ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ :ಇಲ್ಲ
ಅಮೃತ ಘಳಿಗೆ : ಇಲ್ಲ
ದಿನ ವಿಶೇಷ : ಶ್ರೀರಾಮ ನವಮಿ
ಬುಧವಾರ, 17 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ: ನವಮಿ
ನಕ್ಷತ್ರ : ಆಶ್ಲೇಷ
ಯೋಗ : ಶೂಲ
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 06
ಸೂರ್ಯಾಸ್ತ : ಸಂಜೆ 06 : 33
ರಾಹುಕಾಲ : 12 : 19 – 01 : 53
ಯಮಗಂಡ ಕಾಲ : 07 : 39 – 09 : 12
ಗುಳಿಕಕಾಲ : 10 : 46 – 12 : 19
ರಾಶಿ ಫಲ
ಮೇಷ : ನೀವು ಮಾಡುವ ಕೆಲಸಗಳ ಹೊಣೆಯನ್ನು ನೀವೇ ಹೊರಬೇಕಾಗುವುದು. ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ. ಪ್ರೇಮ ಸಂಬಂಧಗಳು ಮುರಿದು ಬೀಳಲಿವೆ.
ವೃಷಭ : ವ್ಯಾಪಾರದಲ್ಲಿ ಪ್ರಯೋಜನ ಪಡೆಯುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚುವರಿ ಸಮಯ ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಗೌರವ ಹೆಚ್ಚಲಿದೆ.
ಮಿಥುನ : ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಇರಲಿದೆ. ದಾನಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಆದಾಯ ಹೆಚ್ಚಾಗುವುದು.
ಕಟಕ : ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಅನ್ಯರನ್ನು ಅತಿಯಾಗಿ ಅವಲಂಬಿಸದಿರಿ.
ಸಿಂಹ : ದೂರ ಪ್ರಯಾಣದ ಸಾಧ್ಯತೆ ಅಧಿಕ. ಉದ್ಯೋಗದಲ್ಲಿ ಅಡತಡೆಗಳು ಎದುರಾಗಬಹುದು. ನಿಮ್ಮ ಆಲೋಚನೆಗಳನ್ನು ಇತರರ ಮೇಲೆ ಹೇರುವುದನ್ನು ತಪ್ಪಿಸಿ.
ಕನ್ಯಾ : ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ವೈವಾಹಿಕ ಜೀವನ ಸಂತೋಷಕರವಾಗಿರಲಿದೆ. ಉದ್ಯೋಗದಲ್ಲಿನ ಅಡೆತಡೆಗಳು ನಿರಾಣೆಯಾಗಲಿವೆ.
ತುಲಾ : ಹಳೆಯ ವಿವಾದಗಳು ಪರಿಹಾರಗೊಳ್ಳಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಕೆಲಸವನ್ನು ಅನ್ಯರಿಗೆ ವರ್ಗಾಯಿಸದಿರಿ.
ವೃಶ್ಚಿಕ : ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ಅಭದ್ರತೆ ಕಾಡಲಿದೆ. ಮಕ್ಕಳ ಚಟುವಟಿಕೆ ಮೇಲೆ ನಿಗಾ ಇರಲಿ.
ಧನಸ್ಸು : ಕುಟುಂಬದವರ ಬಗ್ಗೆ ಗಮನವಿರಲಿ. ವ್ಯವಹಾರದಲ್ಲಿ ಕಾರ್ಯಕ್ಷಮತೆ ದುರ್ಬಲವಾಗಿರಲಿದೆ. ನಿಮ್ಮ ಭಾವನೆಗಳನ್ನು ಅನ್ಯರು ತಪ್ಪಾಗಿ ಅರ್ಥೈಸಿಕೊಳ್ಳಬಹುದು.
ಮಕರ : ವ್ಯಾಪಾರಕ್ಕಾಗಿ ಪ್ರವಾಸ ಕೈಗೊಳ್ಳಲಿದ್ದೀರಿ. ಧನಾಗಮನವಾಗಲಿದೆ. ಶತ್ರುಗಳು ಮಿತ್ರರಾಗುವರು.
ಕುಂಭ : ಸೋಮಾರಿತನ ತಪ್ಪಿಸಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಹೊಟ್ಟೆನೋವಿನ ಸಮಸ್ಯೆ ಕಾಡಬಹುದು.
ಮೀನ : ಮನರಂಜನೆಗಾಗಿ ಹಣ ವ್ಯಯ ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೆ ಮನಸ್ತಾಪವಾಗುವುದನ್ನು ತಪ್ಪಿಸಿ. ಇಂದು ಹೆಚ್ಚು ತಾಳ್ಮೆ ವಹಿಸುವಿರಿ.