Wednesday, June 10, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, June 10, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸಿದ್ದರಾಮಯ್ಯ ಈಗಲೂ ಜನನಾಯಕ: ಸಮೀಕ್ಷೆ

by KM Shivaraju December 6, 2025
written by KM Shivaraju December 6, 2025 0 comments 2 minutes read
0FacebookTwitterPinterestEmail
70

ಬೆಂಗಳೂರು:ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದರೂ ಆಡಳಿತ ವಿರೋಧಿ ಅಲೆ ಇದೆ ಎಂದು ಎನ್‌ಡಿಟಿವಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಈಗಲೂ ಜನನಾಯಕ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಜನಪ್ರಿಯತೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

ಅಲ್ಪಸಂಖ್ಯಾತರು ಕಾಂಗ್ರೆಸ್ ಪರ

ಅಲ್ಪಸಂಖ್ಯಾತರು ಹೆಚ್ಚಾಗಿರುವ ವಿಧಾನಸಭಾ ಕ್ಷೇತ್ರ ಹಾಗೂ ಆ ಸಮುದಾಯ ಬಹುತೇಕ ಕಾಂಗ್ರೆಸ್ ಪರ ಇದೆ.

ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದೆಲ್ಲಾ ಸಮುದಾಯಗಳು ಬಿಜೆಪಿ ಮತ್ತು ಜೆಡಿಎಸ್ ಪರ ಒಲವು ತೋರಿದ್ದಾರೆ.

ಸಮೀಕ್ಷಾ ವರದಿಯಲ್ಲಿ ವಿವಿಧ ಸಮುದಾಯಗಳು ಸಿದ್ದರಾಮಯ್ಯ-ಶಿವಕುಮಾರ್ ಅವರಿಗಿರುವ ಬೆಂಬಲ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಯಾವ ರೀತಿ ಜನಮನ್ನಣೆ ಇದೆ ಎಂಬುದನ್ನು ತಿಳಿಸಿದೆ.

ಮೈಶುಗರ್ ಶಿಕ್ಷಕರಿಗೆ ವೇತನ ನೀಡಿದ ಕುಮಾರಸ್ವಾಮಿ
ಬಿಜೆಪಿ-ಜೆಡಿಎಸ್‌ಗೆ ಒಲವು

ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೆ, ಅಲ್ಪಸಂಖ್ಯಾತರು ಹೊರತುಪಡಿಸಿ ಎಲ್ಲಾ ವರ್ಗಗಳಿಂದಲೂ ಕಾಂಗ್ರೆಸ್‌ಗಿಂತ ಹೆಚ್ಚು ಬೆಂಬಲ ವ್ಯಕ್ತವಾಗಲಿದೆ.

ಬಿಜೆಪಿ ಹಾಗೂ ಜೆಡಿಎಸ್‌ಗೆ ಪರಿಶಿಷ್ಟ ಜಾತಿ ಶೇ.47.2, ಪರಿಶಿಷ್ಟ ಪಂಗಡ ಶೇ.56.3, ಹಿಂದುಳಿದ ವರ್ಗ(ಒಬಿಸಿ) ಶೇ.59.3, ಮೇಲ್ವರ್ಗದ ಶೇ.68.5, ಅಲ್ಪಸಂಖ್ಯಾತರು ಶೇ.14.8, ಕ್ರಿಶ್ಚಿಯನ್ ಶೇ.17.6 ಹಾಗೂ ಇತರೆ ಸಮುದಾಯದ ಶೇ.75.5ರಷ್ಟು ಬೆಂಬಲ ಇದೆ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇವರುಗಳಿಗೆ ಇರುವ ಎಲ್ಲ ಸಮುದಾಯಗಳ ಬೆಂಬಲಿತರ ಪ್ರಮಾಣ ಒಗ್ಗೂಡಿಸಿದರೆ ಪರಿಶಿಷ್ಟ ಜಾತಿ ಶೇ.52, ಪರಿಶಿಷ್ಟ ಪಂಗಡ ಶೇ.43.7, ಹಿಂದುಳಿದ ವರ್ಗ(ಒಬಿಸಿ) ಶೇ.40, ಮೇಲ್ವರ್ಗ ಶೇ.31, ಅಲ್ಪಸಂಖ್ಯಾತರು ಶೇ.85.2, ಕ್ರಿಶ್ಚಿಯನ್ ಶೇ.82.4 ಹಾಗೂ ಇತರೆ ಶೇ.24.2ರಷ್ಟಿದೆ ಎಂದು ವರದಿ ಹೇಳಿದೆ.

ನಾಯಕತ್ವ ಜನಪ್ರಿಯತೆ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವರ್ಚಸ್ಸು ಮತ್ತು ನಾಯಕತ್ವ ಜನಪ್ರಿಯತೆಯ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ, ಶಿವಕುಮಾರ್ ಆಗಲೀ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಹತ್ತಿರದಲ್ಲಿ ಎಲ್ಲೂ ಇಲ್ಲ ಎಂದು ಎನ್‌ಡಿಟಿವಿ ಸಮೀಕ್ಷೆ ತಿಳಿಸಿದೆ.

ಎಲ್ಲಾ ಸಮುದಾಯಗಳಿಂದ ಈ ನಾಯಕರುಗಳಿಗೆ ಯಾವ ಪ್ರಮಾಣದಲ್ಲಿ ಬೆಂಬಲ ಇದೆ ಎಂಬುದನ್ನು ತನ್ನ ಸಮೀಕ್ಷೆಯಲ್ಲಿ ವಿವರಿಸಿದೆ.

ಸಿದ್ದರಾಮಯ್ಯ ಒಬಿಸಿ ನಾಯಕ ಎಂಬುದಾಗಿ ಎಐಸಿಸಿ ಬಿಂಬಿಸುತ್ತಿದೆ, ಆದರೆ, ರಾಜ್ಯದಲ್ಲಿ ಅವರಿಗೆ ಶೇ.33.3ರಷ್ಟು ಮಾತ್ರ ಬೆಂಬಲ ಇರುವುದು ವ್ಯಕ್ತವಾಗಿದೆ.

ಯಾವ ಸಮುದಾಯ ಎಷ್ಟು ಬೆಂಬಲ

ಸಿದ್ದರಾಮಯ್ಯ ಅವರಿಗೆ ಮುಂದುವರೆದ ಜನಾಂಗದ ಬೆಂಬಲ ಶೇ.29.9ರಷ್ಟಿದ್ದರೆ, ಅಲ್ಪಸಂಖ್ಯಾತರ ಶೇ.74.9ರಷ್ಟು ಬೆಂಬಲ ಇದೆ, ಆದರೆ, ಶಿವಕುಮಾರ್ ಅವರಿಗೆ ಹಿಂದುಳಿದ ವರ್ಗದಲ್ಲಿ ಶೇ.6ರಷ್ಟಿದ್ದರೆ, ಮುಂದುವರೆದ ಜನಾಂಗದ ಶೇ.5.9 ಹಾಗೂ ಮುಸ್ಲಿಂ ಶೇ.9.1ರಷ್ಟು ಬೆಂಬಲ ಇದೆ.

ಕಳೆದ 30 ತಿಂಗಳ ಆಡಳಿತದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ, ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟ ಸುಧಾರಿಸಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡು ಬರುತ್ತಿದೆ.

ಅಲ್ಪಸಂಖ್ಯಾತರು ಹೆಚ್ಚಾಗಿರುವ ಕ್ಷೇತ್ರಗಳನ್ನು ಹೊರತುಪಡಿಸಿ, ಬಿಜೆಪಿ ಮತ್ತು ಜೆಡಿಎಸ್‌ಗೆ ಜನತೆ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cm siddaramaiah still popularcommunity supportndtv survey
0 FacebookTwitterPinterestEmail
KM Shivaraju

previous post
ಮೈಶುಗರ್ ಶಿಕ್ಷಕರಿಗೆ ವೇತನ ನೀಡಿದ ಕುಮಾರಸ್ವಾಮಿ
next post
ಡಾ.ಪರಮೇಶ್ವರ್ ಮುಖ್ಯಮಂತ್ರಿ ಮಾಡಿ: ಸಿದ್ದರಾಮಯ್ಯ

You may also like

ವಿಧಾನ ಪರಿಷತ್ ಚುನಾವಣೆ: ಅಖಾಡಕ್ಕೆ ಡಿಕೆಶಿ-ಎಚ್‌ಡಿಕೆ

June 8, 2026

ಮನಸು ಬದಲಿಸಿದ ರಾಮಲಿಂಗಾರೆಡ್ಡಿ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

June 6, 2026

ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ

June 5, 2026

ಅಕ್ರಮ ತಡೆಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

June 4, 2026

ಡಿ.ಕೆ.ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿ

June 3, 2026

ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

June 2, 2026

ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

June 1, 2026

ಸಿಎಲ್‌ಪಿ ನಾಯಕನಾಗಿ ಡಿಕೆಶಿ ಸರ್ವಾನುಮತ ಆಯ್ಕೆ

May 30, 2026

ಸಿಎಲ್‌ಪಿ ನಾಯಕನಾಗಿ ನಾಳೆ ಶಿವಕುಮಾರ್ ಆಯ್ಕೆ

May 29, 2026

Social Networks

Facebook Twitter Instagram Linkedin Youtube Email Rss

KMS Analysis

  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ‌ ಸ್ವೀಕಾರ

    June 2, 2026
  • ಮುಖ್ಯಮಂತ್ರಿ ನಿವಾಸವಾಗಿ ಬದಲಾಗಲಿದೆ ಕುಮಾರಕೃಪಾ ಅತಿಥಿ ಗೃಹ

    June 1, 2026
  • ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

    May 27, 2026
  • ಅಧಿಕಾರ ತ್ಯಾಗಕ್ಕೆ ಸಿದ್ದರಾಗಲು‌ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ

    May 26, 2026

Categories

  • Special Story (484)
  • ಅಂಕಣ (109)
  • ಉದ್ಯೋಗ (332)
  • ದಿನ ಭವಿಷ್ಯ (110)
  • ರಾಜಕೀಯ (1,978)
  • ರಾಜ್ಯ (2,292)
  • ರಾಷ್ಟ್ರ (2,260)
  • ವಿಶ್ಲೇಷಣೆ (197)
  • ಶಿಕ್ಷಣ (396)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ವಿಧಾನ ಪರಿಷತ್ ಚುನಾವಣೆ: ಅಖಾಡಕ್ಕೆ ಡಿಕೆಶಿ-ಎಚ್‌ಡಿಕೆ

    June 8, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026

KMS Special

  • ವಿಧಾನ ಪರಿಷತ್ ಚುನಾವಣೆ: ಅಖಾಡಕ್ಕೆ ಡಿಕೆಶಿ-ಎಚ್‌ಡಿಕೆ

    June 8, 2026
  • ಮನಸು ಬದಲಿಸಿದ ರಾಮಲಿಂಗಾರೆಡ್ಡಿ

    June 6, 2026
  • ರಾಮಲಿಂಗಾ ರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ

    June 6, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ವಿಧಾನ ಪರಿಷತ್ ಚುನಾವಣೆ: ಅಖಾಡಕ್ಕೆ ಡಿಕೆಶಿ-ಎಚ್‌ಡಿಕೆ

June 8, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ