ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 : 10 -12 : 57
ಅಮೃತ ಘಳಿಗೆ: ಇಲ್ಲ
ಕಿರು ಪಂಚಾಂಗ
ಸೋಮವಾರ, 19 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಶುಕ್ಲ
ತಿಥಿ : ದಶಮಿ
ನಕ್ಷತ್ರ : ಮೃಗಶಿರ
ಯೋಗ : ವಿಷ್ಕುಂಭ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 41
ಸೂರ್ಯಾಸ್ತ : ಸಂಜೆ 06 : 26
ರಾಹುಕಾಲ : 08 : 09 – 09: 37
ಯಮಗಂಡ ಕಾಲ : 11 : 05 – 12 : 34
ಗುಳಿಕಕಾಲ : 02 : 02 – 03 : 30
ರಾಶಿ ಫಲ
ಮೇಷ : ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹಿಂದಿನ ಅನುಭವಗಳಿಂದ ಲಾಭವಿದೆ. ಉತ್ತಮ ವಾಗ್ಮೀಗಳಾಗುತ್ತೀರಿ.
ವೃಷಭ : ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ಹಿರಿಯ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರೆ ಶುಭವಾಗಲಿದೆ.
ಮಿಥುನ : ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ವಿದ್ಯಾರ್ಥಿಗಳಿಗೆ ಶುಭ ದಿನ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಕಟಕ : ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿಮ್ಮ ಆಲೋಚನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಅನಾರೋಗ್ಯ ಸಮಸ್ಯೆ ಕಾಡಬಹುದು.
ಸಿಂಹ : ಆದಾಯದ ಮೂಲಗಳು ಹೆಚ್ಚಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಒಡಹುಟ್ಟಿದವರಿಂದ ಸಹಾಯ ಹಸ್ತ ದೊರೆಯಲಿದೆ.
ಕನ್ಯಾ : ತಂದೆಯ ಆರೋಗ್ಯದ ಕಡೆ ಗಮನವಿರಲಿ. ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಸೂಕ್ತವಲ್ಲ. ಅಧಿಕ ಒತ್ತಡದ ಕೆಲಸವಿರುತ್ತದೆ.
ತುಲಾ : ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಉತ್ತಮ ದಿನ. ಆತ್ಮವಿಶ್ವಾಸ ಕುಗ್ಗಬಹುದು.
ವೃಶ್ಚಿಕ : ಕುಟುಂಬದವರೊಂದಿಗೆ ಕಲಹ. ದೂರ ಪ್ರಯಾಣ ಮಾಡುವುದನ್ನು ತಪ್ಪಿಸಿ. ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ.
ಧನಸ್ಸು : ಸಂಗಾತಿ ಉಡುಗೊರೆ ನೀಡಲಿದ್ದಾರೆ. ಮಕ್ಕಳ ವಿಚಾರದಲ್ಲಿ ಸಂತೋಷ ಪಡುವಿರಿ. ಪ್ರೇಮಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.
ಮಕರ : ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಹೋದ್ಯೋಗಿಗಳಿಂದ ಕಿರುಕುಳ. ಕೆಲಸದಲ್ಲಿ ಕಠಿಣ ಶ್ರಮದ ಅವಶ್ಯಕತೆ ಇದೆ.
ಕುಂಭ : ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಪ್ರೇಮಿಗಳು ದೂರವಾಗಬಹುದು. ಹಿತಶತ್ರುಗಳು ಹೆಚ್ಚಲಿದ್ದಾರೆ.
ಮೀನ : ಹಣಕಾಸಿನ ಸಮಸ್ಯೆ ತಲೆದೋರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಅಜೀರ್ಣ ಸಮಸ್ಯೆ ಕಾಡಬಹುದು.