ಯಡಿಯೂರಪ್ಪ ಬಣದ ಮೈಲುಗೈ
ಬೆಂಗಳೂರು:ಬಿಜೆಪಿ ರಾಜ್ಯ ಘಟಕವನ್ನು ವರಿಷ್ಠರು ಪುನಾರಚನೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗರಿಗೆ ಸಿಂಹಪಾಲು ದೊರೆತಿದೆ.
ಈ ಮೂಲಕ ಯಡಿಯೂರಪ್ಪ ಕರ್ನಾಟಕದ ಮಟ್ಟಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಂತಾಗಿದೆ.
ಶಾಲಾ ಶೌಚಾಲಯ ಶುಚಿತ್ವ: ವಿದ್ಯಾರ್ಥಿಗಳ ಬಳಕೆ ನಿಷೇಧ
ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾದ ಕೆಲವೇ ದಿನಗಳಲ್ಲಿ ತಮ್ಮ ಜೊತೆ ಗುರುತಿಸಿಕೊಂಡಿರುವ ಹಿರಿಯ ಶಾಸಕ ಆರ್.ಅಶೋಕ್ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಪದಾಧಿಕಾರಿಗಳ ಪಟ್ಟಿಯಲ್ಲೂ ಮೇಲುಗೈ ಸಾಧಿಸಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ನಂತರ ಕಳೆದ ಎರಡು ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಪದಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚಿಸಿ ತಾವು ಸಿದ್ಧಪಡಿಸಿದ ಪಟ್ಟಿಯನ್ನು ಸಲ್ಲಿಸಿ ಬಂದಿದ್ದರು.
ಸಿದ್ದರಾಮಯ್ಯ ಅವರಿಂದ ಸಮಾಜ ಒಡೆಯುವ ಹುನ್ನಾರ
ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ವರಿಷ್ಠರು ಪದಾಧಿಕಾರಿಗಳ ಪಟ್ಟಿ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಿಡುಗಡೆ ಮಾಡಿರುವ ಪಟ್ಟಿ ಈ ಕೆಳಗಿನಂತಿದೆ.
3 comments
[…] ರಾಜ್ಯ […]
[…] ರಾಜ್ಯ […]
[…] ರಾಜ್ಯ […]