10 ಮಾರ್ಚ್ ಭಾನುವಾರದಿಂದ 16 ಮಾರ್ಚ್ 2024ರ ಶನಿವಾರದವರೆಗೆ
ರಾಶಿ ಫಲ
ಮೇಷ : ಭಿನ್ನಾಭಿಪ್ರಾಯಗಳನ್ನು ಮರೆತು ಉದ್ಯೋಗದಲ್ಲಿ ಮುನ್ನಡೆಯಿರಿ. ಮೇಲಾಧಿಕಾರಿಯೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪ್ರೇಮಿಗೆ ಉಡುಗೊರೆ ನೀಡುವಿರಿ. ಕುಟುಂಬದವರೊಂದಿಗೆ ನಿಮ್ಮ ಯೋಚನೆಯನ್ನು ಚರ್ಚಿಸಲಿದ್ದೀರಿ. ವೈವಾಹಿಕ ಜೀವನದಲ್ಲಿ ತಾಳ್ಮೆಯಿಂದ ವರ್ತಿಸಿ. ಅನಾರೋಗ್ಯಕ್ಕೆ ತುತ್ತಾಗಬಹುದು. ಸ್ನೇಹಿತರಿಂದ ಸಾಕಷ್ಟು ಸಹಾಯ ಪಡೆಯಲಿದ್ದೀರಿ.
ವೃಷಭ : ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾದ್ಯತೆ ಇದೆ. ದೇವಾಲಯಗಳಿಗೆ ಭೇಟಿ ನೀಡಬಹುದು. ಸಂಗಾತಿಯ ಬೆಂಬಲ ದೊರೆಯಲಿದೆ. ನಿಮ್ಮ ನಡತೆಯಿಂದ ಜನರು ಪ್ರಭಾವಿತರಾಗಲಿದ್ದಾರೆ. ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳಲಿದ್ದೀರಿ. ಚರ್ಮದ ಸಮಸ್ಯೆಗಳು ಕಾಡಬಹುದು. ಅನಗತ್ಯವಾಗಿ ಚಿಂತಿಸಬೇಡಿ. ವಿಶ್ರಾಂತಿಯ ಕೊರತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ.
ಮಿಥುನ : ಆರ್ಥಿಕ ಲಾಭದ ಮೂಲಗಳು ಹೆಚ್ಚಲಿವೆ. ಮನೆಯಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳಿ. ಖರ್ಚು ಅಧಿಕವಾಗಲಿದೆ. ಹಣದ ವಿಚಾರದಲ್ಲಿ ಯಾರನ್ನು ನಂಬದಿರಿ. ಅನಾರೋಗ್ಯದ ಸಮಸ್ಯೆ ಕಾಡಬಹುದು. ಕಾರ್ಯ ವಿಳಂಬವಾಗುವ ಸಾಧ್ಯತೆ ಅಧಿಕ. ವೈವಾಹಿಕ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ತಲೆದೋರಬಹುದು. ನೆರೆ- ಹೊರೆಯವರಿಂದ ಸನ್ಮಾನ ದೊರೆಯಲಿದೆ. ಮನೆ ದುರಸ್ಥಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ.
ಕಟಕ : ಪಾಲುದಾರಿಕೆ ವ್ಯವಹಾರದಲ್ಲಿ ಲಾಭವುಂಟು. ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮಾಡಬೇಕು. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ನಿಮ್ಮ ಅಹಂಕಾರ ಭಾವನೆಯಿಂದ ದೊಡ್ಡ ನಷ್ಟ ಉಂಟಾಗಲಿದೆ. ನ್ಯೂನತೆಯನ್ನು ಮರೆಮಾಚುವ ಬದಲು ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಮೇಲಾಧಿಕಾರಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ.
ಸಿಂಹ : ಮನರಂಚನೆ ಹಾಗೂ ಮೋಜಿನಲ್ಲಿ ಸಮಯ ಕಳೆಯುವಿರಿ. ಸಹೋದ್ಯೋಗಿಗಳ ಸಹಾಯದಿಂದ ಕಷ್ಟಕರ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದೀರಿ. ಅದೃಷ್ಟದ ಬೆಂಬಲ ನಿಮಗೆ ದೊರೆಯಲಿದೆ. ದಾಂಪತ್ಯದ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ಯಾವುದೇ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳದಿರಿ. ಆಹಾರ ಸೇವನೆಯ ಬಗ್ಗೆ ಜಾಗರೂಕವಾಗಿರಿ. ಆರೋಗ್ಯದ ಕಡೆಗೆ ಗಮನವಿರಲಿ.
ಕನ್ಯಾ : ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಆದಾಯದ ಮೂಲಗಳು ವೃದ್ಧಿಸಲಿವೆ. ಕಟುಂಬದವರೊಂದಿಗೆ ಸಂಬಂಧ ವೃದ್ಧಿಸಲಿದೆ. ದೂರ ಪ್ರಯಾಣ ಹೋಗುವ ಸಾಧ್ಯತೆಗಳು ಹೆಚ್ಚು. ಷೇರು ಮಾರುಕಟ್ಟೆಯಿಂದ ಲಾಭ ಗಳಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ತಲೆನೋವಿನ ಸಮಸ್ಯೆಗಳು ಕಾಡಬಹುದು. ಸಂಗಾತಿಯೊಂದಿಗಿನ ಸಂಬಂಧ ಹಾಳಾಗಬಹುದು. ಸಣ್ಣ ತಪ್ಪುಗಳಿಂದ ಪಶ್ಚಾತಾಪ ಪಡಲಿದ್ದೀರಿ.
ತುಲಾ : ಏಕಾಗ್ರತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸೌಹಾರ್ಧತೆ ಕಂಡುಬರಲಿದೆ. ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ. ಇತರರ ಮೇಲಿನ ನಿರೀಕ್ಷೆ ಒಳ್ಳೆಯದಲ್ಲ. ಶಿಸ್ತಿನ ಜೀವನ ನಿಮ್ಮದಾಗಲಿದೆ. ಸಮಯದ ಮಹತ್ವವನ್ನು ಅರಿತುಕೊಳ್ಳಿ. ಶೀತ ಸಂಬಂಧಿ ಕಾಯಿಲೆಗಳು ತಲೆದೋರಲಿವೆ. ಹತ್ತಿರದವರಿಂದ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕು.
ವೃಶ್ಚಿಕ : ಸಂಶೋಧಕರಿಗೆ ಉತ್ತಮ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆಗಳಿವೆ. ಹೊಸ ಕೆಲಸ ಪ್ರಾರಂಭಿಸಲು ಸಕಾಲ. ನಿಮ್ಮ ಪ್ರತಿಭೆಗೆ ತಕ್ಕ ಸನ್ಮಾನ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೋರಲಿವೆ. ಅನುಚಿತ ವರ್ತನೆಯಿಂದ ನಷ್ಟ ಅನುಭವಿಸುವಿರಿ. ಗಂಟಲು ನೋವಿನ ಸಮಸ್ಯೆಗೆ ತುತ್ತಾಗಬಹುದು. ಶಾಂತ ಮನಸ್ಸಿನಿಂದ ಯೋಚಿಸಿ. ನಿಮ್ಮವರಿಗೆ ನೀವು ಸಮಯ ನೀಡಲು ಸಾಧ್ಯವಾಗದಿರಬಹುದು. ದುಬಾರಿ ವಸ್ತುಗಳನ್ನು ಖರೀದಿಸಲಿದ್ದೀರಿ.
ಧನಸ್ಸು : ಜಾಣ್ಮೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಪಾರ್ಟಿಗಳಲ್ಲಿ ಭಾಗವಹಿಸಬಹುದು. ವಿವಾಹದ ಯೋಗ ಕೂಡಿ ಬರಲಿದೆ. ಕೃಷಿಯಿಂದ ಲಾಭ ಪಡೆಯುವಿರಿ. ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತು ಗೊಂದಲ ನಿವಾರಣೆಯಾಗಲಿದೆ. ಆಹಾರದ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ಸಮಸ್ಯೆಯಾಗಬಹುದು. ಗುಪ್ತ ವಿಚಾರಗಳು ಅನ್ಯರಿಗೆ ತಿಳಿಯುವ ಸಾಧ್ಯತೆಗಳಿವೆ. ತಂದೆಯೊಂದಿಗಿನ ವಾದವನ್ನು ತಪ್ಪಿಸಿ.
ಮಕರ : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಎಲ್ಲಾ ಕ್ಷೇತ್ರಗಳಿಂದ ಲಾಭ ದೊರೆಯಲಿದೆ. ಬಯಸಿದ ಕೆಲಸಗಳು ಸಕಾಲಕ್ಕೆ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಹಿರಿಯರಿಂದ ಆಶೀರ್ವಾದ ಪಡೆಯುತ್ತೀರಿ. ಅನಗತ್ಯ ಹಣವನ್ನು ವ್ಯರ್ಥ ಮಾಡಬೇಡಿ. ಯಾರಿಗೂ ಸಾಲ ನೀಡಬೇಡಿ. ಪ್ರೀತಿ ವಿಚಾರದಲ್ಲಿ ಅಸಡ್ಡೆ ತೋರಬೇಡಿ.
ಕುಂಭ : ಸಂಗಾತಿಯೊಂದಿಗೆ ದೂರ ಪ್ರಯಾಣ ಸಂಭವ. ವ್ಯಾಪಾರ ವೃದ್ಧಿಯಾಗುವುದು. ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ. ಅಭಿಮಾನಿಗಳ ಸಂಖ್ಯೆ ಹೆಚ್ಚುವುದು. ಅವಿವಾಹಿತರಿಗೆ ಸಂಗಾತಿ ಭಾಗ್ಯ ಸಿಗಲಿದೆ. ಮೇಲಾಧಿಕಾರಿಗಳ ಬೆಂಬಲದಿಂದ ಕೆಲಸ ಸುಲಭವಾಗಲಿದೆ. ಮನೋರಂಜನೆಗೆ ಅಧಿಕ ಸಮಯ ಮೀಸಲಿಡುತ್ತೀರಿ. ಸಾಲ ಪಡೆಯುವುದು ಸೂಕ್ತವಲ್ಲ. ಪ್ರೀತಿಯ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಮೀನ : ಜೀವನ ಶೈಲಿ ಉತ್ತಮ ರೀತಿಯಲ್ಲಿರಲಿದೆ. ಒಡಹುಟ್ಟಿದವರೊಂದಿಗಿನ ಸಂಬಂಧ ಉತ್ತಮವಾಗಲಿದೆ. ಅಧಿಕ ಕೆಲಸದೊತ್ತಡವಿರಲಿ. ಸಂಗಾತಿಯೊಂದಿಗಿನ ಸಂಬಂಧ ಸಿಹಿಯಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಅನಿರೀಕ್ಷಿತ ಬದಲಾವಣೆಗಳಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಿ. ಶೀತ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ವಿವಾದಗಳಿಂದ ದೂರವಿರುವುದು ಒಳ್ಳೆಯದು. Astrology