Thursday, September 24, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Thursday, September 24, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

by KM Shivaraju September 23, 2026
written by KM Shivaraju September 23, 2026 0 comments 2 minutes read
0FacebookTwitterPinterestEmail
4

ಬೆಂಗಳೂರು:ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು ರೈತರ ಬದುಕಿಗಾಗಿಯೇ ಹೊರತು, ಈಶ್ವರಪ್ಪ ಹೇಳಿದ್ದ 15 ಜನರನ್ನು ಕೊಟ್ಟು, ಕೊಳ್ಳುವ ರಾಜೀನಾಮೆ ರೀತಿ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಂದು ತಿರುಗೇಟು ನೀಡಿದ್ದಾರೆ.

ಬರ ವಿಚಾರ ಕುರಿತ ಚರ್ಚೆ ವೇಳೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಪತ್ರದ ಪ್ರತಿ ಪ್ರದರ್ಶಿಸಿ ಗದ್ದಲ ಎಬ್ಬಿಸಿದಾಗ, ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ಮಾತನಾಡಿ, ವಿರೋಧ ಪಕ್ಷದವರು ಬಹಳ ಆತುರದಲ್ಲಿ ರಾಜಕಾರಣ ಮಾಡಲು ಬಡಿದಾಡುತ್ತಿದ್ದಾರೆ, ಏನೋ ದೊಡ್ಡದಾಗಿ ಆಚೆ ಬಂದಿದೆ ಎಂದು ಕೂಗಾಡುತ್ತಿರುವುದನ್ನು ನೋಡಿ ನಾನು ಇಲ್ಲಿಗೆ ಬಂದೆ.

ಅದರಲ್ಲಿ ತಪ್ಪೇನಿದೆ

ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿದ್ದು, ನಮ್ಮನ್ನು ಆರಿಸಿದವರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ, ಅದಕ್ಕೆ ಯಶವಂತಗೌಡರು ತಮ್ಮ ಮತದಾರರ ಅಭಿಪ್ರಾಯಕ್ಕೆ ಸ್ಪಂದಿಸಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಭೀಕರ ಬರ ಪರಿಸ್ಥಿತಿ ಬಗ್ಗೆ ಪ್ರಧಾನಮಂತ್ರಿ ನಎಚ್ಚರಿಕೆ ನೀಡಿದ್ದಾರೆ, ನಾವು ವಿವಿಧ ಪ್ರದೇಶಗಳ ಪರಿಸ್ಥಿತಿ ನೋಡಿದ್ದೇವೆ, ಕಳೆದ ಅಧಿವೇಶನದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡಲೆಂದೇ, ಬರದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ, ಇಂದು ಎಲ್ಲಾ ಶಾಸಕರು ಅವರವರ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವ ಉದ್ದೇಶದಿಂದಲೇ ಈ ಅಧಿವೇಶನ ನಡೆಸಲಾಗುತ್ತಿದೆ.

ಭೀಕರ ಬರಗಾಲ ಎದುರಾಗಿದ್ದು, ನಾನು ರಾಜ್ಯದ ವಿವಿಧ ಭಾಗಗಳಿಗೆ ಹೋಗಿ, ನನಗಿದ್ದ ಸಮಯದಲ್ಲಿ ಸಾಧ್ಯವಾದಷ್ಟು ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ದೇನೆ, ಇಲ್ಲಿ ಯಶವಂತರಾಯಗೌಡ ಪಾಟೀಲ್ ವಿಚಾರ ಪ್ರಸ್ತಾಪಿಸಲಾಗಿದೆ, ನಾನು ಅವರೊಂದಿಗೆ ಚರ್ಚೆ ಮಾಡಿದ್ದೇನೆ, ಎಲ್ಲಾ ಕ್ಷೇತ್ರಗಳಲ್ಲಿ ಜನರು ಸಾಲ ಮಾಡಿ ಬೆಳೆ ಹಾಕಿದ್ದಾರೆ, ರೈತರಿಗೆ ಪರಿಹಾರ ನೀಡಬೇಕು.

ಕೇಂದ್ರದ ತೀರ್ಮಾನ

ಕೇಂದ್ರ ಸರ್ಕಾರ ಬರದ ಬಗ್ಗೆ ತೀರ್ಮಾನ ಮಾಡಬೇಕಿದೆ, ನಾವು ಇಲ್ಲಿಂದ ವರದಿ ಕಳುಹಿಸಿದರೂ ಅದು ತಲುಪುವುದು ಕೇಂದ್ರಕ್ಕೆ, ನೀವು ವಿಧಾನಸಭಾಧ್ಯಕ್ಷರು ಎನ್ನುವ ಕಾರಣಕ್ಕೆ ನಿಮ್ಮ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡುವ ಅಧಿಕಾರ ಇಲ್ಲ.

ಬರ ಪ್ರದೇಶ ಘೋಷಣೆ ಮಾಡಲು ಮಾನದಂಡಗಳಿವೆ, 21 ದಿನ ಮಳೆ ಬಿದ್ದಿರಬಾರದು, ಮಳೆ ಪ್ರಮಾಣ ಕೊರತೆಗೆ ಮಾರ್ಗಸೂಚಿಗಳಿವೆ, ನಮ್ಮ ಶಾಸಕರು ಸೇರಿದಂತೆ ಅನೇಕರು ನಮ್ಮ ತಾಲ್ಲೂಕನ್ನು ಬರ ಪಟ್ಟಿಗೆ ಸೇರಿಸಿ ಎಂಬ ಮನವಿ ಪತ್ರ ನೀಡಿದ್ದಾರೆ, ನಾನು ಯಾವ ಕ್ಷೇತ್ರವನ್ನೂ ಸೇರಿಸಿಲ್ಲ, ಎಲ್ಲಾ ಜವಾಬ್ದಾರಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಖಾತೆ ನಿರ್ವಹಿಸುತ್ತಿರುವ ಡಾ.ಜಿ.ಪರಮೇಶ್ವರ್ ಅವರಿಗೆ ವಹಿಸಿದ್ದೇನೆ.

ಎಲ್ಲರ ಒತ್ತಡದ ಮೇರೆಗೆ ಮೋಡ ಬಿತ್ತನೆ ಪ್ರಯತ್ನಕ್ಕೂ ಮುಂದಾಗಿದ್ದೇವೆ, ಕೆಲವು ಭಾಗದಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಭಾಗದಲ್ಲಿ ಯಶಸ್ವಿಯಾಗಿಲ್ಲ, ಮೋಡಗಳು ಬಂದರೆ ಬಿತ್ತನೆ ಮಾಡಲು ಸಾಧ್ಯ.

ಬೇಸರಗೊಂಡಿರುವುದರಲ್ಲಿ ತಪ್ಪಿಲ್ಲ

ಹೆಚ್.ಕೆ.ಪಾಟೀಲ್ ಅವರಂತಹ ಹಿರಿಯ ನಾಯಕರ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಒತ್ತಡ ಇರಬೇಕಾದರೆ, ಯಶವಂತರಾಯಗೌಡ ಪಾಟೀಲ್ ಬೇಸರಗೊಂಡಿರುವುದರಲ್ಲಿ ತಪ್ಪಿಲ್ಲ.

ಬರ ವಿಚಾರದಲ್ಲಿ ಪಕ್ಷಭೇದ ಮಾಡುತ್ತಿಲ್ಲ, 224 ಕ್ಷೇತ್ರಗಳು ಒಂದೇ, ಮಳೆ ಎಲ್ಲಿ ಬಿದ್ದಿಲ್ಲವೋ ಮಾನದಂಡಗಳ ಅನುಸಾರ ಬರ ಘೋಷಣೆ ಮಾಡಲಾಗಿದೆ, ನನ್ನ ಕ್ಷೇತ್ರದ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ, ಉಳಿದ ಭಾಗದಲ್ಲಿ ಮಳೆಯಾಗಿಲ್ಲ. ಆದರೂ ನಾನು ಬರದ ಪಟ್ಟಿಗೆ ಸೇರಿಸುವಂತೆ ಒತ್ತಡ ಹಾಕಿಲ್ಲ.

ಯಶವಂತರಾಯಗೌಡ ಪಾಟೀಲ್ ಭಾವನಾತ್ಮಕವಾಗಿ ಬಂದಿದ್ದು ನಿಜ, ಅವರು ಸಭಾಧ್ಯಕ್ಷರ ಬಳಿಗೂ ಬಂದಿದ್ದಾರೆ, ನೀವು ಮುಖ್ಯಮಂತ್ರಿ ಜತೆ ಮಾತನಾಡಿ ಎಂಬ ಸಲಹೆ ನೀಡಿದ್ದೀರಿ, ನಾನು ಅವರೊಂದಿಗೆ ಮಾತನಾಡಿ, ಸಮಾಧಾನ ಮಾಡಿ ಅವರನ್ನು ಕಳುಹಿಸಿ ಇಲ್ಲಿಗೆ ಬಂದಿರುವೆ, ಅವರಿಗೂ ಒತ್ತಡವಿದೆ, ಅವರು ತಮ್ಮ ಕ್ಷೇತ್ರದ ಜನರಿಗೆ ಉತ್ತರ ನೀಡಬೇಕಲ್ಲವೇ, ಅವರು ಭಾವನಾತ್ಮಕವಾಗುವುದರಲ್ಲಿ ತಪ್ಪೇನಿಲ್ಲ.

ರೈತರಿಗಾಗಿ ರಾಜೀನಾಮೆ

ಯಶವಂತರಾಯಗೌಡ ಪಾಟೀಲ್ ಬೇರೆ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ, ಈಶ್ವರಪ್ಪ 15 ರಾಜೀನಾಮೆಗಳ ಬಗ್ಗೆ ಹೇಳಿದರಲ್ಲ, ಅಂತಹ ರಾಜೀನಾಮೆ ಅಲ್ಲ, ರೈತರ ಬದುಕಿಗಾಗಿ ನೀಡಲು ಮುಂದಾದ ರಾಜೀನಾಮೆ.

ನಾಗೇಂದ್ರ ರಾಜೀನಾಮೆ ವಿಚಾರ ಬೇರೆ, ಅವರ ರಾಜೀನಾಮೆ ನಾನೇ ತೆಗೆದುಕೊಂಡಿದ್ದೇನೆ, ಈಶ್ವರಪ್ಪ ಹೇಳಿದ್ದು, ಕೊಟ್ಟು ತೆಗೆದುಕೊಳ್ಳುವ ರಾಜೀನಾಮೆ, ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಬಗ್ಗೆ ವಿರೋಧ ಪಕ್ಷಗಳು ಗಾಬರಿಯಾಗುವುದು ಬೇಡ.

ವಿರೋಧ ಪಕ್ಷದವರು ಭಾವನಾತ್ಮಕವಾಗಿ ರಾಜೀನಾಮೆ ನೀಡಿದರೂ ನಾವು ಆತುರದಲ್ಲಿ ಅದನ್ನು ಅಂಗೀಕಾರ ಮಾಡುವುದಿಲ್ಲ, ಜನ ನಿಮ್ಮನ್ನು 5 ವರ್ಷಕ್ಕೆ ಆಯ್ಕೆ ಮಾಡಿದ್ದು, ನೀವು ಇಲ್ಲಿ ಇದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕು, ನಾನು 224 ಕ್ಷೇತ್ರಗಳಿಗೆ ಮುಖ್ಯಮಂತ್ರಿ, ಇದು 224 ಕ್ಷೇತ್ರಗಳ ಸರ್ಕಾರ, ಬರದ ವಿಚಾರವಾಗಿ ಮುಕ್ತವಾಗಿ ಚರ್ಚಿಸಿ ಎಂದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
224 assembly constituencycentral govt.Chief Ministercm d k shivakumardrought areakarnataka govt.resignationruling party mla
0 FacebookTwitterPinterestEmail
KM Shivaraju

previous post
ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

You may also like

ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

September 22, 2026

ಪಶುವೈದ್ಯಾಧಿಕಾರಿ ನೇಮಕ ಅಕ್ರಮ: ಹೈಕೋರ್ಟ್ ತನಿಖೆ

September 21, 2026

ಡಿಕೆಶಿ ಸ್ವಂತ ಹಣದಲ್ಲೇ ಕೃಷಿ ಸಾಲ ಮನ್ನಾ ಸಾಧ್ಯ

September 19, 2026

3,705 ಕೋಟಿ ರೂ. ನೀಡಿ: ಕೇಂದ್ರಕ್ಕೆ ಕರ್ನಾಟಕ ಒತ್ತಾಯ

September 18, 2026

ಕರಾವಳಿ ಸಂಪುಟ ಸಭೆ: ಜನರ ಮನೆ ಬಾಗಿಲಿಗೆ ಸರ್ಕಾರ

September 17, 2026

ಡ್ಯಾಂಗಳ ನೀರು ಕುಡಿಯಲು, ಕೆರೆ ತುಂಬಲು ಮಾತ್ರ

September 16, 2026

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ. ಬಂಧನ ಭೀತಿ ?

September 15, 2026

ಕಾಂಗ್ರೆಸ್ ಹಗರಣಗಳ ತನಿಖೆಗೆ ಇ.ಡಿ. ಚೀಫ್ ಎಂಟ್ರಿ !

September 12, 2026

ಇ.ಡಿ. ರಾಡಾರ್‌ನಲ್ಲಿ ಇನ್ನೂ ಮೂರ‍್ನಾಲ್ಕು ಸಚಿವರು

September 11, 2026

ಮುಂದಿನ 500 ದಿನ ಆಡಳಿತದಲ್ಲಿ 6 ಲಕ್ಷ ಉದ್ಯೋಗ

September 10, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (574)
  • ಅಂಕಣ (109)
  • ಉದ್ಯೋಗ (353)
  • ದಿನ ಭವಿಷ್ಯ (110)
  • ರಾಜಕೀಯ (2,067)
  • ರಾಜ್ಯ (2,382)
  • ರಾಷ್ಟ್ರ (2,346)
  • ವಿಶ್ಲೇಷಣೆ (202)
  • ಶಿಕ್ಷಣ (411)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

    September 23, 2026
  • ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

    September 22, 2026
  • ಪಶುವೈದ್ಯಾಧಿಕಾರಿ ನೇಮಕ ಅಕ್ರಮ: ಹೈಕೋರ್ಟ್ ತನಿಖೆ

    September 21, 2026

KMS Special

  • ಆಡಳಿತ ಶಾಸಕರ ರಾಜೀನಾಮೆಗೆ ಡಿಕೆಶಿ ಸಮರ್ಥನೆ

    September 23, 2026
  • ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ ರೂ.

    September 22, 2026
  • ಪಶುವೈದ್ಯಾಧಿಕಾರಿ ನೇಮಕ ಅಕ್ರಮ: ಹೈಕೋರ್ಟ್ ತನಿಖೆ

    September 21, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಅಸಮಾಧಾನ ಶಾಸಕರ ಓಲೈಕೆಗೆ ತಲಾ 100 ಕೋಟಿ...

September 22, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ