ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 58 – 12 : 47
ಅಮೃತ ಘಳಿಗೆ : ಬೆಳಿಗ್ಗೆ 10 : 29 – 11 : 59
ಗುರುವಾರ, 04 ಏಪ್ರಿಲ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ : ದಶಮಿ
ನಕ್ಷತ್ರ : ಶ್ರವಣ
ಯೋಗ : ಸಿದ್ಧಿ
ಕರಣ : ವಿಷ್ಠಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 14
ಸೂರ್ಯಾಸ್ತ : ಸಂಜೆ 06 : 31
ರಾಹುಕಾಲ : 01 : 55 – 03 : 27
ಯಮಗಂಡ ಕಾಲ : 06 : 14 – 07 : 46
ಗುಳಿಕಕಾಲ : 09 : 18 – 10 : 50
ರಾಶಿ ಫಲ
ಮೇಷ : ಅನ್ಯರನ್ನು ಅವಮಾನಿಸದಿರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಕೆಲಸದಲ್ಲಿ ಗುಣಮಟ್ಟ ಕಾಪಾಡುವುದರಿಂದ ಒಳ್ಳೆಯದಾಗಲಿದೆ.
ವೃಷಭ : ದೂರ ಪ್ರಯಾಣ ಹೊರಡಲಿದ್ದೀರಿ. ಮಕ್ಕಳ ನಡುವಳಿಕೆಯಿಂದ ತೊಂದರೆ ಉಂಟಾಗಬಹುದು. ದಾಂಪತ್ಯದಲ್ಲಿ ಸಾಮರಸ್ಯ ಕಂಡುಬರುವುದು.
ಮಿಥುನ : ನಿಮ್ಮ ಸ್ಥಾನವನ್ನು ಇತರರಿಗೆ ಬಿಟ್ಟುಕೊಡಬೇಡಿ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ. ತಾಳ್ಮೆಯಿಂದ ಕೆಲಸ ಮಾಡಿ.
ಕಟಕ : ಅನಾವಶ್ಯಕ ಚಿಂತೆ ಒಳ್ಳೆಯದಲ್ಲ. ಐಷಾರಾಮಿ ಜೀವನ ಅನುಭವಿಸಲಿದ್ದೀರಿ. ಕಠಿಣ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಲಿದ್ದೀರಿ.
ಸಿಂಹ : ಸ್ನೇಹಿತರಿಂದ ಬೆಂಬಲ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಒತ್ತಡದ ಜೀವನದಿಂದ ಹೊರಬರಲಿದ್ದೀರಿ.
ಕನ್ಯಾ : ಆಹಾರದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಮಾತಿನಲ್ಲಿ ಸಂಯಮವಿರಲಿ. ನಷ್ಟ ಸಾಧ್ಯತೆ ಅಧಿಕ.
ತುಲಾ : ಮೊಣಕಾಲಿನ ನೋವು ಅಧಿಕಗೊಳ್ಳಬಹುದು. ವಿವಾಹೇತರ ಸಂಬಂಧಗಳಿಂದ ದೂರವಿರಿ. ತಾಯಿಯ ಸಲಹೆ ಪಡೆಯುವುದು ಉತ್ತಮ.
ವೃಶ್ಚಿಕ : ಸಂಗಾತಿಯೊಂದಿಗೆ ಪ್ರಯಾಣ ಬೆಳಸಲಿದ್ದೀರಿ. ಹೊಸ ಜನರ ಸಂಪರ್ಕದಿಂದ ಲಾಭ ಗಳಿಸುವಿರಿ. ಪ್ರೇಮಿಗಳು ದೂರವಾಗುವ ಸಂಭವ ಹೆಚ್ಚು.
ಧನಸ್ಸು :ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರಲಿದೆ.
ಮಕರ : ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.
ಕುಂಭ : ಇತರರ ಮಾತನ್ನು ಅತಿಯಾಗಿ ನಂಬದಿರಿ. ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಲಿದೆ. ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು.
ಮೀನ : ದಾಂಪತ್ಯ ಜೀವನ ಸುಖಮಯವಾಗಲಿದೆ. ಆದಾಯ ಹೆಚ್ಚಲಿದೆ. ಅಸಹಾಯಕರಿಗೆ ನೆರವಾಗುವಿರಿ.