ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 08 – 12 : 56
ಅಮೃತ ಘಳಿಗೆ : ಬೆಳಿಗ್ಗೆ05 : 12 – 6 :56
ಶುಕ್ರವಾರ, 1 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಷಷ್ಠಿ
ನಕ್ಷತ್ರ : ಸ್ವಾತಿ
ಯೋಗ : ಧೃವ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 35
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 11: 03 – 12: 32
ಯಮಗಂಡ ಕಾಲ : 03 : 30– 04: 59
ಗುಳಿಕಕಾಲ : 08 : 05 – 09: 34
ರಾಶಿ ಫಲ
ಮೇಷ : ಬಾಕಿ ಕಾರ್ಯಗಳು ಪೂರ್ಣಗೊಳ್ಳಲಿವೆ. ಹೊಸ ವ್ಯಾಪಾರ ಪ್ರಾರಂಭಿಸಲು ಸಕಾಲ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ.
ವೃಷಭ : ತಲೆನೋವಿನ ಸಮಸ್ಯೆ ಕಾಡಬಹುದು. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಧನಾತ್ಮಕ ಆಲೋಚನೆಗಳಿಂದ ದಿನವನ್ನು ಪ್ರಾರಂಭಿಸಿ.
ಮಿಥುನ : ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ. ಮಕ್ಕಳ ಬಗ್ಗೆ ಚಿಂತಿತರಾಗುತ್ತೀರಿ. ಹಣಕಾಸಿನ ಸಮಸ್ಯೆ ಎದುರಾಗಬಹುದು.
ಕಟಕ : ಮನೆಯ ವಾತಾವರಣವನ್ನು ಶಾಂತ ರೀತಿ ಕಾಪಾಡುವಿರಿ. ಆರೋಗ್ಯದ ಕಡೆ ಗಮನವಿರಲಿ. ಐಷಾರಾಮಿ ವಸ್ತುಗಳಿಗೆ ಹಣ ಖರ್ಚಾಗಲಿದೆ.
ಸಿಂಹ : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಪ್ರೇಮಿಗಳಿಗೆ ಉತ್ತಮ ದಿನ. ಕೌಟುಂಬಿಕ ಸೌಖ್ಯ.
ಕನ್ಯಾ : ಕೆಲಸದ ಒತ್ತಡ ಅಧಿಕವಾಗಲಿದೆ. ಆದಾಯದಲ್ಲಿ ಇಳಿಕೆ. ಮಾನಸಿಕ ಚಿಂತೆಗೆ ಒಳಗಾಗಬಹುದು.
ತುಲಾ : ಹಣದ ವಿಚಾರದಲ್ಲಿ ಜಿಪುಣರಾಗುತ್ತೀರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಆದಾಯದ ಮೂಲಗಳು ವೃದ್ಧಿಸಲಿವೆ.
ವೃಶ್ಚಿಕ : ಮಾನಸಿಕ ವೇದನೆಗೆ ಒಳಗಾಗುವಿರಿ. ಆರೋಗ್ಯ ಸಮಸ್ಯೆ ಕಾಡಲಿದೆ. ರಹಸ್ಯ ಶತ್ರುಗಳು ವೃದ್ಧಿಸಲಿದ್ದಾರೆ.
ಧನಸ್ಸು : ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವುಂಟು. ಷೇರು ಮಾರುಕಟ್ಟೆ ಮೂಲಕ ಲಾಭ ಗಳಿಸುವಿರಿ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ.
ಮಕರ : ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತೀರಿ. ಕೌಟುಂಬಿಕ ಸೌಖ್ಯ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.
ಕುಂಭ : ಅನಗತ್ಯ ವಿವಾದಗಳಿಂದ ದೂರವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಲಿವೆ.
ಮೀನ : ಆರೋಗ್ಯ ಸಮಸ್ಯೆ ಕಾಡಬಹುದು. ಕೆಟ್ಟ ಚಟಗಳಿಂದ ದೂರವಿರಿ. ಸೋಮಾರಿತನ ಒಳ್ಳೆಯದಲ್ಲ.