Saturday, November 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, November 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಉದ್ಯೋಗರಾಜಕೀಯರಾಜ್ಯರಾಷ್ಟ್ರಶಿಕ್ಷಣ

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

by admin November 13, 2026
written by admin November 13, 2026 0 comments 2 minutes read
0FacebookTwitterPinterestEmail
6

ಬೆಂಗಳೂರು:ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮತ್ತು ಅದರ ನಾಯಕರು ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ಹರಿಹಾಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ರಾಜ್ಯಕ್ಕೆ ಯಾವ ರೀತಿ ಕೊಡುಗೆಗಳನ್ನು ಕೇಂದ್ರ ನೀಡುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲೇ ವಿವರಿಸಿದರು.

ಸದಾಕಾಲ ಕೊಡುಗೆಗಳನ್ನು ನೀಡಿದೆ

ನಮ್ಮ ಮೆಟ್ರೋ ನೂತನ ಪಿಂಕ್‌ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ನಂತರ ಐಐಎಂಬಿ ಆಡಿಟೋರಿಯಂನಲ್ಲಿ, 15,600 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೆಟ್ರೋ ರೈಲ್ವೆ ಜಾಲ ಸೇರಿದಂತೆ ರಾಜ್ಯದ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ಸದಾಕಾಲ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದರು.  

ಕರ್ನಾಟಕದಲ್ಲಿನ ಸಂಪನ್ಮೂಲವನ್ನು ರಾಜ್ಯಕ್ಕೆ ಸೀಮಿತಗೊಳಿಸದೆ, ರಾಷ್ಟ್ರದ ಅಭಿವೃದ್ಧಿ ಪಥಕ್ಕೆ ಜೋಡಿಸಲು ರಸ್ತೆ, ರೈಲು, ಜಲ ಹಾಗೂ ವಾಯುಮಾರ್ಗದ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಇಂದು ಚಾಲನೆ ನೀಡಿದ ಯೋಜನೆಗಳು ವಿಕಸಿತ ಕರ್ನಾಟಕಕ್ಕೆ ವೇಗ ನೀಡುವ ಜೊತೆಗೆ ವಿಕಸಿತ ಭಾರತ ನಿರ್ಮಾಣಕ್ಕೂ ದಾರಿ ಮಾಡಿಕೊಡಲಿವೆ.

ಹೊಸ ದೃಷ್ಟಿಕೋನದ ಫಲಿತಾಂಶ

ನಮ್ಮ ಮೆಟ್ರೋ ಯಶಸ್ಸು ಕೇವಲ ಒಂದು ಯೋಜನೆಗೆ ಸೀಮಿತವಾಗಿಲ್ಲ, ಇದು ಸುಗಮ ಜೀವನ ಮತ್ತು ಪ್ರಯಾಣ ಕುರಿತಾದ ರಾಷ್ಟ್ರದ ಹೊಸ ದೃಷ್ಟಿಕೋನದ ಫಲಿತಾಂಶವಾಗಿದೆ.

ಭಾರತೀಯ ರೈಲ್ವೆಯು ಗತಕಾಲದ ಹಳೇ ಮನಃಸ್ಥಿತಿಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದೆ, ರೈಲ್ವೆಯು ಈಗ ಹೊಸ ಪರಂಪರೆ ಹಾಗೂ ಇತಿಹಾಸ ನಿರ್ಮಿಸುತ್ತಿದೆ.

ನಮ್ಮ ರೈಲು ನಿಲ್ದಾಣಗಳು, ಎಂಜಿನ್‌ಗಳು ಹಾಗೂ ಬೋಗಿಗಳು ಪ್ರತಿಯೊಂದೂ ಹಿಂದೂಸ್ತಾನದಲ್ಲೇ ನಿರ್ಮಾಣವಾಗಿದೆ, ಒಂದೇ ಭಾರತ್‌ ರೈಲುಗಳಾಗಿರಲಿ, ಅಮೃತಭಾರತ್‌ ನಿಲ್ದಾಣಗಳಾಗಿರಲಿ ಇವು ವಿಕಸಿತ ಭಾರತ ರೈಲ್ವೆ ಸೇವೆಗಳ ಒಂದು ನೋಟವನ್ನು ಪ್ರತಿನಿಧಿಸುತ್ತವೆ.

ಅಮೃತ್‌ ಭಾರತ್‌ ನಿಲ್ದಾಣ

ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್‌ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಅಮೃತ್‌ ಭಾರತ್‌ ನಿಲ್ದಾಣಗಳಾಗಿ ರೂಪುಗೊಳ್ಳುತ್ತಿವೆ.

ಅದರಲ್ಲೂ ಪ್ರಮುಖವಾಗಿ ಮೆಟ್ರೋ ಜಾಲಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಪ್ರಧಾನಿ ಅವರು, 2014ರಲ್ಲಿ ಕರ್ನಾಟಕದಲ್ಲಿ 17 ಕಿಲೋ ಮೀಟರ್‌ ಇದ್ದ ಮೆಟ್ರೋ ಮಾರ್ಗ ಈಗ ಅದು 100 ಕಿಲೋ ಮೀಟರ್‌ ಆಗಿದೆ ಎಂದು ಶಿವಕುಮಾರ್‌ ಕಡೆಗೆ ತಿರುಗಿ ನಗುತ್ತಲೇ ವಿವರಿಸಿದರು.

ಬಡವರು, ಮಧ್ಯಮ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡೇ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ, ಅವುಗಳಲ್ಲಿ ಕರ್ನಾಟಕಕ್ಕೆ ಎಷ್ಟು ಪಾಲು ದೊರೆಯಬೇಕೋ ಅದು ದೊರೆತಿದೆ, ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ.

ಸಂಪರ್ಕಿಸುವ ಮಹಾನ್‌ ಕಾರ್ಯ

ಅದರಲ್ಲೂ ಮೆಟ್ರೋ ರೈಲು ವ್ಯವಸ್ಥೆ ಬಡವರು ಮತ್ತು ಮಧ್ಯಮದಮಧ್ಯಮ ವರ್ಗದವರಿಗೆ ಹೆಚ್ಚು ಪ್ರಯೋಜಕಾರಿಯಾಗಿದೆ, ಇದನ್ನು ಗಮನದಲ್ಲಿ ಇಟ್ಟುಕೊಂಡೇ, ಒಂದು ತುಂದಿಯಿಂದ ಇನ್ನೊಂದು ತುದಿಗೆ ಸಂಪರ್ಕಿಸುವ ಮಹಾನ್‌ ಕಾರ್ಯ ಇದಾಗಿದೆ.

ಬೆಂಗಳೂರು ರಾಷ್ಟ್ರದ ಸಿಲಿಕಾನ್‌ ವ್ಯಾಲಿ, ಭಾರತದ ಆರ್ಥಿಕತೆಆರ್ಥಿಕತೆಯ ಬೆಳವಣಿಗೆಗೆ ಎಂಜಿನ್‌ನಂತೆ ಕಾರ್ಯನಿರ್ವಹಿಸುತ್ತಿದೆ, ಕರ್ನಾಟಕದ ಅಭಿವೃದ್ಧಿ ಪಯಣವೂ ವಿಕಸಿತ ಭಾರತದ ಗುರಿಯೊಂದಿಗೆ  ಸಾಗುತ್ತಿದೆ ಎಂದರು.

ಸಾಫ್ಟ್‌ ವೇರ್‌ ಚಿಪ್‌ನಿಂದ ಶಿಪ್‌ (ಹಡಗು)ವರೆಗೂ ಉತ್ಪಾದನೆ ಆಗುತ್ತಿರುವುದಲ್ಲದೆ, ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

ಕರ್ನಾಟಕದಲ್ಲಿನ ಐಟಿ-ಬಿಟಿ ತಂತ್ರಜ್ಞಾನ ಭಾರೀ ಕೊಡುಗೆ ನೀಡುತ್ತಿದೆ, ಕೃತಕ ಬುದ್ಧಿಮತ್ತೆ (ಎಐ) ಕೇಂದ್ರಗಳು ಹೆಚ್ಚು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿವೆ ಎಂದರು.

ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡುತ್ತಿರುವ ಸಹಕಾರವನ್ನು ಉದಾಹರಣೆ ಸಹಿತ ವಿವರಿಸಿದ ಮೋದಿ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಬಜೆಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚಳ ಮಾಡಿದೆ, ವಂದೇ ಭಾರತ್ ರೈಲು, ಅಮೃತ್ ಭಾರತ್ ಸ್ಟೇಷನ್ ಹಾಗೂ ವಿಕಸಿತ ಭಾರತ ಯೋಜನೆಗಳ ಮೂಲಕ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ, ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳಲ್ಲಿ ಸಂವೇದನಾಶೀಲತೆ ಹಾಗೂ ಆಧುನೀಕತೆ ಎರಡೂ ಇದೆ, ಈಗ ವಿಮಾನ ನಿಲ್ದಾಣ ಮಟ್ಟದ ಸೌಕರ್ಯಗಳು ರೈಲು ನಿಲ್ದಾಣಗಳಲ್ಲೇ ಸಿಗುತ್ತಿವೆ ಎಂದರು.

ಚಿಪ್‌ನಿಂದ ಶಿಪ್‌ವರೆಗೆ, ಎಐಯಿಂದ ಕ್ವಾಂಟಮ್ ತಂತ್ರಜ್ಞಾನದವರೆಗೆ ಭಾರತ ಆಶಾಭಾವನೆಯಿಂದ ಸಾಗುತ್ತಿದೆ, ಇಂಧನ ಭದ್ರತೆಗೂ ನಾವು ಹೆಚ್ಚಿನ ಒತ್ತು ನೀಡಿದ್ದು, ಕಳೆದ ದಶಕದ ನಿರ್ಧಾರಗಳು ಸಂಕಷ್ಟದಿಂದ ಹೊರಬರಲು ನೆರವಾಗಿವೆ, ವಿದ್ಯುತ್ ಬಳಕೆಯಲ್ಲಿ ಅಲ್ಲದೆ, ವಿದ್ಯುತ್ ಉತ್ಪಾದನೆಯಲ್ಲೂ ನಾವು ಸ್ವಾವಲಂಬಿಗಳಾಗುತ್ತಿದ್ದೇವೆ, ಪಿಎಂ ಕುಸುಮ್ ಯೋಜನೆಯಡಿ ರಾಜ್ಯದ ಎಂಟು ಲಕ್ಷ ರೈತರಿಗೆ ಸಹಕಾರ ನೀಡಲಾಗಿದೆ ಎಂದರು.

2014ರಲ್ಲಿ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಪರಿಕಲ್ಪನೆಯೊಂದಿಗೆ ನಾವು ಹೆಜ್ಜೆ ಇಟ್ಟೆವು, ಇಂದು ಅದು ಸಾಕಾರವಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಬದುಕು ಸುಧಾರಿಸಿದೆ, ‘ನಿಯೋ ಮಧ್ಯಮ ವರ್ಗ’ ಭಾರತದ ಆರ್ಥಿಕತೆಯ ಇಂಜಿನ್ ಆಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಬೆಂಗಳೂರಿನ ಯೋಗದಾನ ದೊಡ್ಡದು

ಇದು ಟೆಕ್ ಸಿಟಿ ಹಾಗೂ ಐಟಿ-ಬಿಟಿ ಸಿಟಿ, ದೇಶದ ಆರ್ಥಿಕತೆಯಲ್ಲಿ ಬೆಂಗಳೂರಿನ ಯೋಗದಾನ ಬಹಳ ದೊಡ್ಡದಿದೆ, ಇಂದು ಪಿಂಕ್ ಲೈನ್ ಮೆಟ್ರೋಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ, ಮೆಟ್ರೋ ರೈಲು ವ್ಯವಸ್ಥೆ ನಗರದ ಸಂಪರ್ಕ ಸೇತುವಾಗಿದ್ದು, ಬೆಂಗಳೂರಿಗರ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಅಣ್ಣಮ್ಮ ತಾಯಿ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ನಮನ ಸಲ್ಲಿಸಿ, ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಅವರನ್ನು ಸ್ಮರಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cm d k shivakumarinauguration in bengalurumetro railpink linepm narendra modi
0 FacebookTwitterPinterestEmail
admin

previous post
ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

You may also like

ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

November 12, 2026

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

November 11, 2026

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

November 9, 2026

ಸಂಪುಟಕ್ಕೆ ಬಹುಕೋಟಿ ಹಗರಣ ಆರೋಪಿ ನಾಗೇಂದ್ರ

November 7, 2026

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

November 6, 2026

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

ನೋಟಿಸ್‌ ನೀಡಿ ಬಂಧಿಸಲಿ, ನನ್ನ ತಾಕತ್ತು ತೋರಿಸುವೆ

November 3, 2026

ಪ್ರಜ್ವಲ್‌ ಪೆನ್‌ಡ್ರೈವ್‌ ಹಗರಣದಲ್ಲಿ ಡಿ.ಕೆ.ಶಿ. ಷಡ್ಯಂತ್ರ

November 2, 2026

ಮೈತ್ರಿ ಹೋರಾಟಕ್ಕೆ ದೇವೇಗೌಡ-ಬಿಎಸ್‌ವೈ ಸಮ್ಮತಿ

October 31, 2026

ನಿಯಮ ಮೀರಿ ಪಟಾಕಿ ಸಿಡಿಸಿದರೆ ಕಠಿಣ ಕ್ರಮ

October 30, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (611)
  • ಅಂಕಣ (109)
  • ಉದ್ಯೋಗ (365)
  • ದಿನ ಭವಿಷ್ಯ (110)
  • ರಾಜಕೀಯ (2,103)
  • ರಾಜ್ಯ (2,419)
  • ರಾಷ್ಟ್ರ (2,383)
  • ವಿಶ್ಲೇಷಣೆ (202)
  • ಶಿಕ್ಷಣ (419)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

    November 13, 2026
  • ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

    November 12, 2026
  • ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

    November 11, 2026

KMS Special

  • ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

    November 13, 2026
  • ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

    November 12, 2026
  • ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

    November 11, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

November 12, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ