ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 07 – 12 : 55
ಅಮೃತ ಘಳಿಗೆ : ಬೆಳಿಗ್ಗೆ 07 : 24 – 09 : 02
ಸೋಮವಾರ, 4 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಅಷ್ಟಮಿ / ನವಮಿ
ನಕ್ಷತ್ರ : ಜೇಷ್ಠ
ಯೋಗ : ವಜ್ರ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 34
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 08: 03 – 09: 32
ಯಮಗಂಡ ಕಾಲ : 11 : 02 – 12: 31
ಗುಳಿಕಕಾಲ : 02 : 01 – 03: 30
ರಾಶಿ ಫಲ
ಮೇಷ : ಅತಿಯಾದ ಕೋಪವನ್ನು ನಿಯಂತ್ರಿಸಿ. ಸಂಗಾತಿಯ ಬಗ್ಗೆ ತಪ್ಪು ತಿಳುವಳಿಕೆ ಮೂಡಬಹುದು. ಕಾನೂನಿನ ವಿಚಾರಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ.
ವೃಷಭ : ಕೌಟುಂಬಿಕ ಜೀವನದಲ್ಲಿ ತೊಂದರೆ ಎದುರಾಗಲಿದೆ. ಸಂಗಾತಿಯ ಬಗ್ಗೆ ಗೌರವ ಹೆಚ್ಚಲಿದೆ. ಸೋಮಾರಿತನದಿಂದ ದೂರವಿರಿ.
ಮಿಥುನ : ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ತೆಗೆದುಕೊಳ್ಳಬೇಕಾಗಬಹುದು. ಆರೋಗ್ಯದ ಬಗ್ಗೆ ಗಮನವಿರಲಿ. ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧ ವೃದ್ಧಿಸಲಿದೆ.
ಕಟಕ : ಸ್ನೇಹಿತರಿಂದ ಮೋಸ ಹೋಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಮನೆಗೆ ಅತಿಥಿಗಳ ಆಗಮನವಾಗಬಹುದು.
ಸಿಂಹ : ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಅಹಂಕಾರದ ವರ್ತನೆಯಿಂದ ದೂರವಿರಿ. ಆತುರದಿಂದ ಯಾವುದೇ ನಿರ್ಧಾರ ಕೈಗೊಳ್ಳದಿರಿ.
ಕನ್ಯಾ : ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಶುಭ ಕಾರ್ಯಕ್ಕಾಗಿ ಹಣ ವ್ಯಯವಾಗುವುದು. ಕೌಟುಂಬಿಕ ಜವಾಬ್ದಾರಿ ನಿರ್ವಹಿಸುತ್ತೀರಿ.
ತುಲಾ : ಅಕ್ಕ ಪಕ್ಕದವರೊಂದಿಗೆ ಜಗಳವಾಗುವ ಸಾಧ್ಯತೆಯುಂಟು. ಯಾರಿಂದಲೂ ಹೆಚ್ಚಿನದನ್ನು ನಿರೀಕ್ಷಿಸಬೇಡಿ. ಹಣಕಾಸಿನ ಪರಿಸ್ಥಿತಿ ಹದಗೆಡಲಿದೆ.
ವೃಶ್ಚಿಕ : ಆಸ್ತಿ ಖರೀದಿಸುತ್ತೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.
ಧನಸ್ಸು : ಉದ್ಯೋಗದಲ್ಲಿ ತೊಡಕುಗಳು ಕಂಡುಬರಹುದು. ಅನ್ಯರ ಪ್ರಭಾವಕ್ಕೆ ಒಳಗಾಗದಿರಿ. ಕಾನೂನಾತ್ಮಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ.
ಮಕರ : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ.
ಕುಂಭ : ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ದೇವಾಲಯಗಳಿಗೆ ಭೇಟಿ ನೀಡಬಹುದು.
ಮೀನ : ಉದ್ಯೋಗ ಬದಲಾವಣೆ ಸಾಧ್ಯತೆ. ಕುಟುಂಬಕ್ಕೆ ಸಾಕಷ್ಟು ಸಮಯ ನೀಡಿ. ಜನರು ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು