Wednesday, October 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, October 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

by admin October 13, 2026
written by admin October 13, 2026 0 comments 3 minutes read
0FacebookTwitterPinterestEmail
6

ಬೆಂಗಳೂರು:ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ಗಳ ಹೆಸರಿನಲ್ಲಿ ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಗಳ ಹಿಂದೆ ಯಾರು ಇದ್ದಾರೆ, ಕಾರ್ಯಾಚರಣೆಗಳನ್ನು ಯಾರು ನಡೆಸಿದ್ದಾರೆ, ಯಾರಿಗೆ ಯಾವ ಪಾತ್ರವಿದೆ ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಚಿವರ ಮಾಹಿತಿ ಸಂಗ್ರಹಿಸಲಾಗುತ್ತಿದೆ

ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ, ಇದು ಪೊಲೀಸ್ ಇಲಾಖೆಯಲ್ಲೂ ಚರ್ಚೆಯಾಗುತ್ತಿದೆ, ಈ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ಅಗತ್ಯ ಎಂದರು.

ಸಚಿವರು ಮತ್ತು ರಾಜಕೀಯ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ, ಅವರ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕ ವ್ಯವಸ್ಥೆ ಅಥವಾ ಘಟಕವಿದೆ ಎಂಬ ಆರೋಪಗಳನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿ ಸ್ವತಃ ಆದೇಶಿಸಿದ್ದಾರೆ ಎನ್ನುತ್ತಿಲ್ಲ, ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತನಿಖೆಯಿಂದ ಪರಿಶೀಲಿಸಬೇಕು, ತಾವು ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದರಿಂದ ತಾವು ಮರೆಮಾಚುವುದು ಏನೂ ಇಲ್ಲ, ತಮ್ಮ ಫೋನ್‌ ಟ್ಯಾಪ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ.

ಬೆಂಗಳೂರಿನ ಒಂದು ವೇದಿಕೆ ಅಕ್ಟೋಬರ್ 9ರಂದು ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ, ಬಾಲ ನ್ಯಾಯಕ್ಕೆ ಸಂಬಂಧಿಸಿದ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂಬ ಮಾಹಿತಿಯನ್ನು ಕುಮಾರಸ್ವಾಮಿ ಉಲ್ಲೇಖಿಸಿದರು.

ತನಿಖೆಯಿಂದ ಪರಿಶೀಲನೆ ಆಗಬೇಕು

ಆ ದೂರಿನಲ್ಲಿ, ಹದಿನಾಲ್ಕು ವರ್ಷದ ಬಾಲಕಿಯನ್ನು ಪ್ರೇರೇಪಿಸಿ ಮಾತನಾಡಿಸಿ, ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪವಿದೆ, ಈ ದೂರಿನಲ್ಲಿರುವ ಆರೋಪಗಳೂ ತನಿಖೆಯಿಂದ ಪರಿಶೀಲನೆಯಾಗಬೇಕು.

ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ, ಯಾವುದೇ ವಿಚಾರದಲ್ಲಿ ತಪ್ಪಿದ್ದರೆ ಅಂತಿಮವಾಗಿ ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ಸಂಸ್ಥೆಗಳ ಮೂಲಕ ಸತ್ಯ ಹೊರಬರಬೇಕು, ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು ಎಂಬುದು ತಮ್ಮ ನಿಲುವು, ತಾವು ಅಥವಾ ತಮ್ಮ ಕುಟುಂಬ ಈ ವಿಚಾರದಲ್ಲಿ ರಕ್ಷಣೆ ಪಡೆಯಲು ನ್ಯಾಯಾಲಯದ ಮೊರೆ ಹೋಗಿಲ್ಲ ಎಂದರು.

ಐದು ವರ್ಷಗಳ ಹಿಂದೆ ದಾಖಲಾಗಿದ್ದ ದೂರನ್ನು ಪೆನ್‌ಡ್ರೈವ್‌ ಪಿತಾಮಹರು, ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಮತ್ತು ಹಾಸನದಲ್ಲಿ ಪೆನ್‌ಡ್ರೈವ್‌ ಮತ್ತು ಸಿ.ಡಿ.ಗಳನ್ನು ಹಂಚಿ ದೇವೇಗೌಡ ಅವರ ಕುಟುಂಬವನ್ನು ನಾಶ ಮಾಡಲು ಯತ್ನಿಸಿದರು.

ಪೆನ್‌ ಡ್ರೈವ್ ಪಿತಾಮಹಾ

ಪೆನ್‌ ಡ್ರೈವ್ ವಿತರಣೆಯಿಂದ ಹಾಸನ ಲೋಕಸಭಾ ಕ್ಷೇತ್ರವನ್ನು ಆ ಪಿತಾಮಹಾ ತಮ್ಮ ಪಕ್ಷಕ್ಕೆ ತಂದುಕೊಟ್ಟ, ನಂತರದ ಬೆಳವಣಿಗೆಗಳು ನಿಮಗೆಲ್ಲ ತಿಳಿದಿದೆ ಎಂದರು.  

ದೇವೇಗೌಡರ ಕುಟುಂಬ ಮುಗಿಸಲು ಹೊರಟಿದ್ದ ವ್ಯಕ್ತಿಯೇ ಹಿಂದುಳಿದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬೀದಿಗೆ ತಂದಿದ್ದಾರೆ.

ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಬಹಿರಂಗಗೊಳ್ಳದ ಪೆನ್‌ ಡ್ರೈವ್‌ ಮತ್ತು ಸಿ.ಡಿ. ಈಗ ಏತಕ್ಕೆ ಬಂತು ಎಂದು ಪ್ರಶ್ನಿಸಿದರು.

ತನ್ನ ಉಳಿವಿಗಾಗಿ ಸಿ.ಡಿ. ರಾಜಾ

ತನ್ನ ಉಳಿವಿಗಾಗಿ ಸಿ.ಡಿ. ರಾಜಾ, ಬೇರೆ ರಾಜಕೀಯ ಕುಟುಂಬಗಳನ್ನು ಮುಗಿಸಲು ಪೆನ್‌ ಡ್ರೈವ್‌ ಸಂಸ್ಕೃತಿ ಬಳಸಿಕೊಳ್ಳುತ್ತಿದ್ದಾರೆ.

ಪೆನ್‌ಡ್ರೈವ್‌ಗಳ ಮೂಲಕ ಹಲವು ಮಹಿಳೆಯರ ವಿಡಿಯೊಗಳನ್ನು ಹಂಚಿ ಅವರ ಕುಟುಂಬಗಳ ಗೌರವಕ್ಕೆ ಧಕ್ಕೆ ಉಂಟುಮಾಡಲಾಗಿದೆ, ವಿಡಿಯೊಗಳನ್ನು ಪ್ರಸಾರ ಮಾಡುವಾಗ ಮಹಿಳೆಯರ ಮುಖ ಮಸುಕುಗೊಳಿಸಿ ಗೌಪ್ಯತೆ ಕಾಪಾಡಬಹುದಿತ್ತಲ್ಲ, ಆ ವಿಡಿಯೊಗಳನ್ನು ಸಿದ್ಧಪಡಿಸಿ ಹಂಚಿದವರು ಯಾರು, ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು, ಅವುಗಳನ್ನು ಹಂಚಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು ಎಂಬುದಕ್ಕೂ ಉತ್ತರ ಬೇಕು ಎಂದರು.

ತಮ್ಮ ಕುಟುಂಬದ, ಅದರಲ್ಲೂ ವಿಶೇಷವಾಗಿ ತಮ್ಮ ತಾಯಿಯ ಬಗ್ಗೆ ನಿರಂತರವಾಗಿ ಸುದ್ದಿಗಳು ಪ್ರಕಟವಾಗಿವೆ, ಕುಟುಂಬದವರು ಹಲವು ನಿಂದನೆಗಳನ್ನು ಎದುರಿಸಿದ್ದಾರೆ, ಆದರೂ ಕುಟುಂಬದ ಪರವಾಗಿ ಭದ್ರತೆ ಕೋರಿ ಮನವಿ ಮಾಡಿಲ್ಲ.

48 ಜನರ ಹೆಸರುಗಳು

ರಮೇಶ್ ಜಾರಕಿಹೊಳಿ ಸೇರಿದಂತೆ ಇತರ ರಾಜಕೀಯ ನಾಯಕರ ವಿರುದ್ಧ ನಡೆದಿದ್ದ ಸ್ಟಿಂಗ್‌ ಆರೋಪಗಳನ್ನೂ ನೆನಪಿಸಿದ ಅವರು, ವಿಧಾನಸಭೆಯಲ್ಲಿ 48 ಜನರ ಹೆಸರುಗಳಿವೆ ಎನ್ನಲಾಗಿತ್ತು, ನಂತರ ಆ ವಿಚಾರ ತಣ್ಣಗೆ ಮಾಡಲಾಯಿತು, ಕೆಲವರನ್ನು ಮುಂಬೈಗೆ ಕಳುಹಿಸಿದ ಸಂದರ್ಭಗಳು, ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನಡೆದ ಸ್ಟಿಂಗ್‌ ಆರೋಪಗಳು ಮತ್ತು ನ್ಯಾಯಾಲಯದಿಂದ ತಡೆ ಪಡೆದ ಪ್ರಕರಣಗಳನ್ನೂ ಅವರು ಉಲ್ಲೇಖಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ಟೀಕಿಸಿಲ್ಲ, ಅದೇ ರೀತಿಯ ಗಂಭೀರತೆ ಇತರ ಪ್ರಕರಣಗಳಲ್ಲಿಯೂ ಇರಬೇಕು, ಪೆನ್‌ಡ್ರೈವ್‌ಗಳನ್ನು ತಯಾರಿಸಿ ಹಂಚಿದವರ ವಿರುದ್ಧ ಎಷ್ಟು ಮಂದಿಯನ್ನು ಬಂಧಿಸಲಾಗಿದೆ, ಎಷ್ಟು ಮಹಿಳೆಯರು ದೂರು ನೀಡಿದ್ದಾರೆ, ತನಿಖೆಯಲ್ಲಿ ಏನು ಪತ್ತೆಯಾಗಿದೆ ಎಂದರು.

ಒಬ್ಬರನ್ನು ಜೈಲಿಗೆ ಕಳುಹಿಸಲು ಬಹುಮಾನ ನೀಡಲಾಗಿದೆ ಎಂಬ ಹೇಳಿಕೆ ಉಲ್ಲೇಖಿಸಿ, ಪೆನ್‌ಡ್ರೈವ್‌ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದರು.

ಒಂದೂವರೆ ವರ್ಷ ಏನು ಮಾಡುತ್ತಿದ್ದರು

ಬಿಡದಿ ರೈತರ ಹೋರಾಟ ಮತ್ತು ನೈಸ್‌ ವಿಚಾರಗಳು ಚರ್ಚೆಗೆ ಬಂದ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಜೈಲು ಘಟನೆಗಳು ಮತ್ತೆ ಮುನ್ನೆಲೆಗೆ ಬಂದ ಸಮಯದ ಬಗ್ಗೆ ಕುಮಾರಸ್ವಾಮಿ ಪ್ರಶ್ನಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಡೆದಿತ್ತು ಎನ್ನಲಾದ ಘಟನೆ ಬಗ್ಗೆ ಅಧಿಕಾರಿಗಳು ಒಂದೂವರೆ ವರ್ಷ ಏನು ಮಾಡುತ್ತಿದ್ದರು, ಬಿಡದಿ ಹೋರಾಟ ಆರಂಭವಾದಾಗಲೇ ಆ ವಿಚಾರ ಏಕೆ ಹೊರತಂದರು ಎಂದರು.

ಒಬ್ಬರನ್ನು ಹಿಂಡಲಗಾ ಅಥವಾ ಶಿರಾ ಕಡೆಗೆ ಕರೆದೊಯ್ದು ಮತ್ತೆ ಹಿಂದಕ್ಕೆ ಕರೆತಂದ ಬಗ್ಗೆ ಮಾಧ್ಯಮಗಳ ವರದಿ ಉಲ್ಲೇಖಿಸಿ, ವರ್ಗಾವಣೆ ಯಾರು ಮಾಡಿಸಿದರು, ಹಿಂದಕ್ಕೆ ಕರೆತರುವಂತೆ ಯಾರು ಸೂಚಿಸಿದರು, ರಾಜಕೀಯ ಮಧ್ಯಸ್ಥಿಕೆ ಅಥವಾ ದೂರವಾಣಿ ಕರೆ ಇದಕ್ಕೆ ಕಾರಣವಾಯಿತೇ ಎಂಬುದನ್ನು ಸ್ಪಷ್ಟಪಡಿಸಬೇಕು, ಸುದ್ದಿಗಳಲ್ಲಿ ಬಂದಿರುವ ವರದಿಗಳು ಮತ್ತು ಆರೋಪಗಳು ತನಿಖೆಯಿಂದ ಪರಿಶೀಲನೆಯಾಗಬೇಕು.

ಸಿದ್ದರಾಮಯ್ಯ ಎಂಟು ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು, ದೇವರಾಜ ಅರಸು ದಾಖಲೆಯನ್ನು ಮೀರಿದ ನಾಯಕ, ಅಂತಹ ಮಾಜಿ ಮುಖ್ಯಮಂತ್ರಿಯ ಹೆಸರಿಗೆ ಕಳಂಕ ಬರುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ, ಅವರು ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಗೆ ಏಕೆ ತಳ್ಳಲ್ಪಟ್ಟಿದ್ದಾರೆ.

ರಾಜಕೀಯವಾಗಿ ಹೋರಾಡಿದ್ದೇನೆ

ಸಿದ್ದರಾಮಯ್ಯ ವಿರುದ್ಧ ತಾನು ಹಿಂದೆ ರಾಜಕೀಯವಾಗಿ ಹೋರಾಡಿದ್ದೇನೆ, ವಿಧಾನಸಭೆಯಲ್ಲಿ ವಾಗ್ವಾದಗಳೂ ನಡೆದಿವೆ, ಈಗಿನ ಆಗ್ರಹ ಅನುಕಂಪದಿಂದಲ್ಲ, ಸ್ಟಿಂಗ್‌ ಆಪರೇಷನ್‌ಗಳ ವಿರುದ್ಧ ಸಿದ್ದರಾಮಯ್ಯ ತಮ್ಮ ಹಿಂದಿನ ಗಟ್ಟಿಧ್ವನಿಯಲ್ಲಿ ಮಾತನಾಡಿ, ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಸರ್ಕಾರವನ್ನು ವಜಾಗೊಳಿಸಬೇಕು ಅಥವಾ ಸರ್ಕಾರ ಕೆಡವಬೇಕು ಎಂದು ತಾನು ಹೇಳುತ್ತಿಲ್ಲ, ಸ್ಟಿಂಗ್‌ಗಳ ಮೂಲಕ ಜನ ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂಬುದಷ್ಟೇ ತಮ್ಮ ಆಶಯ.

ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಯಾವುದೇ ರಾಜಕೀಯ ಪ್ರಭಾವವಿಲ್ಲದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು, ತಪ್ಪು ಮಾಡದವರು ತನಿಖೆಗೆ ಹೆದರಬೇಕಾಗಿಲ್ಲ, ಯಾರೇ ತಪ್ಪು ಮಾಡಿದ್ದರೂ ತನಿಖೆಗೆ ಒಳಗಾಗಲಿ.

ತಾವು ಕೇಂದ್ರ ಗೃಹ ಸಚಿವರ ಭೇಟಿಗೆ ಸಮಯ ಕೇಳಿ, ಲಭ್ಯವಿರುವ ಮಾಹಿತಿ ನೀಡಿ, ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
C.D. kingcbi investigation demandedcongres govt.H D Kumaraswamykarnataka
0 FacebookTwitterPinterestEmail
admin

previous post
ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

You may also like

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026

2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

October 10, 2026

ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

October 7, 2026

ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

October 6, 2026

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

October 5, 2026

ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

October 3, 2026

ಸಚಿವ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

October 1, 2026

ಜನವರಿಯಲ್ಲಿ ಪಂಚಾಯತ್‌ ಚುನಾವಣೆಗೆ ತೀರ್ಮಾನ

September 30, 2026

ನೈಸ್‌ ಯೋಜನೆ: ಡಿಕೆಶಿ ಕುಟುಂಬ 3 ಲಕ್ಷ ಕೋಟಿ ಲೂಟಿ

September 29, 2026

ವರಿಷ್ಠರ ಜೊತೆ ಡಿಕೆಶಿ ಸಂಪುಟ ಪುನರ್ ರಚನೆ ಚರ್ಚೆ

September 28, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (588)
  • ಅಂಕಣ (109)
  • ಉದ್ಯೋಗ (355)
  • ದಿನ ಭವಿಷ್ಯ (110)
  • ರಾಜಕೀಯ (2,081)
  • ರಾಜ್ಯ (2,396)
  • ರಾಷ್ಟ್ರ (2,360)
  • ವಿಶ್ಲೇಷಣೆ (202)
  • ಶಿಕ್ಷಣ (412)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

    October 13, 2026
  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026

KMS Special

  • ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

    October 13, 2026
  • ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

    October 12, 2026
  • 2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

    October 10, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ