Friday, November 20, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Friday, November 20, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರಶಿಕ್ಷಣ

ಸಂಶೋಧನೆ ಹೆಸರಲ್ಲಿ ಬಸವಣ್ಣನ ವಿಚಾರ-ತತ್ವಕ್ಕೆ ಅಪಚಾರ

by admin November 19, 2026
written by admin November 19, 2026 0 comments 2 minutes read
0FacebookTwitterPinterestEmail
19

`ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ವೀರಶೈವ-ಲಿಂಗಾಯತ ಸಮುದಾಯ ಆಗ್ರಹ

ಬೆಂಗಳೂರು:ಸಾಮಾಜಿಕ ಕ್ರಾಂತ್ರಿಕಾರಿ ಬಸವಣ್ಣನ ವಿಚಾರ ಮತ್ತು ತತ್ವಗಳಿಗೆ ಅಪಚಾರ ಎಸಗುವ ಮತ್ತು ಸಂಶೋಧನೆ ಹೆಸರಿನಲ್ಲಿ ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡುವ ರವಿ ಹಂಜ್ ಪುಸ್ತಕ `ಬಸವ ಮಂಟಪ’ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಸವ ಸಮಿತಿ ಇಂದಿಲ್ಲಿ ಆಗ್ರಹಿಸಿದೆ.

ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಚಿವರಾದ ಎಂ.ಬಿ.ಪಾಟೀಲ್‌, ಡಾ.ಶರಣಪ್ರಕಾಶ್‌ ಪಾಟೀಲ್‌, ಶಾಸಕ ಬಿ.ಆರ್.‌ಪಾಟೀಲ್‌ ಸೇರಿದಂತೆ ಪ್ರಮುಖರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಸವಣ್ಣ ಮತ್ತು ಲಿಂಗಾಯತ ಸಮುದಾಯದ ಮೇಲಿನ ವಿಕೃತ ದಾಳಿ ಮೇರೆ ಮೀರಿದೆ, ಇದನ್ನೆಲ್ಲ ನಮ್ಮ ಸಮುದಾಯ ಇನ್ನು ಮುಂದೆ ಎಳ್ಳಷ್ಟೂ ಸಹಿಸುವುದಿಲ್ಲ ಎಂದರು.

ಕಾನೂನು ಕ್ರಮಕ್ಕೆ ಆಗ್ರಹ

ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ, ರಾಜ್ಯದ ಹಲವೆಡೆ ಈಗಾಗಲೇ ಹೋರಾಟ ಆರಂಭವಾಗಿದೆ, ನೆರೆಯ ಮಹಾರಾಷ್ಟ್ರದಲ್ಲೂ ರವಿ ಹಂಜ್ ವಿರುದ್ಧ ಪ್ರತಿಭಟನೆ ಶುರುವಾಗಿದೆ, ನಾವು ಸಚಿವರುಗಳು ಸೇರಿದಂತೆ ಸಮಾಜದ ಮುಖಂಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜೊತೆ ಮಾತನಾಡಿ, ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ.

ರವಿ ಹಂಜ್ ಹೆಸರು ಹೇಳಲೂ ನಮಗೆ ನಾಚಿಕೆಯಾಗುತ್ತಿದೆ, ಅಂತಹ ವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾದ ಶಂಕರ ಬಿದರಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್ ಹೋಗಿರುವುದು ಖಂಡನೀಯ, ಇವರಿಬ್ಬರೂ 21ನೇ ಶತಮಾನದ ಕೊಂಡಿ ಮಂಚಣ್ಣರು.

ಬಿದರಿ ವಿರುದ್ಧ ಕ್ರಮ ಕೈಗೊಳ್ಳವುದು ವೀರಶೈವ ಮಹಾಸಭಾಗೆ ಬಿಟ್ಟಿದ್ದು, ಇವರಂಥವರು 12ನೇ ಶತಮಾನದಿಂದಲೂ ಇದ್ದಾರೆ, ಆಗಲೂ ಬಸವಣ್ಣನ ವಿರುದ್ಧ ಕೆಲಸ ಮಾಡಿದರು ಎಂದು ಹರಿಹಾಯ್ದರು.

ಶರಣ ಸಂಸ್ಕೃತಿಗೆ ಅಪಚಾರ

‘ಬಸವಣ್ಣ ಮತ್ತು ಶರಣ ಸಂಸ್ಕೃತಿಗೆ ಅಪಚಾರ ಮಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ, ಉತ್ತರ ಕರ್ನಾಟಕದಲ್ಲೂ ಈ ಶಕ್ತಿಗಳು ಒಬ್ಬ ಸ್ವಾಮೀಜಿ ಮೂಲಕ ಈ ಕೆಲಸ ಮಾಡಿಸುತ್ತಿದ್ದು, ಇವೆಲ್ಲದರ ವಿರುದ್ಧ ಸಿರಿಗೆರೆ, ಭಾಲ್ಕಿ, ಗದಗ, ಸುತ್ತೂರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಲಿದ್ದಾರೆ.

ರವಿ ಹಂಜ್ ಮತ್ತು ಪುಸ್ತಕದ ಪ್ರಕಾಶಕ, ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪೊಲೀಸರಿಗೆ ದೂರು ಕೊಟ್ಟಿದೆ, ನಮ್ಮ ಧರ್ಮದ ತಂಟೆಗೆ ಬೇರೆಯವರು ಬಂದರೆ ನಾವು ಸುಮ್ಮನಿರುವುದಿಲ್ಲ, ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಇಬ್ಬರೂ ತಮ್ಮ ಮಿತಿ ಮೀರಿದ್ದಾರೆ’ ಎಂದರು.

ಬೇರೆ ಸಮುದಾಯದ ಬಗ್ಗೆ ಈ ರೀತಿ ಬರೆದಿದ್ದರೆ ಇಷ್ಟು ಹೊತ್ತಿಗೆ ಪರಿಣಾಮ ಬೇರೆಯಾಗುತ್ತಿತ್ತು, ಹಿಂದೆ ಕೆಂಪೇಗೌಡರ ವಿಚಾರದಲ್ಲಿ ಉರಿಗೌಡ, ನಂಜೇಗೌಡ ಎನ್ನುವ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತಂದಾಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೀಡಿದ ಎಚ್ಚರಿಕೆಗೆ ಎಲ್ಲರ ಆಟ ನಿಂತುಹೋಯಿತು, ವೀರಶೈವ-ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಇರಬೇಕು, ಬಸವಣ್ಣನವರ ವಿಚಾರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ.

ಬಸವಾಭಿಮಾನಿಗಳಿಗೆ ಆಘಾತ

ಬಸವಣ್ಣ ಲಿಂಗಾಯತರ ಅಸ್ಮಿತೆ, ವಿಶ್ವದ ತಂದೆ, ಹಂಜ್ ಆಡಿದ ಮಾತುಗಳು ಮತ್ತು ಪುಸ್ತಕದಿಂದ ಬಸವಾಭಿಮಾನಿಗಳಿಗೆ ಆಘಾತವಾಗಿದೆ, ಹೋರಾಟದಲ್ಲಿ ರಾಜಿ ಇಲ್ಲ, ನಾನು ಆತ್ಮಚರಿತ್ರೆ ಬರೆಯುತ್ತಿದ್ದೇನೆ, ಇದುವರೆಗೂ ಗೊತ್ತಿಲ್ಲದ ಅನೇಕ ಸತ್ಯಗಳನ್ನು ನಾನು ದಾಖಲಿಸುತ್ತಿದ್ದೇನೆ ಎಂದು ಎಂ.ಬಿ.ಪಾಟೀಲ್‌ ತಿಳಿಸಿದರು.

ಬಸವಣ್ಣನ ವಿರುದ್ಧ ಮೊದಲಿನಿಂದಲೂ ಷಡ್ಯಂತ್ರ ನಡೆಯುತ್ತಲೇ ಇದೆ, ಸಮಾನತೆ, ಜಾತಿರಹಿತ ಸಮಾಜ, ಕಾಯಕ ತತ್ವ, ಸಂಸತ್ತಿನ ಪರಿಕಲ್ಪನೆ ಇವೆಲ್ಲವನ್ನೂ ಜಗತ್ತಿಗೆ ಸಾರಿದ ಬಸವಣ್ಣನನ್ನು ಕೊಲೆಗಡುಕ, ಕಳ್ಳ, ಲೋಟಿಕೋರ ಎಂದೆಲ್ಲ ರವಿ ಹಂಜ್ ವಾಗ್ದಾಳಿ ನಡೆಸಿದ್ದಾರೆ.

ಇದರ ಹಿಂದೆ ಪತ್ರಕರ್ತ ವಿಶ್ವೇಶ್ವರ ಭಟ್ ಕೈವಾಡವಿದೆ, ಎದುರಾದ ವಿರೋಧಕ್ಕೆ ಹೆದರಿ ಹಂಜ್ ಕ್ಷಮೆ ಯಾಚಿಸಿ ತಿದ್ದುಪಡಿಯ ನಾಟಕವಾಡಿದ್ದಾರೆ, ಆದರೆ, ನಮಗೆ ಇದಾವುದೂ ಬೇಕಿಲ್ಲ, ವೀರಶೈವ-ಲಿಂಗಾಯತ ಸಮುದಾಯದ ಸೌಮ್ಯ ಸ್ವಭಾವವನ್ನೇ ದೌರ್ಬಲ್ಯ ಎಂದುಕೊಂಡಿದ್ದಾರೆ, `ಬಸವ ಮಂಟಪ’ ಕೃತ್ಯಕ್ಕೆ ಸಂಶೋಧನೆಯ ಮುಖವಾಡ ತೊಡಿಸಿರುವುದು ಖಂಡನೀಯ ಎಂದರು.

ಪೂರ್ವಗ್ರಹಪೀಡಿತ ಆರೋಪ

12ನೇ ಶತಮಾನದಲ್ಲಿ ನಡೆದ ಐತಿಹಾಸಿಕ ಸಂಘರ್ಷಗಳನ್ನು ದುರುದ್ದೇಶದಿಂದ ತಿರುಚುತ್ತಿದ್ದು, ಪೂರ್ವಗ್ರಹಪೀಡಿತರಾಗಿ ಮಾತನಾಡುತ್ತಿದ್ದಾರೆ, ರಾಷ್ಟ್ರಕವಿ ಕುವೆಂಪು ಸಹಾ ಬಸವಣ್ಣನನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ.

ಈಗ ನಡೆಯುತ್ತಿರುವುದೆಲ್ಲವೂ ಶರಣ ತತ್ವ ಮತ್ತು ಲಿಂಗಾಯತ ಅಸ್ಮಿತೆ ಬುಡಮೇಲು ಮಾಡುತ್ತಿರುವ ಸೈದ್ಧಾಂತಿಕ ಸಂಚಾಗಿದೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ, ನಾಡಿನ ಪ್ರಜ್ಞಾವಂತರು, ಯುವಜನರು, ಮಠಾಧೀಶರು, ಸಾಹಿತಿಗಳು, ದೇಶ-ವಿದೇಶಗಳಲ್ಲಿರುವ ಎಲ್ಲ ಸಮುದಾಯಗಳೂ ಇಂತಹ ಕೃತ್ಯವನ್ನು ಖಂಡಿಸಬೇಕು.

ಬಸವಣ್ಣ ಸಾಂಸ್ಕೃತಿಕ ನಾಯಕ

ಬಸವಣ್ಣನನ್ನು `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂಬುದಾಗಿ ರಾಜ್ಯ ಸರ್ಕಾರ ಘೋಷಿಸಿದ ನಂತರ ಇಂತಹ ವಿಕೃತ ಬೆಳವಣಿಗೆಗಳು ಮೇರೆ ಮೀರಿವೆ, ಇವುಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಸಕ್ರಿಯವಾಗಿವೆ, ಸಮಾಜದಲ್ಲಿ ಜಾಗೃತಿ ಮೂಡಿಸಿ, ಇದನ್ನೆಲ್ಲ ಮಟ್ಟ ಹಾಕಲಾಗುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆ ಸರಿಯಲ್ಲ ಎಂದರು.

‘ಬಸವಣ್ಣ, ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ವಿಚಾರಗಳನ್ನು ಸಹಿಸದ ವಿಕೃತಿ‌ ಹಿಂದಿನಿಂದಲೂ ಇದೆ, ರವಿ ಹಂಜ್ ದುರುದ್ದೇಶದಿಂದ ಪುಸ್ತಕ ಬರೆದಿದ್ದು, ಬಸವಣ್ಣನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ, ಇದು ನಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಗೆ ಭಂಗ ಬರುತ್ತದೆ, ಇದುವರೆಗೆ ಜಗತ್ತಿನ 143 ಭಾಷೆಗಳಿಗೆ ಬಸವಣ್ಣನ ವಚನಗಳು ಭಾಷಾಂತರವಾಗಿವೆ, ನಾವೀಗ ರಾಜ್ಯದಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿದೆ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
aravind jattib r patilbasava mantapa bookcommunity and leaders angrym b patilurge govt. to seige the bookveerashaiva-lingayat protest
0 FacebookTwitterPinterestEmail
admin

previous post
ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ
next post
ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

You may also like

ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

November 19, 2026

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

November 18, 2026

ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

November 17, 2026

ಕುಮಾರಕೃಪದ ʼಗಂಗಾʼ ಮುಖ್ಯಮಂತ್ರಿ ಅಧಿಕೃತ ನಿವಾಸ

November 16, 2026

ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ

November 14, 2026

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

November 13, 2026

ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

November 12, 2026

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

November 11, 2026

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

November 9, 2026

ಸಂಪುಟಕ್ಕೆ ಬಹುಕೋಟಿ ಹಗರಣ ಆರೋಪಿ ನಾಗೇಂದ್ರ

November 7, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (617)
  • ಅಂಕಣ (109)
  • ಉದ್ಯೋಗ (366)
  • ದಿನ ಭವಿಷ್ಯ (110)
  • ರಾಜಕೀಯ (2,109)
  • ರಾಜ್ಯ (2,425)
  • ರಾಷ್ಟ್ರ (2,389)
  • ವಿಶ್ಲೇಷಣೆ (202)
  • ಶಿಕ್ಷಣ (420)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

    November 19, 2026
  • ಸಂಶೋಧನೆ ಹೆಸರಲ್ಲಿ ಬಸವಣ್ಣನ ವಿಚಾರ-ತತ್ವಕ್ಕೆ ಅಪಚಾರ

    November 19, 2026
  • ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

    November 18, 2026

KMS Special

  • ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

    November 19, 2026
  • ಸಂಶೋಧನೆ ಹೆಸರಲ್ಲಿ ಬಸವಣ್ಣನ ವಿಚಾರ-ತತ್ವಕ್ಕೆ ಅಪಚಾರ

    November 19, 2026
  • ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

    November 18, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

November 19, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ