178
ಬೆಂಗಳೂರು:ಸಚಿವ ಸ್ಥಾನದಿಂದ ಪದಚ್ಯುತಗೊಂಡು ಅವಮಾನಿತರಾಗಿರುವ ಕೆ.ಎನ್.ರಾಜಣ್ಣ ವಿಧಾನಸಭೆ ಹಾಗೂ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಮುಗಿಯುತ್ತಿದ್ದಂತೆ, ಸೆಪ್ಟೆಂಬರ್ ಕ್ರಾಂತಿಯನ್ನು ಆಗಸ್ಟ್‌ನಲ್ಲೇ ಮಾಡಲು ಹೊರಟಿದ್ದಾರೆ.
ಸತ್ಯ ಹೇಳುವವರಿಗೆ ಬೆಲೆಯಿಲ್ಲ
ಸತ್ಯ ಹೇಳುವವರಿಗೆ ಪಕ್ಷದಲ್ಲಿ ಬೆಲೆಯಿಲ್ಲ, ಇಂತಹ ಕಡೆ ಮುಂದುವರೆಯಲು ಇಚ್ಛೆ ಇಲ್ಲ ಎಂದು ರಾಜಣ್ಣ ಹೇಳಿಕೊಂಡಿದ್ದಾರೆ.
ಪಕ್ಷದಲ್ಲೇ ಉಳಿಯುವಂತೆ ರಾಜಣ್ಣ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರನ್ನು ನಿಯೋಜಿಸಿದ್ದಾರೆ.


