Friday, September 25, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Friday, September 25, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ರಾಜಕೀಯ ಸಂದಿಗ್ಧತೆಯಲ್ಲಿ ಸಚಿವ ಜಾರಕಿಹೊಳಿ

by KM Shivaraju September 24, 2026
written by KM Shivaraju September 24, 2026 0 comments 1 minutes read
1FacebookTwitterPinterestEmail
6

ಬೆಂಗಳೂರು:ಜಾರಿ ನಿರ್ದೇಶನಾಯಲದ (ಇ.ಡಿ.) ದಾಳಿ ಬೆನ್ನಲ್ಲೇ ಸಂದಿಗ್ಧತೆಗೆ ಸಿಲುಕಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಹತ್ತರ ರಾಜಕೀಯ ನಿಲುವು ಕೈಗೊಳ್ಳಲು ಮುಂದಾಗಿದ್ದಾರೆ.

ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ನಿರಂತರ ತಮ್ಮ ಸಮುದಾಯದ ಶಾಸಕರು ಹಾಗೂ ಮುಖಂಡರ ಜೊತೆ ಇತ್ತೀಚಿನ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಇಕ್ಕಟ್ಟಿಗೆ ಸಿಲುಕಿಸಲು ಷಡ್ಯಂತ್ರ

ಸಮುದಾಯಕ್ಕೆ ಸೇರಿದ ಬಿ.ನಾಗೇಂದ್ರ, ಕೆ.ಎನ್.ರಾಜಣ್ಣ ಹಾಗೂ ಇದೀಗ ಸತೀಶ್ ಜಾರಕಿಹೊಳಿ ಅವರುಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂದು ಸಭೆಯಲ್ಲಿ ನಿರ್ಧಾರವಾಗಿದೆ.

ಸಮುದಾಯಕ್ಕೆ ಸೇರಿದ 17 ಶಾಸಕರು ಕಾಂಗ್ರೆಸ್‌ಗೆ ಬೆಂಬಲವಾಗಿ ನಿಂತಿದ್ದರೂ ನಮ್ಮ ಪಕ್ಷದ ಕೆಲವು ಮುಖಂಡರೇ ನಾಯಕರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲೂ ಹೊರಗಿನವರಿಗಿಂತ ಆಡಳಿತ ಪಕ್ಷದಲ್ಲಿ ಇರುವವರೇ ನಮ್ಮವರ ಬೆನ್ನಿಗೆ ಚೂರಿ ಹಾಕಿದ್ದಾರೆ.

ಒಗ್ಗಟ್ಟು ಪ್ರದರ್ಶನ

ಇದೀಗ ನಮ್ಮ ಸಮುದಾಯದ ಒಗ್ಗಟ್ಟು ಪ್ರದರ್ಶಿಸಿ ಎಚ್ಚರಿಕೆ ನೀಡುವ ಸಮಯ ಬಂದಿದೆ.

ಸಮುದಾಯ ಸಂಘಟನೆಗಾಗಿ ನವೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ಮದಕರಿ ನಾಯಕ ಸಮಾವೇಶ ಹಮ್ಮಿಕೊಂಡು ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲು ಸಭೆ ತೀರ್ಮಾನಿಸಿದೆ.

ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಿ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ, ಸಮಾವೇಶಕ್ಕೆ ಅವರನ್ನೇ ಅಹ್ವಾನಿಸಲು ನಿರ್ಧರಿಸಲಾಗಿದೆ.

ರಾಜಕೀಯ ಭವಿಷ್ಯ

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷ ಮತ್ತು ಕೆಲವು ಮುಖಂಡರು ಯಾವ ರೀತಿ ನಡೆಸಿಕೊಳ್ಳುತ್ತಾರೋ ತಿಳಿಯದು, ನಾವು ಈಗಿನಿಂದಲೇ ರಾಜಕೀಯ ಭವಿಷ್ಯ ಕುರಿತು ನಿರ್ಧರಿಸಬೇಕಿದೆ ಎಂಬ ಚರ್ಚೆಯೂ ಸಭೆಯಲ್ಲಿ ನಡೆದಿದೆ.

ಸತೀಶ್ ಪ್ರಕರಣವನ್ನು ದೆಹಲಿ ಇ.ಡಿ. ಅಧಿಕಾರಿಗಳೇ ಕೈಗೆತ್ತಿಕೊಂಡಿರುವ ವಿಷಯ ಪ್ರಾಮುಖ್ಯವಾಗಿ ಚರ್ಚೆ ಆಗಿದೆ.

ಸಮುದಾಯದ ಮುಖಂಡರ ಜೊತೆ ಉಳಿದ ಶಾಸಕರು ಬೆಂಬಲವಾಗಿ ನಿಲ್ಲಲು ಸಭೆ ತೀರ್ಮಾನಿಸಿದೆ.

ಸಂಕಷ್ಟದಲ್ಲಿ ಕುಟುಂಬ

ಸಭೆ ನಂತರ ಅನೌಪಚಾರಿಕವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಸಹೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ನಮ್ಮ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ ಎಂದಿದ್ದಾರೆ.

ಸದ್ಯಕ್ಕೆ ನಾವು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಸಮಯ ನೋಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳುವ ಮೂಲಕ ಮಹತ್ತರ ರಾಜಕೀಯ ತಿರುವಿನ ಸೂಚನೆ ನೀಡಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
enforcement directorate raidsjarakiholi in political dilemmaminister satish jarakiholithinking of major political decision
1 FacebookTwitterPinterestEmail
KM Shivaraju

previous post
ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

You may also like

ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

September 23, 2026

ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

September 22, 2026

ಪಶುವೈದ್ಯಾಧಿಕಾರಿ ನೇಮಕ ಅಕ್ರಮ: ಹೈಕೋರ್ಟ್ ತನಿಖೆ

September 21, 2026

ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಸಾಧ್ಯ

September 19, 2026

3,705 ಕೋಟಿ ರೂ. ನೀಡಿ: ಕೇಂದ್ರಕ್ಕೆ ಕರ್ನಾಟಕ ಒತ್ತಾಯ

September 18, 2026

ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

September 17, 2026

ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

September 16, 2026

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

September 15, 2026

ಕಾಂಗ್ರೆಸ್ ಹಗರಣಗಳ ತನಿಖೆಗೆ ಇ.ಡಿ. ಚೀಫ್ ಎಂಟ್ರಿ !

September 12, 2026

ಇ.ಡಿ. ರಾಡಾರ್‌ನಲ್ಲಿ ಇನ್ನೂ ಮೂರ‍್ನಾಲ್ಕು ಸಚಿವರು

September 11, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (575)
  • ಅಂಕಣ (109)
  • ಉದ್ಯೋಗ (353)
  • ದಿನ ಭವಿಷ್ಯ (110)
  • ರಾಜಕೀಯ (2,068)
  • ರಾಜ್ಯ (2,383)
  • ರಾಷ್ಟ್ರ (2,347)
  • ವಿಶ್ಲೇಷಣೆ (202)
  • ಶಿಕ್ಷಣ (411)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ರಾಜಕೀಯ ಸಂದಿಗ್ಧತೆಯಲ್ಲಿ ಸಚಿವ ಜಾರಕಿಹೊಳಿ

    September 24, 2026
  • ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

    September 23, 2026
  • ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

    September 22, 2026

KMS Special

  • ರಾಜಕೀಯ ಸಂದಿಗ್ಧತೆಯಲ್ಲಿ ಸಚಿವ ಜಾರಕಿಹೊಳಿ

    September 24, 2026
  • ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

    September 23, 2026
  • ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

    September 22, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

September 23, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ