ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 56 – 12 : 46
ಅಮೃತ ಘಳಿಗೆ : ಬೆಳಿಗ್ಗೆ 05 : 24 – 06 : 46
ಮಂಗಳವಾರ, 09 ಏಪ್ರಿಲ್ 2024
ದಿನ ವಿಶೇಷ: ಚಂದ್ರಮಾನ ಯುಗಾದಿ
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ : ಪಾಡ್ಯ
ನಕ್ಷತ್ರ : ರೇವತಿ
ಯೋಗ : ವೈಧೃತಿ
ಕರಣ : ಕಿಂಸ್ತುಘ್ನ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 11
ಸೂರ್ಯಾಸ್ತ : ಸಂಜೆ 06 : 32
ರಾಹುಕಾಲ : 03 : 26 – 04 : 59
ಯಮಗಂಡ ಕಾಲ : 09 : 16 – 10 : 48
ಗುಳಿಕಕಾಲ : 12 : 21 – 01 : 54
ರಾಶಿ ಫಲ
ಮೇಷ : ವಿದೇಶಿ ಉದ್ಯಮಿಗಳಿಂದ ಲಾಭ ಪಡೆಯುವಿರಿ. ಉದ್ಯೋಗದಲ್ಲಿ ಹೊಸ ನಿರೀಕ್ಷೆಗಳು ಮೂಡಲಿವೆ. ವಿದ್ಯಾರ್ಥಿಗಳಿಗೆ ಸವಾಲು ಎದುರಾಗಲಿವೆ.
ವೃಷಭ : ಆಸೆಗಳು ಈಡೇರಲಿವೆ. ಚಿಂತೆಗೆ ಒಳಗಾಗುವಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ.
ಮಿಥುನ : ವೃತ್ತಿ ಜೀವನದಲ್ಲಿ ತೊಂದರೆ ಎದುರಾಗಲಿದೆ. ಆದಾಯದ ಮೂಲ ಹೆಚ್ಚಾಗುವುದು. ಕೌಟುಂಬಿಕ ಸಮಸ್ಯೆಗಳ ಕಡೆಗೆ ಗಮನ ಹರಿಸುವುದು ಸೂಕ್ತ.
ಕಟಕ : ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ದೈಹಿಕ ಸಮಸ್ಯೆ ಕಾಡಬಹುದು. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ.
ಸಿಂಹ : ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಕನ್ಯಾ : ಶಿಸ್ತಿನ ಜೀವನ ರೂಢಿಸಿಕೊಳ್ಳಿ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಕಡೆ ಗಮನ ಹರಿಸಿ.
ತುಲಾ : ಹಿತಶತ್ರುಗಳಿಂದ ತೊಂದರೆ ಎದುರಾಗಲಿದೆ. ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ. ಪ್ರೀತಿ ಪಾತ್ರರ ಬಗ್ಗೆ ಸೂಕ್ಷ್ಮವಾಗಿ ವರ್ತಿಸಿ.
ವೃಶ್ಚಿಕ : ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಕುಟುಂಬದಲ್ಲಿ ಕಲಹ ಸಾಧ್ಯತೆ. ಮನೆಯಲ್ಲಿ ಅಶಾಂತಿಯುತ ವಾತಾವರಣ ಉಂಟಾಗಬಹುದು.
ಧನಸ್ಸು : ವಿದ್ಯಾರ್ಥಿಗಳಿಗೆ ಉತ್ತಮ ದಿನ. ದೂರ ಪ್ರಯಾಣ ಹೊರಡಲಿದ್ದೀರಿ. ಪ್ರೇಮ ಜೀವನವನ್ನು ನೀವು ಆನಂದಿಸಬಹುದು.
ಮಕರ : ವೃತ್ತಿ ಜೀವನ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಸಾಕಷ್ಟು ಶ್ರಮ ವಹಿಸಬೇಕು. ಉದ್ಯೋಗದಲ್ಲಿನ ಅಡೆತಡೆಗಳು ದೂರವಾಗಲಿವೆ.
ಕುಂಭ : ಯಾವುದೇ ಕಾರಣವಿಲ್ಲದೆ ಇತರೆ ವ್ಯಕ್ತಿಯೊಂದಿಗೆ ಮಾಡುವ ವಾಗ್ವಾದವನ್ನು ತಪ್ಪಿಸಿ. ವ್ಯವಹಾರದಲ್ಲಿ ತೊಂದರೆ ಉಂಟಾಗಲಿದೆ. ವಿದ್ಯಾರ್ಥಿಗಳು ಜಾಣ್ಮೆಯಿಂದ ವರ್ತಿಸುವರು.
ಮೀನ : ಅವಿವಾಹಿತರಿಗೆ ವಿವಾಹ ಯೋಗವಿದೆ. ಹಣಕಾಸಿನ ಪರಿಸ್ಥಿತಿ ದುರ್ಬಲವಾಗಿರಲಿದೆ. ಅನಿರೀಕ್ಷಿತ ಖರ್ಚುಗಳು ಬಂದೊದಗಲಿವೆ.