Wednesday, November 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, November 18, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಕುಮಾರಕೃಪದ ʼಗಂಗಾʼ ಮುಖ್ಯಮಂತ್ರಿ ಅಧಿಕೃತ ನಿವಾಸ

by admin November 16, 2026
written by admin November 16, 2026 0 comments 1 minutes read
0FacebookTwitterPinterestEmail
15

ಬೆಂಗಳೂರು:ಕುಮಾರಕೃಪಾ ಇಂದಿನಿಂದ ಮುಖ್ಯಮಂತ್ರಿ ಅವರ ಅಧಿಕೃತ ಸರ್ಕಾರಿ ನಿವಾಸವಾಗಲಿದ್ದು, ಈ ಕಟ್ಟಡಕ್ಕೆ ʼಗಂಗಾʼ ಎಂಬ ನಾಮಕರಣ ಮಾಡಲಾಗಿದೆ.

ಸರ್ಕಾರಿ ಅತಿಥಿ ಗೃಹದಲ್ಲಿ ಕುಮಾರಕೃಪಾವನ್ನು ಗಂಗಾ ಎಂದು ಮರುನಾಮಕಾರಣ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ತಮ್ಮ ಕುಟುಂಬದೊಂದಿಗೆ ಗೃಹಪ್ರವೇಶ ಪೂಜೆ ನಡೆಸಿದರು.

ʼಗಂಗಾʼ ನಾಮಕರಣ

ಪೂಜಾ ಕಾರ್ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕುಮಾರಕೃಪಾ ʼಗಂಗಾʼ ಇನ್ನು ಮುಂದೆ ಅಧಿಕೃತ ನಿವಾಸವಾಗಿರುತ್ತದೆ ಎಂದರು.

ಕುಮಾರಕೃಪಾ ಕಟ್ಟಡದ ಪರಂಪರೆ ಉಳಿಸಿಕೊಂಡು ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ, ಕಾಮಗಾರಿಗೆ ಹೆಚ್ಚಿನ ಹಣ ಬಳಕೆ ಮಾಡಿಲ್ಲ, ಮೊದಲಿದ್ದ ಪೀಠೋಪಕರಣಗಳನ್ನೂ ಉಳಿಸಿಕೊಂಡು, ಜೊತೆಗೆ ನಮ್ಮ ಮನೆಯ ಕೆಲವು ಪೀಠೀಪಕರಣಗಳನ್ನು ಗಂಗಾ ನಿವಾಸದಲ್ಲಿ ಬಳಸಿಕೊಳಲಾಗುತ್ತಿದೆ ಎಂದು ಸ್ಪಷ್ಪಪಡಿಸಿದರು.  

ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪಾ ಅತಿಥಿ ಗೃಹ ಉಪಯೋಗ ಆಗುತ್ತಿರಲಿಲ್ಲ, ಆದ್ದರಿಂದ ಇದನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಿ ಖಾಸಗಿ ಪೂಜೆ ನೆರವೇರಿಸಲಾಗಿದೆ.

ಎಲ್ಲರ ಭೇಟಿ ಮಾಡುವೆ

ಬರುವ ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಿ, ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ.

ಕೆಲವರು ಇದಕ್ಕೆ ಆಗಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಬಹುದು, ಭದ್ರತೆ ಹಾಗೂ ರಸ್ತೆ ಸೌಕರ್ಯಕ್ಕೆ ಹೆಚ್ಚು ವೆಚ್ಚವಾಗಿದೆ, ಉಳಿದಂತೆ ಶೇ.90 ಪೀಠೋಪಕರಣಗಳು ನನ್ನ ಖಾಸಗಿಯಾಗಿವೆ, ಕಡಿಮೆ ಮೌಲ್ಯದ (60-80 ರೂ.) ಗ್ರಾನೈಟ್ ಕಲ್ಲನ್ನು ಬಳಸಲಾಗಿದೆ, ವೆಚ್ಚದ ಬಗ್ಗೆ ಟೀಕೆ ಮಾಡುತ್ತಾರೆ, ಕೆಲವರು ಆರ್‌ಟಿಐ ಹಾಕಿದ್ದಾರೆ, ಕೆಲವರು ಟೀಕೆ ಮಾಡುತ್ತಿದ್ದಾರೆ, ಅದು ಅವರ ಕರ್ತವ್ಯ, ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವೆ, ಬಂದು ನೋಡಲಿ ಎಂದರು.

ಕುಮಾರಕೃಪಾದಲ್ಲಿ ಶಾಸಕರು, ಅಧಿಕಾರಿಗಳ ಭೇಟಿ, ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು, ಸಾರ್ವಜನಿಕ ಭೇಟಿ ಕೃಷ್ಣಾದಲ್ಲಿ ಇದಕ್ಕಾಗಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ, ಇದಕ್ಕೆ ಇನ್ನೂ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ.

ಯಾರೂ ಶಾಶ್ವತವಲ್ಲ

ನಾವು ಯಾರು ಇಲ್ಲಿ ಶಾಶ್ವತವಲ್ಲ, ರಾಜ್ಯದ ಮುಖ್ಯಮಂತ್ರಿ ಆದವರಿಗೆ ಇದು ಅನುಕೂಲವಾಗಲಿದೆ, ಕುಮಾರಕೃಪಾ ಅತಿಥಿ ಗೃಹ ಜಾಗ ಉಪಯೋಗವಾಗಲಿ ವ್ಯರ್ಥವಾಗುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ.

ಮುಖ್ಯಮಂತ್ರಿ ಅವರ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರವುಗೊಳಿಸದ ಹಿನ್ನೆಲೆಯಲ್ಲಿ ಶಿವಕುಮಾರ್‌, ಕುಮಾರಕೃಪಾವನ್ನೇ ಸರ್ಕಾರಿ ನಿವಾಸವಾಗಿ ಪರಿವರ್ತಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಿಂದ ನೂತನ ʼಗಂಗಾʼ ನಿವಾಸಕ್ಕೆ ಅಶೋಕ ಹೋಟೆಲ್‌ ಹಿಂಭಾಗದಿಂದ ಪ್ರತ್ಯೇಕ ದಾರಿ ನಿರ್ಮಿಸಲಾಗಿದ್ದು, ಈ ಮಾರ್ಗವನ್ನು ಮುಖ್ಯಮಂತ್ರಿ ಹಾಗೂ ಅವರ ಸಚಿವಾಲಯ ಸಿಬ್ಬಂದಿ ಮಾತ್ರ ಬಳಸಬಹುದಾಗಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
chief minister's official residencecm d k shivakumarKumara Krupanew name 'ganga' to the building
0 FacebookTwitterPinterestEmail
admin

previous post
ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ
next post
ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

You may also like

ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

November 17, 2026

ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ

November 14, 2026

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

November 13, 2026

ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

November 12, 2026

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

November 11, 2026

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

November 9, 2026

ಸಂಪುಟಕ್ಕೆ ಬಹುಕೋಟಿ ಹಗರಣ ಆರೋಪಿ ನಾಗೇಂದ್ರ

November 7, 2026

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

November 6, 2026

ಬಸ್‌ ಪ್ರಯಾಣ ದರ ಶೇ.23ರಿಂದ ಶೇ.37ರಷ್ಟು ಹೆಚ್ಚಳ

November 4, 2026

ನೋಟಿಸ್‌ ನೀಡಿ ಬಂಧಿಸಲಿ, ನನ್ನ ತಾಕತ್ತು ತೋರಿಸುವೆ

November 3, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (614)
  • ಅಂಕಣ (109)
  • ಉದ್ಯೋಗ (365)
  • ದಿನ ಭವಿಷ್ಯ (110)
  • ರಾಜಕೀಯ (2,106)
  • ರಾಜ್ಯ (2,422)
  • ರಾಷ್ಟ್ರ (2,386)
  • ವಿಶ್ಲೇಷಣೆ (202)
  • ಶಿಕ್ಷಣ (419)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

    November 17, 2026
  • ಕುಮಾರಕೃಪದ ʼಗಂಗಾʼ ಮುಖ್ಯಮಂತ್ರಿ ಅಧಿಕೃತ ನಿವಾಸ

    November 16, 2026
  • ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ

    November 14, 2026

KMS Special

  • ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

    November 17, 2026
  • ಕುಮಾರಕೃಪದ ʼಗಂಗಾʼ ಮುಖ್ಯಮಂತ್ರಿ ಅಧಿಕೃತ ನಿವಾಸ

    November 16, 2026
  • ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ

    November 14, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

November 17, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ