Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣಶಿಕ್ಷಣ

ದೇಹದ ತೂಕದ ಸಮತೋಲನಕ್ಕೆ ಶೂನ್ಯ ಮುದ್ರೆ

by admin April 14, 2024
written by admin April 14, 2024 0 comments 2 minutes read
0FacebookTwitterPinterestEmail
494

ಕಿವಿ, ಮೈಗ್ರೇನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ

ಆಧುನಿಕ ಜೀವನಶೈಲಿಯಿಂದ ಬದುಕಿನ ಕ್ರಮವೇ ಬದಲಾಗುತ್ತಿದೆ. ಆಹಾರ ಸೇವನೆಯಲ್ಲಿ ಬದಲಾವಣೆ, ಜೀವನ ಕ್ರಮದಲ್ಲಿ ಬದಲಾವಣೆ, ಕೆಲಸದ ವಿಧಾನದಲ್ಲಿ ಬದಲಾವಣೆಗಳಾಗಿ ಅನೇಕ ರೀತಿಯ ದೈಹಿಕ, ಮಾನಸಿಕ ಒತ್ತಡಗಳಿಗೆ ಯುವಜನರು ಒಳಗಾಗುತ್ತಿದ್ದಾರೆ. ದೇಹದ ಸೂಕ್ಷ್ಮ ರೂಪ ಮನಸ್ಸು. ಮನಸ್ಸಿನ ಸ್ಥೂಲರೂಪ ದೇಹ. ಈ ಸತ್ಯವನ್ನು ಮರೆತು ದೇಹ ಬೇರೆ, ಮನಸ್ಸು ಬೇರೆ ಎಂದು ಅನೇಕ ರೋಗಗಳಿಂದ ಬಳಲುವವರೇ ಹೆಚ್ಚು. ಮನಸ್ಸು ವೇದನೆಗೆ ಒಳಗಾದರೆ, ದೇಹದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಮಾನಸಿಕ ಕಾಯಿಲೆಗಳಿಗೆ ಮುಕ್ತಿ ದೊರೆಯದ ಹೊರತು ದೈಹಿಕ ನೋವುಗಳಿಗೆ ಮುಕ್ತಿ ಇಲ್ಲ.

ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ವೇದನೆಗಳನ್ನು ಸರಿದೂಗಿಸಲಾಗದ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಾದರೂ ನರಮಂಡಲಗಳನ್ನು ಜಾಗೃತಿಗೊಳಿಸುವ ಮೂಲಕ ಮನಃ ಶಾಂತಿಯನ್ನು ಪಡೆಯಬೇಕಾಗುವುದು.  ನರಮಂಡಲಗಳ ಜಾಗೃತಿಗಾಗಿ ನಾವು ಪ್ರತಿದಿನ ಹಸ್ತಮುದ್ರೆಗಳನ್ನು ಮಾಡುವ ಮೂಲಕ ಮೆದುಳನ್ನು ಸಕ್ರಿಯಗೊಳಿಸಿ ದೈಹಿಕ ನೋವು ಮತ್ತು ಮಾನಸಿಕ ವೇದನೆಯಿಂದ ಮುಕ್ತಿ ಪಡೆಯಬಹುದಾಗಿದೆ. ದೇಹದೊಳಗಿನ ಆಲಸ್ಯ, ಇಂದ್ರಿಯಗಳ ಗ್ರಹಿಕೆಯ ಕೊರತೆಯನ್ನು ಅನುಭಿಸುವವರ ಸಂಖ್ಯೆ ಆಧುನಿಕ ಜೀವನಶೈಲಿಯಲ್ಲಿ ಹೆಚ್ಚಾಗುತ್ತಿದೆ.

ಬೆಂಗಳೂರಿಗೆ ಮತ್ತೆ ಹೆಸರಘಟ್ಟ ಕೆರೆಯ ನೀರು

ಇಂದ್ರಿಯಗಳ ಗ್ರಹಿಕೆಯ ಕೊರತೆಯಿಂದಾಗಿ  ದೇಹದ ಕೆಲವು ಭಾಗಗಳಲ್ಲಿ ಅತಿಯಾದ ಮರಗಟ್ಟುವಿಕೆ ಅಥವಾ ಜುಮ್ ಎನಿಸುವ ಅನುಭವವಾಗುತ್ತದೆ. ಆಧುನಿಕ ಜೀವನಶೈಲಿಯಿಂದಾಗಿ ಥೈರಾಯಿಡ್ ನಂತಹ ಸಮಸ್ಯೆಗಳು ಸ್ತ್ರೀ- ಪುರುಷರಿಬ್ಬರಲ್ಲೂ ಕಂಡುಬರುತ್ತಿವೆ. ಗಂಟಲಿನ ಸಮಸ್ಯೆ, ವಸಡಿನ ಕಾಯಿಲೆಗಳು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಯೋಗಶಾಸ್ತ್ರದಲ್ಲಿ ಆಕಾಶ ಮುದ್ರೆ / ಶೂನ್ಯಮುದ್ರೆ / ಶುನಿಮುದ್ರೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಈ ಯೋಗಮುದ್ರೆಯು ಭೂಮಿಯ ಅಂಶದೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ತಾಳ್ಮೆಯನ್ನು ಹೆಚ್ಚಿಸುವುದು.

ಆಕಾಶ ಮುದ್ರೆ ಮಾಡುವ ವಿಧಾನ

ಮಧ್ಯದ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಒತ್ತುವ ಮೂಲಕ ಶುನಿಮುದ್ರೆ ರೂಪಗೊಳ್ಳುವುದು. ಇತರ ಬೆರಳುಗಳು ನೇರವಾಗಿ ಇರಬೇಕು. ಈ ಮುದ್ರೆಯನ್ನು ಮಾಡುವಾಗ ಸುಖಾಸನ, ಪದ್ಮಾಸನ ಅಥವಾ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಿ. ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ. ನಿಮ್ಮ ಕೈಗಳನ್ನು ಮೊಣಕಾಲುಗಳ ಮೇಲೆ ಇರಿಸಿಕೊಂಡು ಅಂಗೈ ಆಕಾಶವನ್ನು ನೋಡುವಂತೆ ಇಟ್ಟುಕೊಳ್ಳಿ. ಎರಡೂ ಕೈಗಳಿಂದ ಈ ಮುದ್ರೆಯನ್ನು ಮಾಡಬೇಕಾಗುತ್ತದೆ.

ಮುದ್ರೆ ಮಾಡುವಂತಹ ಸಂದರ್ಭದಲ್ಲಿ ಉಸಿರಾಟದ ಮೇಲೆ ಏಕಾಗ್ರತೆ ಇರಲಿ. ನಿಧಾನವಾಗಿ ಉಸಿರಾಡಿ. ದೇಹದ ಒತ್ತಡಗಳಿಂದ ಹೊರಬರುತ್ತೀರಿ. ಧ್ಯಾನ ಮಾಡುವ ಸಂದರ್ಭದಲ್ಲಿ, ಪ್ರಾಣಾಯಾಮ ಮತ್ತು ಯೋಗಾಸನದ ಸಂದರ್ಭದಲ್ಲಿ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಬ್ರಾಹ್ಮಿ ಮುಹೂರ್ತ ಅಥವಾ ರಾತ್ರಿ ಮಲಗುವ ಮುಂಚೆ ಪ್ರತಿದಿನ 20 ನಿಮಿಷಗಳ ಕಾಲ ಅಭ್ಯಾಸ ಮಾಡುವ ಮೂಲಕ ದೇಹದೊಳಗಿನ ಒತ್ತಡಗಳಿಂದ ಹೊರಬರಲಿದ್ದೀರಿ.

ಶೂನ್ಯ ಅಥವಾ ಆಕಾಶ ಮುದ್ರೆ ಎಂದು ಕರೆಯಲ್ಪಡುವ ಶುನಿಮುದ್ರೆಯು ಭಾರತೀಯ ಪ್ರಾಚೀನ ಜೀವನಶೈಲಿಯಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಶೂನ್ಯ ಎಂದರೆ ಬ್ರಹ್ಮಾಂಡ. ಬ್ರಹ್ಮಾಂಡವನ್ನು ಜಯಿಸುವ ಶಕ್ತಿ ಈ ಮುದ್ರೆಯಿಂದ ಲಭಿಸುವುದು. ಅಗ್ನಿತತ್ವ ಮತ್ತು ಬಾಹ್ಯಾಕಾಶ ತತ್ವಗಳೆರಡೂ ಸ್ಪರ್ಶಿಸುವ ಮೂಲಕ ದೇಹದ ಒಳಗೆ ಶೂನ್ಯತ್ವವನ್ನು ಉಂಟು ಮಾಡುವುದು. ನೋಡಲು ಎಷ್ಟು ಸರಳವೆಂದು ತೋರುವ ಈ ಮುದ್ರೆಯು ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಿದಾಗ ನಿಮ್ಮೊಳಗೆ ಸ್ಥಿರವಾದ ಶಕ್ತಿಯ ಭಾವ ನೆಲೆಸುವಂತೆ ಮಾಡುತ್ತದೆ.

ದೇಹದೊಳಗಿನ ವಾಯು ತತ್ವ ಮತ್ತು ಬೆಂಕಿಯ ಅಂಶಗಳು ಬಲಗೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ದೇಹದ ಉಷ್ಣತೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ದೇಹದ ತೂಕ ಸಮತೋಲಗೊಳ್ಳುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುವುದರಿಂದ ಅತಿಸಣ್ಣ ಇರುವವರು ಆರೋಗ್ಯಕರ ತೂಕಕ್ಕೆ ಬರುತ್ತಾರೆ. ಧಡೂತಿ ದೇಹವುಳ್ಳವರು ದೇಹದ ತೂಕ ತಗ್ಗಿಸಿಕೊಂಡು ಆರೋಗ್ಯವಂತರಾಗುತ್ತಾರೆ. ದೈಹಿಕ, ಮಾನಸಿಕ ಲಾಭಗಳನ್ನು ಮೀರಿದ ಶುನಿ ಮುದ್ರೆಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದಾಗಿ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವುದು. ಒತ್ತಡದ ಮಾನಸಿಕ ಸ್ಥಿತಿ ಕಳೆದು ತಾಳ್ಮೆಯ ಜೀವನಶೈಲಿ ಈ ಮುದ್ರೆಯನ್ನು ಅಭ್ಯಾಸ ಮಾಡುವವರಿಗೆ ಲಭಿಸುವುದು.

ಪ್ರಯೋಜನಗಳು

ಆಕಾಶ ಮುದ್ರೆಯು ಕಿವಿ ಸಂಬಂಧಿತ ರೋಗಗಳಿಗೆ ಪರಿಹಾರವನ್ನು ನೀಡುತ್ತದೆ. ಹೃದ್ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಥೈರಾಯಿಡ್ ನಂತಹ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಚಲನೆಯನ್ನು ಕಳೆದುಕೊಂಡು ಮರಗಟ್ಟಿರುವ ದೇಹದ ಭಾಗಗಳನ್ನು ಸರಿಪಡಿಸುವುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಂತರವನ್ನು ಕಡಿಮೆ ಮಾಡುತ್ತದೆ. ಜೀವನದಲ್ಲಿ ಎಷ್ಟೇ ಸೋಲುಗಳನ್ನು ಅನುಭವಿಸಿ ಹತಾಶರಾದವರು ಶುನಿ ಮುದ್ರೆಯನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಜ್ಞಾನೋದಯ ಮಾರ್ಗದಲ್ಲಿ ನಡೆಯುವರು.

ಮಧ್ಯದ ಬೆರಳು ಆಕಾಶ ತತ್ವವನ್ನು ಪ್ರತಿನಿಧಿಸುವುದರಿಂದ ನಮ್ಮೊಳಗಿನ ಶೂನ್ಯತ್ವವನ್ನು ಸಮತೋಲಗೊಳಿಸಿಕೊಳ್ಳುವ  ಮನಸ್ಥಿತಿಯನ್ನು ಪಡೆಯುತ್ತಾರೆ. ವಾತದೋಷ ಹೊಂದಿರುವವರಿಗೆ ಈ ಮುದ್ರೆ ಸಹಕಾರಿಯಾಗಲಿದೆ. ದೇಹದೊಳಗಿನ ಗಂಟುಗಳನ್ನು ಕರಗಿಸುವ ಅಂಶವನ್ನು ಈ ಮುದ್ರೆ ಮಾಡುತ್ತದೆ. ಮೂಳೆ ಸಂಬಂಧಿತ ಕಾಯಿಲೆಗಳಿಗೆ ಹಾಗೂ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಸಹಕಾರಿಯಾಗಿದೆ.

ಹಲ್ಲುಗಳನ್ನು ಬಲಪಡಿಸುವುದಲ್ಲದೆ, ತಲೆ ತಿರುಗುವಿಕೆಯಂತಹ ಸಮಸ್ಯೆಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ. ಸ್ಟಿರಾಯಿಡ್ ನಂತಹ ಔಷಧಿಯ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ಆಕಾಶ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಅತಿಯಾದ ಗೊರಕೆ ಸಮಸ್ಯೆ ಇರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸುಖ ನಿದ್ರೆಗೆ ಜಾರಬಹುದಾಗಿದೆ. ಮೈಗ್ರೇನ್ ನಂತಹ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಸೂಚಿಸುವುದು.

ಮುದ್ರೆಯ ಮಿತಿಗಳು

ಬುದ್ಧನ ಹೆಚ್ಚು ಪ್ರತಿಮೆಗಳಲ್ಲಿ ಈ ಆಕಾಶ ಮುದ್ರೆ ಇರುವುದನ್ನು ಗಮನಿಸಬಹುದು. ವಾತ ಪ್ರಕೃತಿ ಸಮಸ್ಯೆ ಇದ್ದವರು ಈ ಮುದ್ರೆಯನ್ನು ಅತಿ ಹೆಚ್ಚು ಅಭ್ಯಾಸ ಮಾಡಬಾರದು. ಹೆಬ್ಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಬಲವಾಗಿ ಸ್ಪರ್ಶಿಸಬಾರದು. ಆರಾಮದಾಯಕವಾದ ಉಡುಪು ಧರಿಸಿರಬೇಕು. ಗಟ್ಟಿಯಾದ ನೆಲದ ಮೇಲೆ ಅಭ್ಯಾಸ ಮಾಡುವುದು ಒಳ್ಳೆಯದಲ್ಲ.

ನೆನಪಿ ಶಕ್ತಿ ವೃದ್ಧಿಗೆ ಶಾಂಭವಿ ಮುದ್ರೆ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
balancebody weightIdeal solutionmigraineproblemsr earshunyamudraZero seal
0 FacebookTwitterPinterestEmail
admin

previous post
ಬೆಂಗಳೂರಿಗೆ ಮತ್ತೆ ಹೆಸರಘಟ್ಟ ಕೆರೆಯ ನೀರು
next post
ದಿನ ಭವಿಷ್ಯ : ಸೋಮವಾರ, 15 ಏಪ್ರಿಲ್ 2024

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

ಉಚಿತ ಗ್ಯಾರಂಟಿಗಳು ದೇಶದ ಅಭಿವೃದ್ಧಿಗೆ ಮಾರಕ

February 19, 2026

ಗ್ಯಾರಂಟಿ ಉಳಿಕೆ ಹಣ ಎಂಎಸ್‌ಐಎಲ್ ಚಿಟ್ಸ್‌ನಲ್ಲಿ ಹೂಡಿ

February 7, 2026

ವಿಬಿ-ಜಿ-ರಾಮ್-ಜಿ ಕಾಯ್ದೆ ಕುತಂತ್ರ ವಿರೋಧಿಸಿ

February 6, 2026

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ

February 5, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ