Sunday, November 22, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, November 22, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಉದ್ಯೋಗರಾಜಕೀಯರಾಜ್ಯರಾಷ್ಟ್ರ

ಸ್ಟಿಂಗ್‌ ಆರೋಪಿ ರಾಕೇಶ್‌ ಶೆಟ್ಟಿ ವಿರುದ್ಧ ಕ್ರಮಕ್ಕೆ ಆದೇಶ

by admin November 21, 2026
written by admin November 21, 2026 0 comments 2 minutes read
0FacebookTwitterPinterestEmail
7

ಬೆಂಗಳೂರು:ಸಚಿವರಾದ ಕೆ.ಎಂ.ಶಿವಲಿಂಗೇಗೌಡ, ಪುಟ್ಟರಂಗ ಶೆಟ್ಟಿ, ಟಿ.ರಘುಮೂರ್ತಿ ಸೇರಿದಂತೆ 28 ಮಂದಿ ಆಡಳಿತ ಮತ್ತು ಪ್ರತಿಪಕ್ಷದ ವಿಧಾನಸಭಾ ಸದಸ್ಯರ ಸ್ಟಿಂಗ್‌ ಆಪರೇಷನ್‌ ಮಾಡಿರುವ ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರ ಆದೇಶ ಮಾಡಿದೆ.

ಈ ಸಂಬಂಧ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಗೃಹ ಇಲಾಖೆ ಪ್ರಧಾನಕಾರ್ಯದರ್ಶಿ, ಸ್ಟಿಂಗ್‌ ಆಪರೇಷನ್‌ ಕುರಿತು ಪ್ರಸ್ತಾಪಿಸಿರುವ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಸುರೇಶ್‌ ಬಾಬು ದೂರು

ವಿಧಾನಸಭೆಯಲ್ಲಿನ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ದಾಖಲೆಗಳ ಸಮೇತ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಯವರಿಗೆ ರಾಜ್ಯಪಾಲರು ಪತ್ರ ಬರೆದಿದ್ದರು.

ಸ್ಟಿಂಗ್‌ ಆಪರೇಷನ್‌ ಹೆಸರಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಸುಳ್ಳು ಯೋಜನೆಗಳನ್ನು ಸೃಷ್ಠಿಸಿ, ಆಡಳಿತ ಪಕ್ಷದ ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿ, ಕಾನೂನುಬಾಹಿರ ಕಾರ್ಯ ಎಸಗಲು ಪ್ರಚೋದಿಸಿ, ಜನಪ್ರತಿನಿಧಿಗಳ ತೇಜೇವಧೆ ಮಾಡಿ, ಗೌರವಕ್ಕೆ ಧಕ್ಕೆ ಬರುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಪವರ್‌ ಟಿವಿ ಮುಖ್ಯಸ್ಥ ಹಾಗೂ ನೌಕರರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಬು ರಾಜ್ಯಪಾಲರನ್ನು ಕೋರಿದ್ದರು.

ಜನಪ್ರತಿನಿಧಿಗಳಾದ ಪುಟ್ಟರಂಗ ಶೆಟ್ಟಿ, ರಘುಮೂರ್ತಿ, ಶಿವಲಿಂಗೇಗೌಡ, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್‌, ಬಿ.ನಾಗೇಂದ್ರ, ಬಸವನಗೌಡ ದದ್ದಲ್‌, ಕೆ.ವೈ.ನಂಜೇಗೌಡ, ಬಸವನಗೌಡ ತುರುವಿಹಾಳ್‌, ಸಂಗಮೇಶ್‌, ಜೆ.ಎನ್.ಗಣೇಶ್‌, ರಾಘವೇಂದ್ರ ಹಿಟ್ನಾಳ್‌ ಸೇರಿದಂತೆ 28 ಶಾಸಕರ ವಿರುದ್ಧ ಹಣಕ್ಕಾಗಿ ಸ್ಟಿಂಗ್‌ ಆಪರೇಷನ್‌ ಮಾಡಿದ್ದಾರೆ ಎಂದು ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ದರು.

ಜನಪ್ರತಿನಿಧಿಗಳ ತೇಜೋವಧೆ

ಹಾಸನ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸ್ವರೂಪ್‌ ಪ್ರಕಾಶ್‌ ವಿರುದ್ಧವೂ ಇದೇ ತಂಡ ಇತ್ತೀಚೆಗೆ ಇಂತಹದ್ದೇ ಕಾರ್ಯಾಚರಣೆ ನಡೆಸಿ ಅವರ ತೇಜೋವಧೆ ಮಾಡಿದೆ.

ಹದಿಮೂರು ಸದಸ್ಯರ ಹೆಸರನ್ನು ನಮೂದಿಸಿರುವ ಸುರೇಶ್‌, ಉಳಿದವರ ಹೆಸರುಗಳನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇರಿಸಿದ್ದಾರೆ.

ಸಮಾಜಕ್ಕೆ ಮಾರಕವಾಗಿರುವ ಡ್ರಕ್ಸ್‌ ದಂಧೆ, ವೇಶ್ಯಾವಾಟಿಕೆ, ಮಾನವ ಕಳ್ಳ ಸಾಗಾಟ, ನಕಲಿ ನೋಟು ಚಲಾವಣೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸಲು ಮಾರುವೇಶದ ಕಾರ್ಯಾಚರಣೆ ನಡೆಸಲಾಗುತ್ತದೆ.

ಹಣ ವಸೂಲಿ ಉದ್ದೇಶ

ಆದರೆ, ಅಸ್ಥಿತ್ವದಲ್ಲೇ ಇಲ್ಲದ ಸುಳ್ಳು ಯೋಜನೆಗಳನ್ನು ಸೃಷ್ಠಿಸಿ, ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳನ್ನು ಬ್ಲಾಕ್‌ಮೇಲ್‌ ಮಾಡಿ, ಹಣ ವಸೂಲಿ ಮಾಡುವ ಉದ್ದೇಶದಿಂದಲೇ ಈ ಖಾಸಗಿ ಟಿವಿ ಸ್ಟಿಂಗ್‌ ಆಪರೇಷನ್‌ ಮಾಡುತ್ತಿದೆ.

ಸರ್ಕಾರ ಮತ್ತು ಸಮಾಜದ ಹುಳುಕನ್ನು ಹೊರತೆಗೆಯುವ ಉದ್ದೇಶ ಇವರದ್ದಾಗಿರಲಿಲ್ಲ, ಎಲ್ಲವೂ ಬ್ಲಾಕ್‌ಮೇಲ್‌ಗಾಗಿ ತಮ್ಮ ಕಚೇರಿ ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂ. ವಸೂಲಿ ಮಾಡುತ್ತಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ, ದೇಶದ ಭದ್ರತೆ ಅಥವಾ ವ್ಯವಸ್ಥೆಯ ಸುಧಾರಣೆ ಆಗಬೇಕು, ಆದರೆ, ಯಾವುದೇ ಖಾಸಗಿ ವ್ಯಕ್ತಿಯ ವೈಯಕ್ತಿಕ ಲಾಭ ಅಥವಾ ಸುದ್ದಿವಾಹಿನಿಯ ಟಿಆರ್‌ಪಿಗಾಗಿ ಬಳಸುವಂತಿಲ್ಲ ಎಂಬುದಾಗಿ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಸಿಐ) ತನ್ನ ನಿಯಮಗಳಲ್ಲಿ ಉಲ್ಲೇಖಿಸಿದೆ.

ಬೆದರಿಸಿ ವಸೂಲಿ ತಂತ್ರ

ಪಿಸಿಐನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸ್ಟಿಂಗ್‌ ಆಪರೇಷನ್‌ ಮೂಲಕ ಬೆದರಿಸಿ, ವಸೂಲಿ ಮಾಡುವ ತಂತ್ರ ಇವರದ್ದಾಗಿದೆ ಎಂದು ರಾಜ್ಯಪಾಲರಿಗೆ ದಾಖಲೆ ಸಮೇತ ಸುರೇಶ್‌ ಬಾಬು ಮನವರಿಕೆ ಮಾಡಿಕೊಟ್ಟಿದ್ದರು.

ನವೆಂಬರ್‌ 3 ರಂದು ಸಲ್ಲಿಸಿದ್ದ ದೂರನ್ನು ರಾಜ್ಯಪಾಲರು ಪರಿಶೀಲಿಸಿದ ನಂತರ ನವೆಂಬರ್‌ 9 ರಂದು ಸರ್ಕಾರಕ್ಕೆ ಕಳುಹಿಸಿ ಈ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.

ಜನಸೇವೆಯಲ್ಲಿ ತೊಡಗಿರುವ ಸಚಿವ, ಶಾಸಕರನ್ನು ಸ್ಟಿಂಗ್‌ ಆಪರೇಷನ್‌ ಹೆಸರಿನಲ್ಲಿ ಕಾನೂನುಬಾಹಿರ ಕೃತ್ಯ ಎಸಗುವಂತೆ ಪ್ರಚೋದಿಸಿ, ಅವರುಗಳ ತೇಜ್ಯೋವಧೆ, ಗೌರವಕ್ಕೆ ಧಕ್ಕೆ ತರುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಖಾಸಗಿ ಮಾಧ್ಯಮದ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಂಸ್ಥೆ ನೌಕರರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಮಾಡಿದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದರು.  

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
complaint by jds suresh babugovernor writes to home secretaryinvestigation against private tv headsting operation
0 FacebookTwitterPinterestEmail
admin

previous post
ಮಹೇಶ್‌ ಟೆಂಗಿನಕಾಯಿಗೆ ರಾಜ್ಯ ಬಿಜೆಪಿ ಸಾರಥ್ಯ

You may also like

ಮಹೇಶ್‌ ಟೆಂಗಿನಕಾಯಿಗೆ ರಾಜ್ಯ ಬಿಜೆಪಿ ಸಾರಥ್ಯ

November 20, 2026

ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

November 19, 2026

ಸಂಶೋಧನೆ ಹೆಸರಲ್ಲಿ ಬಸವಣ್ಣನ ವಿಚಾರ-ತತ್ವಕ್ಕೆ ಅಪಚಾರ

November 19, 2026

ಗ್ರಾಮೀಣ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದೃಢೀಕರಣ

November 18, 2026

ಕಾಂಗ್ರೆಸ್‌ ವಲಯದಲ್ಲಿ ಕುಸಿದ ಸಿದ್ದರಾಮಯ್ಯ ವರ್ಚಸ್ಸು

November 17, 2026

ಕುಮಾರಕೃಪದ ʼಗಂಗಾʼ ಮುಖ್ಯಮಂತ್ರಿ ಅಧಿಕೃತ ನಿವಾಸ

November 16, 2026

ಕಾವೇರಿ ನೀರೇ ತಮಿಳುನಾಡಿಗೆ ರಾಜಕೀಯ ಅಸ್ತ್ರ

November 14, 2026

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ

November 13, 2026

ಕೆಪಿಎಸ್‌ಸಿ ಪ್ರೊಬೇಷನರ್‌ ಪರೀಕ್ಷೆಗೆ ಸರ್ಪಗಾವಲು

November 12, 2026

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಬಜೆಟ್‌ನಲ್ಲಿ ಘೋಷಣೆ

November 11, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (619)
  • ಅಂಕಣ (109)
  • ಉದ್ಯೋಗ (367)
  • ದಿನ ಭವಿಷ್ಯ (110)
  • ರಾಜಕೀಯ (2,111)
  • ರಾಜ್ಯ (2,427)
  • ರಾಷ್ಟ್ರ (2,391)
  • ವಿಶ್ಲೇಷಣೆ (202)
  • ಶಿಕ್ಷಣ (420)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸ್ಟಿಂಗ್‌ ಆರೋಪಿ ರಾಕೇಶ್‌ ಶೆಟ್ಟಿ ವಿರುದ್ಧ ಕ್ರಮಕ್ಕೆ ಆದೇಶ

    November 21, 2026
  • ಮಹೇಶ್‌ ಟೆಂಗಿನಕಾಯಿಗೆ ರಾಜ್ಯ ಬಿಜೆಪಿ ಸಾರಥ್ಯ

    November 20, 2026
  • ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

    November 19, 2026

KMS Special

  • ಸ್ಟಿಂಗ್‌ ಆರೋಪಿ ರಾಕೇಶ್‌ ಶೆಟ್ಟಿ ವಿರುದ್ಧ ಕ್ರಮಕ್ಕೆ ಆದೇಶ

    November 21, 2026
  • ಮಹೇಶ್‌ ಟೆಂಗಿನಕಾಯಿಗೆ ರಾಜ್ಯ ಬಿಜೆಪಿ ಸಾರಥ್ಯ

    November 20, 2026
  • ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ನಿರ್ಧಾರ

    November 19, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮಹೇಶ್‌ ಟೆಂಗಿನಕಾಯಿಗೆ ರಾಜ್ಯ ಬಿಜೆಪಿ ಸಾರಥ್ಯ

November 20, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ