುವುದನ್ನು ತಪ್ಪಿಸಿ. ಉದ್ಯೋಗದಲ್ಲಿ ತೊಂದರೆಯಾಗಬಹುದು. ಅಸಿಡಿಟಿ ಸಮಸ್ಯೆ ಕಾಡಲಿದೆ.
ಮೀನ : ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ. ಹೊಸ ಉದ್ಯೋಗದ ಬಗ್ಗೆ ಯೋಚಿಸಲಿದ್ದೀರಿ. ಮಕ್ಕಳ ವಿಚಾರದಲ್ಲಿ ಸಂತೋಷ ಪಡುವಿರಿ.