ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 11 : 55 – 12 : 45
ಅಮೃತ ಘಳಿಗೆ : ಸಂಜೆ 03 : 16 – 04 : 55
ಭಾನುವಾರ, 14 ಏಪ್ರಿಲ್ 2024
ಕ್ರೋಧಿನಾಮ ಸಂವತ್ಸರ
ಉತ್ತರಾಯಣ
ಋತು : ವಸಂತ
ಮಾಸ : ಚೈತ್ರ
ಪಕ್ಷ : ಶುಕ್ಲ
ತಿಥಿ : ಷಷ್ಠಿ
ನಕ್ಷತ್ರ : ಆರಿದ್ರಾ
ಯೋಗ : ಅತಿಗಂಡ
ಕರಣ : ತೈತಲೆ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 08
ಸೂರ್ಯಾಸ್ತ : ಸಂಜೆ 06 : 32
ರಾಹುಕಾಲ : 04 : 59 – 06 : 32
ಯಮಗಂಡ ಕಾಲ : 12 : 20 – 01 : 53
ಗುಳಿಕಕಾಲ : 03 : 26 – 04 : 59
ರಾಶಿ ಫಲ
ಮೇಷ : ಕೆಲಸದಲ್ಲಿ ಅಧಿಕ ಒತ್ತಡವಿರಲಿದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ವಾಗ್ವಾದವನ್ನು ತಪ್ಪಿಸಿ.
ವೃಷಭ : ಕಾನೂನಿನ ವಿಚಾರಗಳಲ್ಲಿ ಜಯಗಳಿಸುವಿರಿ. ಸಕಾಲಕ್ಕೆ ಕೆಲಸವನ್ನು ಪೂರ್ಣಗೊಳಿಸಿ. ಸೋಮಾರಿತನ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಮಿಥುನ : ಮೋಜಿನಲ್ಲಿ ಸಮಯ ಕಳೆಯುವಿರಿ. ತುರ್ತು ಸಭೆಗಳಿಗೆ ಹಾಜರಾಗಬೇಕಾಗಬಹುದು. ಹೊಟ್ಟೆ ನೋವಿನ ಸಮಸ್ಯೆ ಕಾಡಲಿದೆ.
ಕಟಕ : ಪೋಷಕರಿಂದ ಬೆಂಬಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ನಿಯಮಿತ ವ್ಯಾಯಾಮದಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಸಿಂಹ : ಕೆಲಸದ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳದಿರಿ. ಹೃದಯ ರೋಗಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಿತಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು.
ಕನ್ಯಾ : ಸಂಗಾತಿಯೊಂದಿಗೆ ಪ್ರವಾಸ ಹೊರಡಲಿದ್ದೀರಿ. ಬುದ್ಧಿ ಜೀವಿಗಳ ನಡುವೆ ಗುರುತಿಸಿಕೊಳ್ಳಲಿದ್ದೀರಿ. ನಿದ್ರಾಹೀನತೆ ಸಮಸ್ಯೆ ಕಾಡಲಿದೆ.
ತುಲಾ : ಹೊಸ ಪಾಲುದಾರರು ಜೊತೆಗೂಡಬಹುದು. ಅನ್ಯರಿಗೆ ನೋವಾಗುವಂತೆ ಮಾತನಾಡಬೇಡಿ. ಮಂಡಿ ನೋವಿನ ಸಮಸ್ಯೆ ಕಾಡಬಹುದು.
ವೃಶ್ಚಿಕ : ಅವಿವಾಹಿತರಿಗೆ ವಿವಾಹ ಯೋಗವಿದೆ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ತಪ್ಪಿಸಿ. ಸಹೋದ್ಯೋಗಿಗಳಿಂದ ತೊಂದರೆ ಎದುರಾಗಬಹುದು.
ಧನಸ್ಸು : ಹಳೆಯ ಶ್ರಮದಿಂದ ಲಾಭ ಪಡೆಯುವಿರಿ. ಪ್ರೀತಿ ವಿಚಾರದಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಿ. ಮಕ್ಕಳ ಚಟುವಟಿಕೆಯ ಬಗ್ಗೆ ಜಾಗರೂಕರಾಗಿರಿ.
ಮಕರ : ಹೋಟೆಲ್ ಉದ್ಯಮಿಗಳಿಗೆ ಲಾಭ ಕಂಡುಬರಲಿದೆ. ತಲೆ ನೋವಿನ ಸಮಸ್ಯೆ ಕಾಡಬಹುದು. ಶತ್ರುಗಳು ಮಿತ್ರರಾಗಲಿದ್ದಾರೆ.
ಕುಂಭ : ಮೇಲಾಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಅಸಿಡಿಟಿ ಸಮಸ್ಯೆ ಕಾಡಲಿದೆ. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.
ಮೀನ : ಹೆಚ್ಚು ಹಣ ವ್ಯಯವಾಗುವುದನ್ನು ತಪ್ಪಿಸಿ. ಮೇಲಾಧಿಕಾರಿಗೆ ಗೌರವ ಸಲ್ಲಿಸಿ. ಶುಭವಾರ್ತೆ ಕೇಳಲಿದ್ದೀರಿ.