57
ಬೆಂಗಳೂರು:ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಚುನಾವಣೆ ಮುಗಿಯುವವರೆಗೂ ಚನ್ನಪಟ್ಟಣದಲ್ಲಿ ವಾಸ್ತವ್ಯ ಹೂಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಘೋಷಿಸಿದ್ದಾರೆ.
ಉಪಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ಕಚೇರಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚೆ ನಡೆಸಿ, ನಿಖಿಲ್ ಅಭ್ಯರ್ಥಿ ಎಂದು ತೀರ್ಮಾನ ಕೈಗೊಂಡ ನಂತರ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕ್ಷೇತ್ರದಲ್ಲಿಯೇ ಬಿಡಾರ ಹೂಡುವುದಾಗಿ ತಿಳಿಸಿದರು.
ಪ್ರತಿ ಮತದಾರರನ್ನು ಮುಟ್ಟುತ್ತೇನೆ
ಪ್ರಚಾರಕ್ಕಷ್ಟೇ ಒಂದೆರಡು ದಿನ ಹೋಗುವುದಲ್ಲ, ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ, ನಮ್ಮ ಅಭ್ಯರ್ಥಿ ಗೆಲುವಿಗಾಗಿ ಪ್ರತಿ ಮತದಾರರನ್ನು ಮುಟ್ಟುತ್ತೇನೆ.
ಕಾರ್ಯಕರ್ತರು ಮತ್ತು ಮತದಾರರು ಸದಾಕಾಲ ನಮ್ಮ ಪಕ್ಷದ ಕೈಹಿಡಿದಿದ್ದಾರೆ, ಈ ಬಾರಿಯೂ ಅವರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.