ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 53 – 12 : 43
ಅಮೃತ ಘಳಿಗೆ : ಸಂಜೆ 03 : 27 – 05 : 14
ಮಂಗಳವಾರ, 23 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ : ಹುಣ್ಣಿಮೆ
ನಕ್ಷತ್ರ : ಚಿತ್ತ
ಯೋಗ : ವಜ್ರ
ಕರಣ : ವಿಷ್ಠಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 03
ಸೂರ್ಯಾಸ್ತ : ಸಂಜೆ 06 : 33
ರಾಹುಕಾಲ : 03 : 26 – 04 : 59
ಯಮಗಂಡ ಕಾಲ : 09 : 10 – 10 : 44
ಗುಳಿಕಕಾಲ : 12 : 18 – 01 : 52
ರಾಶಿ ಫಲ
ಮೇಷ : ತುಂಬಾ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಬಗ್ಗೆ ಹತ್ತಿರದವರೇ ಅಸೂಯೆಯ ವರ್ತನೆ ತೋರಬಹುದು. ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಷಭ : ಕ್ರಾಂತಿಕಾರಿ ಆಲೋಚನೆಗಳಿಂದ ದಿನ ಕಳೆಯಲಿದ್ದೀರಿ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯಲಿದೆ. ಶುಭವಾರ್ತೆ ಕೇಳಲಿದ್ದೀರಿ.
ಮಿಥುನ : ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉತ್ತಮ ದಿನ. ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ. ವಿರೋಧಿಗಳಿಂದ ನಷ್ಟ ಅನುಭಿಸಲಿದ್ದೀರಿ.
ಕಟಕ : ಬಾಕಿ ಹಣವನ್ನು ಮರಳಿ ಪಡೆಯಲಿದ್ದೀರಿ. ದೊಡ್ಡ ಕನಸ್ಸಿನ ಗುರಿ ಸಾಧಿಸುವುದು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡಲಿದೆ. ವಿವಾದಿತ ವಿಷಯಗಳನ್ನು ಬಗೆಹರಿಸಲಿದ್ದೀರಿ.
ಸಿಂಹ : ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಅನೈತಿಕ ಚಟುವಟಿಕೆಗಳತ್ತ ಆಕರ್ಷಿತರಾಗಲಿದ್ದೀರಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ನಷ್ಟಕ್ಕೆ ಒಳಗಾಗುವಿರಿ.
ಕನ್ಯಾ : ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಮಾರ್ಕೆಟಿಂಗ್ ನಿಂದ ವಿಶೇಷ ಪ್ರಯೋಜನ ಪಡೆಯಲಿದ್ದೀರಿ. ಮನೆಯ ಹಿರಿಯರಿಂದ ಮಾರ್ಗದರ್ಶನ ಪಡೆಯಿರಿ.
ತುಲಾ : ದಾಂಪತ್ಯ ಜೀವನದಲ್ಲಿ ಪರಸ್ಪರ ಸಮರ್ಪಣಾ ಮನೋಭಾವ ಹೊಂದಿರುತ್ತೀರಿ. ಸಾಲ ನೀಡುವುದನ್ನು ತಪ್ಪಿಸಿ. ಪೋಷಕರ ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಶ್ಚಿಕ : ಏಕಾಗ್ರತೆಯಿಂದ ಕೆಲಸ ಮಾಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ದಿನ. ತೆರಿಗೆ ಸಂಬಂಧಿತ ಕಾರ್ಯಗಳನ್ನು ಇತ್ಯರ್ಥಗೊಳಿಸಿ.
ಧನಸ್ಸು : ಪೋಷಕರು ನಿಮ್ಮ ಬಗ್ಗೆ ಹೆಮ್ಮೆ ಪಡಲಿದ್ದಾರೆ. ಹಠಾತ್ ಧನಾಗಮನವಾಗಲಿದೆ. ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗಾವಕಾಶ ದೊರೆಯಲಿದೆ.
ಮಕರ : ಕುಟುಂಬದಲ್ಲಿ ಸಾಮರಸ್ಯವಿರಲಿದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಒದಗಿ ಬರಲಿವೆ. ವ್ಯಾಪಾರದಲ್ಲಿ ಹೂಡಿಕೆ ಮಾಡುವುದರಿಂದ ಲಾಭವಾಗಲಿದೆ.
ಕುಂಭ : ಕಾನೂನಿನ ತೊಡಕುಗಳು ಎದುರಾಗಲಿವೆ. ಬ್ಯಾಂಕಿನಿಂದ ಸಾಲ ಪಡೆಯಲಿದ್ದೀರಿ. ಹೊಸ ಮನೆ ಖರೀದಿಸುವಾಗ ಎಚ್ಚರಿಕೆಯಿಂದ ಇರಿ.
ಮೀನ : ಆಮದು, ರಫ್ತು ವ್ಯವಹಾರಗಳಿಂದ ಲಾಭ ಗಳಿಸಲಿದ್ದೀರಿ. ನ್ಯಾಯಾಲಯದ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.