ಬೆಂಗಳೂರು:ಪಂಚಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ರಾಜ್ಯದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ, ಬಡವರು ಮತ್ತು ಶ್ರಮಿಕರು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಉದ್ದೇಶದಿಂದ ರಾಜ್ಯದ ಸಂಪನ್ಮೂಲದ ಜೊತೆಗೆ 1.32 ಲಕ್ಷ ಕೋಟಿ ರೂ. ಸಾಲದ ಬಜೆಟ್ ಪ್ರಸ್ತಾವನೆಯನ್ನು ಮುಖ್ಯಮಂತ್ರಿ …
ಬೆಂಗಳೂರು:ಪಂಚಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ರಾಜ್ಯದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ, ಬಡವರು ಮತ್ತು ಶ್ರಮಿಕರು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಉದ್ದೇಶದಿಂದ ರಾಜ್ಯದ ಸಂಪನ್ಮೂಲದ ಜೊತೆಗೆ 1.32 ಲಕ್ಷ ಕೋಟಿ ರೂ. ಸಾಲದ ಬಜೆಟ್ ಪ್ರಸ್ತಾವನೆಯನ್ನು ಮುಖ್ಯಮಂತ್ರಿ …
ನವದೆಹಲಿ:ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿರುವ ಪಠ್ಯಪುಸ್ತಕವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ಮುದ್ರಿತಗೊಂಡಿರುವ ಪಠ್ಯಪುಸ್ತಕಗಳನ್ನು ಮುಟ್ಟುಗೋಲಿಗೆ ಆದೇಶ ನೀಡಿರುವುದಲ್ಲದೆ, ಡಿಜಿಟಲ್ ಪ್ರತಿಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ತಪ್ಪಿದಲ್ಲಿ ಗಂಭೀರ …
ಬೆಂಗಳೂರು:ಮುಖ್ಯಮಂತ್ರಿ ಗಾದಿ ನಿಭಾಯಿಸಲು ನಾನು ಸಮರ್ಥನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ. ನಾನು ಸಮರ್ಥ ಇರುವುದರಿಂದಲೇ ಪಕ್ಷದ ವರಿಷ್ಠರು ಉಪಮುಖ್ಯಮಂತ್ರಿ ಹುದ್ದೆ ಹಾಗೂ ವಿವಿಧ ಇಲಾಖೆಗಳ ಸಚಿವನಾಗಿ ಕಾರ್ಯನಿರ್ವಹಿಸಲು ಅವಕಾಶ …
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ೨೦ಕ್ಕೂ ಹೆಚ್ಚು ಶಾಸಕರು 10 ದಿನಗಳ ವಿದೇಶ ಪ್ರವಾಸ ತೆರಳುತ್ತಿದ್ದಾರೆ. ಅಧಿಕಾರ ಹಸ್ತಾಂತರದ ಹಗ್ಗ ಜಗ್ಗಾಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರ ಬಲ ಪ್ರದರ್ಶನಕ್ಕೆ ತೆರೆಮರೆಯಲ್ಲಿ ನಡೆಸುತ್ತಿರುವ ಬೆನ್ನಲ್ಲೇ …
ಬೆಂಗಳೂರು:ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೇರವಾಗಿ ಒತ್ತಾಯಿಸಿದ್ದಾರೆ. ಶಿವಕುಮಾರ್ ನಿನ್ನೆ ತಡರಾತ್ರಿ ಕೇರಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಂದರಲ್ಲಿ ಕೆ.ಸಿ.ವೇಣುಗೋಪಾಲ್ …
ಹೆಚ್ಐವಿ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
ಬೆಂಗಳೂರು ಟೆಕ್ ಮೇಳದಲ್ಲಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಭಿಮತ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಂಒಯುಗೆ ಸಹಿ
ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿ ಬಸ್, ನಿಲ್ದಾಣದಲ್ಲಿ ಪ್ಯಾನಿಕ್ ಬಟನ್
ಆತಂಕಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
ಯುಜಿ ಆಯುಷ್ ನೋಂದಣಿ, ಪ್ರವೇಶ
ನ.30ರಂದು ಕೊನೆ ಅವಕಾಶ: ಕೆಇಎ
ಬೆಂಗಳೂರು: ಬಾಕಿ ಉಳಿದಿರುವ ಯುಜಿ ಆಯುಷ್ ಸೀಟುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊನೆ ಅವಕಾಶ ನೀಡಿದ್ದು, ಅರ್ಹರು ನ.30ರಂದು ನಿಗದಿತ ಶುಲ್ಕದ ಡಿ.ಡಿ ಸಮೇತ ಕೆಇಎ ಕಚೇರಿಗೆ ಬಂದು ಪ್ರವೇಶ ಪಡೆಯಬಹದು.
ವಿಸ್ತರಿತ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ನಂತರ ಉಳಿದಿರುವ ಸೀಟುಗಳ ಸಂಖ್ಯೆಯನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅರ್ಹರಿಗೆ ಈ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಜಿನೀಟ್ ಅರ್ಹತೆಯ ಅಂಕಗಳನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಹಾಗೂ ಇಲ್ಲಿಯವರೆಗೂ ನೋಂದಣಿ ಮಾಡದಿರುವ ಅರ್ಹ ಅಭ್ಯರ್ಥಿಗಳು ಸಹ ಸದರಿ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಇದ್ದಲ್ಲಿ ಅಂತಹವರು ಕೂಡ ಭಾಗವಹಿಸಬಹುದು. ಅಭ್ಯರ್ಥಿಗಳಿಗೆ ನೋಂದಣಿ ಮತ್ತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೆಇಎ ಪೋರ್ಟಲ್ ನಲ್ಲಿ ನ.30ರ ಬೆಳಿಗ್ಗೆ 10ರಿಂದ 11ರವರೆಗೆ ಅವಕಾಶ ಇರುತ್ತದೆ.
ಹೊಸದಾಗಿ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಅಂದು ಬೆಳಿಗ್ಗೆ 11ರಿಂದ 11.30ರವೆಗೆ ನಡೆಯಲಿದೆ. ನಂತರ ಡಿ.ಡಿ ಸಲ್ಲಿಸಿದ ಅರ್ಹರಿಗೆ ಮಧ್ಯಾಹ್ನ 2 ಗಂಟೆವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಮ್ಯಾ ತಿಳಿಸಿದ್ದಾರೆ.
ಪಿಜಿ ನೀಟ್ ಡಿಡಿ ಸಲ್ಲಿಸಲು ಮತ್ತೊಂದು ದಿನ ಅವಕಾಶ
ಪಿಜಿ ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳ ಭರ್ತಿಗೆ ನಡೆಸುವ ವಿಶೇಷ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅರ್ಹರಿಗೆ ಡಿ.ಡಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ನ.30ರ ಬೆಳಿಗ್ಗೆ 11ಗಂಟೆವರೆಗೆ ವಿಸ್ತರಿಸಲಾಗಿದೆ.
ಇದಾದ ನಂತರ ಮಧ್ಯಾಹ್ನ 12ರವರೆಗೆ ಆಪ್ಷನ್ ಎಂಟ್ರಿ ಮಾಡಬಹುದು. 3ಗಂಟೆಗೆ ಫಲಿತಾಂಶ ಪ್ರಕಟ. ನಂತರ ಮೂಲ ದಾಖಲೆ ಸಲ್ಲಿಸಲು 4 ಗಂಟೆವರೆಗೆ ಅವಕಾಶ ಇರುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.
ಉದ್ಯಮಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿ 10,755 ಮಂದಿಗೆ ಉದ್ಯೋಗಾವಕಾಶ
