ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 :09 -12 : 56
ಅಮೃತ ಘಳಿಗೆ: ಇಲ್ಲ
ಕಿರು ಪಂಚಾಂಗ
ಮಂಗಳವಾರ, 27 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ತದಿಗೆ
ನಕ್ಷತ್ರ : ಹಸ್ತ
ಯೋಗ : ಶೂಲ
ಕರಣ : ವಣಿಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 37
ಸೂರ್ಯಾಸ್ತ : ಸಂಜೆ 06 : 28
ರಾಹುಕಾಲ : 03: 30 – 04: 59
ಯಮಗಂಡ ಕಾಲ : 09 : 35 – 11 : 04
ಗುಳಿಕಕಾಲ : 12 : 32 – 02: 01
ರಾಶಿ ಫಲ
ಮೇಷ : ಕಾಲಿನ ನೋವು ಕಾಣಿಸಿಕೊಳ್ಳಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಸೋಮಾರಿತನ ಕಾಡುವುದು.
ವೃಷಭ : ಹೊಸ ಸ್ನೇಹಿತರ ಪರಿಚಯವಾಗುವುದು. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ. ಪ್ರೇಮಿಗಳಿಗೆ ಉತ್ತಮ ದಿನ.
ಮಿಥುನ : ಕೆಲಸ-ಕಾರ್ಯಗಳಲ್ಲಿ ಅಡೆ-ತಡೆ ಎದುರಾಗಬಹುದು. ವ್ಯಾಪಾರದಲ್ಲಿ ಯಶಸ್ಸು. ಆಪ್ತರ ವರ್ತನೆಯಿಂದ ಚಿಂತಿತರಾಗುವಿರಿ.
ಕಟಕ : ಕೆಲಸದಲ್ಲಿ ಪ್ರಗತಿ. ಶತ್ರುಗಳ ಪ್ರಯತ್ನ ವಿಫಲವಾಗಲಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
ಸಿಂಹ : ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಆಪ್ತರಿಂದ ಯಾವುದೇ ನಿರೀಕ್ಷೆ ಬಯಸದಿರಿ. ಕುಟುಂಬದಲ್ಲಿ ವೈಮನಸ್ಯ ತಲೆದೋರಬಹುದು.
ಕನ್ಯಾ : ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗದಲ್ಲಿ ಮುಂಬಡ್ತಿ ದೊರೆಯುವ ಸಾಧ್ಯತೆಯುಂಟು. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ.
ತುಲಾ : ನಿಮ್ಮ ಕೈಕೆಳಗಿನ ಜನರಿಂದ ಲಾಭ ಗಳಿಸುವಿರಿ. ಕುಟುಂಬದಲ್ಲಿ ವೈಮನಸ್ಯ ಉಂಟಾಗಬಹುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಶ್ಚಿಕ : ಅನ್ಯರ ಭಾವನೆಗಳಿಗೆ ಬೆಲೆ ಕೊಡಿ. ಪ್ರೇಮಿಗೆ ಉಡುಗೊರೆ ನೀಡುತ್ತೀರಿ. ಹೊಸ ವ್ಯಾಪಾರ ಪ್ರಾರಂಭಕ್ಕೆ ಸಕಾಲ.
ಧನಸ್ಸು : ಮನೆಯಲ್ಲಿ ಶಾಂತಿಯ ವಾತಾವರಣ ಕಾಯ್ದುಕೊಳ್ಳುವಿರಿ. ಸಂಗಾತಿಯ ನಿರೀಕ್ಷೆಯಂತೆ ನಡೆದುಕೊಳ್ಳುವಿರಿ. ಆಸ್ತಿ ಖರೀದಿ ಯೋಗವಿದೆ.
ಮಕರ : ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ವಿನಮ್ರತೆಯಿಂದ ನಡೆದುಕೊಳ್ಳುವಿರಿ.
ಕುಂಭ : ಅನಗತ್ಯ ಖರ್ಚುಗಳು ಅಧಿಕಗೊಳ್ಳಬಹುದು. ಕುಟುಂಬದಲ್ಲಿ ಕಲಹ. ವಾಹನ ದುರಸ್ಥಿಗೊಳ್ಳಬಹುದು.
ಮೀನ : ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಆರ್ಥಿಕ ಲಾಭ ದೊರೆಯಬಹುದು.