Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, July 23, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ದಿನ ಭವಿಷ್ಯಶಿಕ್ಷಣ

ವಾರ ಭವಿಷ್ಯ : ಭಾನುವಾರ, 14 ಏಪ್ರಿಲ್‌ 2024

by admin April 13, 2024
written by admin April 13, 2024 0 comments 3 minutes read
0FacebookTwitterPinterestEmail
199
 ಏಪ್ರಿಲ್‌ 14 ಭಾನುವಾರದಿಂದ 20 ಏಪ್ರಿಲ್‌ 2024ರ ಶನಿವಾರದವರೆಗೆ

ರಾಶಿ ಭವಿಷ್ಯ

ಮೇಷ : ಎಣ್ಣೆಯಲ್ಲಿ ಕರಿದ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಉದ್ಯೋಗದಲ್ಲಿ ಆರ್ಥಿಕ ಲಾಭ ಗಳಿಸುವಿರಿ. ಕುಟುಂಬದಲ್ಲಿ ಸಮಸ್ಯೆಗಳು ತಲೆದೋರಲಿವೆ. ವಾಗ್ವಾದ ಮಾಡುವುದನ್ನು ತಪ್ಪಿಸಿ ತಾಳ್ಮೆ ವಹಿಸುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವವರ ಕನಸು ನನಸಾಗಬಹುದು. ದೀರ್ಘಾವಧಿ ಹೂಡಿಕೆಗಳಿಂದ ಲಾಭವಾಗಲಿದೆ. ಕುಟುಂಬದವರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಭ್ರಮೆಯ ಬದುಕಿನಿಂದ ದೂರವಿರಿ.

ವೃಷಭ : ದೈಹಿಕ ಆಯಾಸವನ್ನು ಅನುಭವಿಸಲಿದ್ದೀರಿ. ಚಿಕ್ಕ ಚಿಕ್ಕ ವಿಚಾರಗಳಿಗೂ ಕೋಪಿಸಿಕೊಳ್ಳುವುದನ್ನು ತಪ್ಪಿಸಿ. ಪ್ರತಿ ದಿನದ ಆರಂಭವು ಅತ್ಯಂತ ಉತ್ಸಾಹದಾಯಕವಾಗಿರಲಿದೆ. ಅಮೂಲ್ಯವಾದ ವಸ್ತುಗಳು ಕಳುವಾಗುವ ಸಾಧ್ಯತೆ ಹೆಚ್ಚು. ಇತರರೊಂದಿಗಿನ ಜಗಳವನ್ನು ತಪ್ಪಿಸಿ. ಕುಟುಂಬದಲ್ಲಿ ಸಂತೋಷ ತುಂಬಿರಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಪೋಷಕರ ಅನುಮತಿ ಪಡೆಯಿರಿ. ಹಿತಶತ್ರುಗಳಿಂದ ಮುಜುಗರಕ್ಕೆ ಒಳಗಾಗಬಹುದು. ಮನೆಯ ದುರಸ್ಥಿ ಮಾಡಿಸಬಹುದು. ಪ್ರೇಮಿಗಳು ವಿವಾಹವಾಗುವ ಸಾಧ್ಯತೆ ಇದೆ.

ಮಿಥುನ : ಅಜೀರ್ಣ ಸಮಸ್ಯೆ ಕಾಡಬಹುದು. ಸಂಧಿವಾತದಂತಹ ಸಮಸ್ಯೆಗಳಿಂದ ತೊಂದರೆ ಅನುಭವಿಸಲಿದ್ದೀರಿ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಬೇರೊಬ್ಬರೊಂದಿಗೆ ಪ್ರೇಮಿಯನ್ನು ನೋಡುವುದರಿಂದ ದುಃಖಿತರಾಗುವಿರಿ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಇಮೇಜಿಗೆ ಧಕ್ಕೆ ಬರಲಿದೆ. ಶಿಕ್ಷಣಕ್ಕಾಗಿ ಹಣ ಖರ್ಚು ಮಾಡುವಿರಿ. ಮಾನಸಿಕ ಸಮಸ್ಯೆಗೆ ಒಳಗಾಗಲಿದ್ದೀರಿ. ಕುಟುಂಬದವರಿಂದ ಹಣ ಎರವಲು ಪಡೆಯುವಿರಿ. ಹಣಕಾಸಿನ ತೊಂದರೆ ಎದುರಾಗಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಕಟಕ : ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಮನೆ ಮದ್ದಿಗೆ ಬದಲಾಗಿ ಉತ್ತಮ ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆಯುವಿರಿ. ಹಣಕಾಸಿನ ಸಮಸ್ಯೆ ಎದುರಾಗಲಿದೆ. ಇದರಿಂದ ಮಾನಸಿಕ ಒತ್ತಡ ಅಧಿಕವಾಗಬಹುದು. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಕೆಲಸದ ಒತ್ತಡ ಕಡಿಮೆಯಾಗುವುದು. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಲಿದ್ದೀರಿ. ಮಕ್ಕಳ ಮನಸ್ಸಿನ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ.

ಸಿಂಹ : ಅನಾರೋಗ್ಯದ ಸಮಸ್ಯೆ ಕಾಡಬಹುದು. ಹಲವು ಮೂಲಗಳಿಂದ ಸಂಪತ್ತು ಗಳಿಸಬಹುದು. ಉತ್ತಮ ಜೀವನಕ್ಕಾಗಿ ಆರ್ಥಿಕ ಯೋಜನೆಗಳನ್ನು ರೂಪಿಸಲಿದ್ದೀರಿ. ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆಗಳಿವೆ. ಅನ್ಯರ ನಿಂದನೆಗೆ ಕಿವಿಗೊಡದೆ ಶಾಂತಿಯಿಂದ ಗುರಿಯ ಕಡೆಗೆ ಮುನ್ನುಗ್ಗಿ. ಪೂರ್ವಾಪರ ಅರಿಯದೇ ಯಾರನ್ನು ಕುರುಡಾಗಿ ನಂಬದಿರಿ. ನಿಮ್ಮ ಯೋಜನೆಗಳನ್ನು ಇತರರ ಮುಂದೆ ಬಹಿರಂಗಪಡಿಸದಿರಿ. ಉನ್ನತ ಶಿಕ್ಷಣದ ವಿಷಯದ ಆಯ್ಕೆ ಬಗ್ಗೆ ಜಾಗರೂಕರಾಗಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯಿರಿ.

ಕನ್ಯಾ : ನಿರಾಶೆಗೊಳ್ಳುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಕ್ಷೀಣತೆ ಉಂಟಾಗಲಿದೆ. ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಸಂಪತ್ತನ್ನು ಸಂಗ್ರಹಿಸಿ ಹಣವನ್ನು ಉಳಿಸಿ. ಕೆಟ್ಟ ಅಭ್ಯಾಸಗಳಿಂದ ದೂರವಿರಿ. ನಕಾರಾತ್ಮಕ ಧೋರಣೆ ಇರುವ ಜನರಿಂದ ದೂರ ಉಳಿಯಿರಿ. ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಲಿದ್ದೀರಿ. ಗುರುವಿನ ಅನುಗ್ರಹವಿರಲಿದೆ. ಉದ್ಯೋಗ ಸ್ಥಳದಲ್ಲಿ ಜಾಣ್ಮೆಯಿಂದ ವರ್ತಿಸಿದರೆ ಅನುಕೂಲವಾಗುವುದು.

ತುಲಾ : ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ನಿಯಮಿತವಾಗಿ ವ್ಯಾಯಾಮ ಅಭ್ಯಾಸ ಮಾಡಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಸಂಚಾರಿ ನಿಯಮ ಉಲ್ಲಂಘನೆಯಿಂದ ಭಾರೀ ದಂಡ ತೆರಬೇಕಾಗುತ್ತದೆ. ಕುಟುಂಬದಿಂದ ದೂರ ಉಳಿಯಲಿದ್ದೀರಿ. ವಿನಮ್ರತೆಯ ಮಾತಿನಿಂದ ಇತರರ ಹೃದಯವನ್ನು ಗೆಲ್ಲುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲಿದ್ದೀರಿ. ಮಕ್ಕಳು ವಿದೇಶಕ್ಕೆ ಹೊರಡಬಹುದು. ಅನ್ಯರ ವಿಚಾರಗಳಿಗೆ ಸಮಯ ವ್ಯರ್ಥ ಮಾಡಬೇಡಿ. ಪೋನ್‌ ಬಳಕೆ ಮಿತವಾಗಿರಲಿ.

ವೃಶ್ಚಿಕ : ಕೊಬ್ಬಿನ ಆಹಾರ ಸೇವಿಸುವುದನ್ನು ತಪ್ಪಿಸಿ. ಹಳೆಯ ಹೂಡಿಕೆಯಿಂದ ನಷ್ಟ ಸಾಧ್ಯತೆ. ಅನಗತ್ಯ ಬೇಡಿಕೆಗಳನ್ನು ಕೈಬಿಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆಗಳು ತಲೆದೋರಲಿವೆ. ಸಂಗಾತಿಯ ಸಲಹೆಯಿಂದ ಹೆಚ್ಚುವರಿ ಹಣವನ್ನು ಗಳಿಸುವಿರಿ. ಸಂಗಾತಿಗಾಗಿ ಉಡುಗೊರೆಯನ್ನು ಖರೀದಿಸಲಿದ್ದೀರಿ. ಕುಟುಂಬದ ಸದಸ್ಯರಿಗೆ ಹಿತಶತ್ರುಗಳಿಂದ ಹಾನಿ ಉಂಟಾಗಲಿದೆ. ಅಧ್ಯಯನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಆಂಜನೇಯನ ಆರಾಧನೆಯಿಂದ ಮಾನಸಿಕ ಗೊಂದಲ ದೂರವಾಗಲಿದೆ. ಸ್ಥೂಲಕಾಯತೆಯಿಂದ ಶರೀರ ಬಳಲಲಿದೆ. ತಂದೆಯ ಆಶೀರ್ವಾದ ದೊರೆಯಲಿದೆ.

ಧನಸ್ಸು : ಹಲವು ರೀತಿಯ ದೊಡ್ಡ ಬದಲಾವಣೆಗಳು ಬದುಕಿನಲ್ಲಿ ಉಂಟಾಗಬಹುದು. ಮಕ್ಕಳೊಂದಿಗೆ ಸೌಮ್ಯವಾಗಿ ವರ್ತಿಸಿ. ಉದ್ಯೋಗದ ಸ್ಥಳದಲ್ಲಿ ನಿಮ್ಮನ್ನು ನಿರ್ಲಕ್ಷಿಸಲಾಗುವುದು. ವೃತ್ತಿ ಜೀವನದ ವೇಗವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಹೊಸ ಪುಸ್ತಕವನ್ನು ಖರೀದಿಸಲಿದ್ದೀರಿ. ನಕಾರಾತ್ಮಕ ಆಲೋಚನೆಗಳಿಂದ ಜೀವನದಲ್ಲಿ ದುಃಖಿತರಾಗುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಮನರಂಜನೆಗಾಗಿ ಸಮಯ ಮೀಸಲಿರಿಸಲಿದ್ದೀರಿ. ದೂರ ಪ್ರಯಾಣ ಹೊರಡುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ.

ಮಕರ :ಕೋಪದ ಮೇಲೆ ನಿಯಂತ್ರಣವಿರಲಿ. ಭಾವನಾತ್ಮಕವಾಗಿ ವರ್ತಿಸುವುದನ್ನು ತಪ್ಪಿಸಿ. ಸಹೋದ್ಯೋಗಿಗಳಿಂದ ಮೋಸ ಹೋಗಲಿದ್ದೀರಿ. ಒರಟು ಭಾಷೆ ಬಳಸುವುದನ್ನು ನಿಯಂತ್ರಿಸಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಮತ್ತೆ ಖರೀದಿಸಲಿದ್ದೀರಿ. ಕ್ರೀಡೆಯಲ್ಲಿ ಹೆಚ್ಚು ಕಾಲ ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಚಿಂತಿತರಾಗುವಿರಿ. ಶಿಸ್ತುಬದ್ಧ ಜೀವನ ನಿಮ್ಮದಾಗಲಿದೆ. ಉದ್ಯೋಗ ಬದಲಾವಣೆ ಮಾಡುವುದು ಒಳ್ಳೆಯದಲ್ಲ. ಆತುರದಿಂದ ನಿರ್ಧಾರ ತೆಗೆದುಕೊಳ್ಳದಿರಿ. ದೇವಾಲಯಗಳಿಗೆ ಭೇಟಿ ನೀಡಲಿದ್ದೀರಿ. ಉದ್ಯೋಗದ ಸ್ಥಳದಲ್ಲೇ ಹೆಚ್ಚಿನ ಸಮಯ ಕಳೆಯುತ್ತೀರಿ. ಮಕ್ಕಳ ವಿಚಾರದಲ್ಲಿ ನಿರಾಸೆಗೊಳ್ಳುವಿರಿ.

ಕುಂಭ : ಪಾದದ ನೋವಿನ ನಿವಾರಣೆ ಬಗ್ಗೆ ಗಮನ ಹರಿಸಿ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಅಸಮತೋಲನಗೊಳ್ಳಲಿದೆ. ಅನಗತ್ಯ ಖರ್ಚುಗಳಿಂದ ದೂರ ಉಳಿಯಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಮಾಜದಲ್ಲಿ ಗೌರವ ಅಧಿಕವಾಗಲಿದೆ. ಒಡಹುಟ್ಟಿದವರ ಆರೋಗ್ಯದ ಬಗ್ಗೆ ಗಮನವಿರಲಿ. ಕುಟುಂಬದ ಜವಾಬ್ದಾರಿ ಅಧಿಕವಾಗಲಿದೆ. ವೈಯಕ್ತಿಕ ಜೀವನದಲ್ಲಿ ನಿರಂತರ ಏರಿಳಿತಗಳಿಂದಾಗಿ ಆತಂಕಕ್ಕೆ ಒಳಗಾಗುತ್ತೀರಿ. ದಿಡೀರನೆ ಕೋಪಗೊಳ್ಳುತ್ತೀರಿ. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಕುಟುಂಬದ ಸದಸ್ಯರನ್ನು ಭೇಟಿಯಾಗಲಿದ್ದೀರಿ. ಮನೆಗೆ ಅತಿಥಿಗಳ ಆಗಮನವಾಗಬಹುದು.

ಮೀನ : ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಹಣ ವ್ಯಯವಾಗಲಿದೆ. ಮಾನಸಿಕ ಒತ್ತಡ ಅಧಿಕಗೊಳ್ಳಲಿದೆ. ರಹಸ್ಯ ಮೂಲಗಳಿಂದ ಹಣಕಾಸಿನ ಲಾಭ ಪಡೆಯಲಿದ್ದೀರಿ. ದೀರ್ಘಾವಧಿ ಹೂಡಿಕೆಗಳಿಂದ ಉತ್ತಮ ಲಾಭ ಪಡೆಯುವಿರಿ. ಒಡಹುಟ್ಟಿದವರಿಗಾಗಿ ಉಡುಗೊರೆ ನೀಡಲಿದ್ದೀರಿ. ಮೇಲಾಧಿಕಾರಿಗಳಿಂದ ಉತ್ತಮ ಮೆಚ್ಚುಗೆ ಗಳಿಸುವಿರಿ. ಪ್ರವಾಸದಿಂದ ಉತ್ತಮ ಲಾಭ ಗಳಿಸಬಹುದು. ಅಧ್ಯಯನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ನಿಮ್ಮ ಪ್ರಗತಿಯನ್ನು ಕಂಡು ಇತರರು ಅಸೂಯೆ ಪಡುವ ಸಾಧ್ಯತೆಗಳಿವೆ. ಮಕ್ಕಳಿಂದ ಸಂತೋಷ ಉಂಟಾಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಂಡುಬರಲಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
Astrologyhoroscopespredictionweekly
0 FacebookTwitterPinterestEmail
admin

previous post
ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ದೊರೆಯದು!
next post
ದಿನಭವಿಷ್ಯ : ಭಾನುವಾರ,  14 ಏಪ್ರಿಲ್ 2024

You may also like

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026

ಹೆಚ್ಚು ಆಸ್ತಿ ಗಳಿಕೆ: ಮಾಜಿ ಸಚಿವ ಜಮೀರ್‌ಗೆ ಸಂಕಷ್ಟ

July 11, 2026

ಸಿದ್ದರಾಮಯ್ಯ ಮೊಮ್ಮಗನಿಗೆ ರಾಜಕೀಯ ತಾಲೀಮು

July 6, 2026

ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ

July 4, 2026

ಗೃಹಜ್ಯೋತಿ ಸೇರಿದಂತೆ 5 ಗ್ಯಾರಂಟಿಗಳಿಗೂ ಕಡಿವಾಣ

July 1, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

May 26, 2026

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೇ 3ರ ಪರೀಕ್ಷೆ ರದ್ದು

May 12, 2026

ಎಸ್‌ಎಸ್‌ಎಲ್‌ಸಿ ತೇರ್ಗಡೆಯಲ್ಲಿ ಐತಿಹಾಸಿಕ ದಾಖಲೆ

April 23, 2026

ಎಸ್‌ಎಸ್‌ಎಲ್‌ಸಿ ಅಂಕ ಪದ್ಧತಿ ಮುಂದುವರೆಸಿ

April 21, 2026

Social Networks

Facebook Twitter Instagram Linkedin Youtube Email Rss

KMS Analysis

  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026

Categories

  • Special Story (521)
  • ಅಂಕಣ (109)
  • ಉದ್ಯೋಗ (340)
  • ದಿನ ಭವಿಷ್ಯ (110)
  • ರಾಜಕೀಯ (2,015)
  • ರಾಜ್ಯ (2,329)
  • ರಾಷ್ಟ್ರ (2,294)
  • ವಿಶ್ಲೇಷಣೆ (198)
  • ಶಿಕ್ಷಣ (401)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

    July 20, 2026

KMS Special

  • ಡಿಕೆಶಿ ಸಂಪುಟ ವಿಸ್ತರಣೆಗೆ ನೀಟ್ ಹೋರಾಟ ಕಂಟಕ

    July 22, 2026
  • ನಾಳೆ ಮಧ್ಯಾನ್ಹ 2-20ಕ್ಕೆ ಡಿಕೆಶಿ ಸಂಪುಟ ವಿಸ್ತರಣೆ

    July 21, 2026
  • ಬರಪೀಡಿತ ಘೋಷಣೆಗೆ ನಾಳೆ ತುರ್ತು ಸಂಪುಟ ಸಭೆ

    July 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವರ್ಚಸ್ಸುಳ್ಳ ಪಕ್ಷನಿಷ್ಠ ಶಾಸಕರಿಗೆ ಮಂತ್ರಿ ಭಾಗ್ಯ

July 20, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ