46
ಬೆಂಗಳೂರು:ಮುಡಾ ತನಿಖೆ ಎದುರಿಸಲು ಸಿದ್ಧ, ಕಾನೂನು ರೀತಿ ಹೋರಾಟ ಮಾಡಲು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17ಎ ಪ್ರಕಾರ ತನಿಖೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ, ಆದೇಶದ ಪ್ರತಿ ದೊರೆತಿಲ್ಲ, ತೀರ್ಪನ್ನು ಪೂರ್ಣವಾಗಿ ಓದಿದ ನಂತರ ನಾಳೆ ಬೆಳಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಮೈಸೂರು ಲೋಕಾಯುಕ್ತಕ್ಕೆ ಶಿಫಾರಸ್ಸು
ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸ್ಸು ಮಾಡಲಾಗಿದೆ, ಮೈಸೂರಿನಲ್ಲಿಯೇ ದೂರು ನೀಡಲಾಗಿದ್ದು, ದೂರುದಾರರು ಮೈಸೂರಿನವರು, ಮುಡಾ ಕೂಡ ಅಲ್ಲಿಯೇ ಇರುವುದರಿಂದ ಮೈಸೂರಿಗೆ ಶಿಫಾರಸ್ಸು ಮಾಡಿರಬಹುದೆಂದು ಭಾವಿಸಿದ್ದೇನೆ.
ನ್ಯಾಯಾಲಯದ ಇಂದಿನ ಪೂರ್ಣ ಆದೇಶ ಲಭ್ಯವಾದ ಮೇಲೆ ವಕೀಲರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು, ಮುಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಆಯೋಗದ ತನಿಖೆ ಮುಂದುವರೆಯಲಿದೆ ಎಂದರು.