Friday, October 16, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Friday, October 16, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸ್ಟಿಂಗ್‌ ಆಪರೇಷನ್‌: ಹೋರಾಡಲು ಅಖಾಡಕ್ಕೆ ಬನ್ನಿ

by KM Shivaraju October 15, 2026
written by KM Shivaraju October 15, 2026 0 comments 3 minutes read
0FacebookTwitterPinterestEmail
5

ಬೆಂಗಳೂರು:ಸ್ಟಿಂಗ್‌ ಆಪರೇಷನ್‌ ನಡೆಸಿದವರ ಮೇಲೆ ಎರಡು ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಎಚ್ಚರಿಸಿದ್ದಾರೆ.

ಮಾರುವೇಷದ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಜೆಡಿಎಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ ಇಬ್ಬರನ್ನು ವಶಕ್ಕೆ ಪಡೆದಿರುವುದಕ್ಕೆ ಕೋಪಗೊಂಡಿರುವ ಕುಮಾರಸ್ವಾಮಿ, ಅಮಾಯಕರನ್ನು ಬಂಧಿಸುವ ಬದಲು ನನ್ನನ್ನೇ ಬಂಧಿಸಿ ವಿಚಾರಣೆ ನಡೆಸಿ ಎಂದು ಒತ್ತಾಯಿಸಿ, ನಗರ ಪೋಲಿಸ್‌ ಆಯುಕ್ತರ ಕಚೇರಿಯಲ್ಲೇ ಧರಣಿ ನಡೆಸಿದರು.

ಸ್ಟಿಂಗ್‌ ಆಪರೇಷನ್‌ ಕಿಂಗ್‌ಪಿನ್‌

ಆಯುಕ್ತರ ಮನವಿಗೆ ಸ್ಪಂದಿಸಿ, ಧರಣಿ ಕೈಬಿಟ್ಟು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್‌ ಕಿಂಗ್‌ಪಿನ್‌ ರಾಕೇಶ್‌ ಶೆಟ್ಟಿ ಮತ್ತು ಕೃಪಾ ಆಳ್ವ ಅವರನ್ನು ಬಂಧಿಸದೆ, ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದು ಏತಕ್ಕೆ ಎಂದು ಪ್ರಶ್ನಿಸಿದರು.

ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಯ ಬಂದರೆ, ನನ್ನನ್ನೂ ಕರೆಸಿ, ವಿಚಾರಣೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದರು, ಅವರು ಕರೆಸುವುದಕ್ಕೂ ಮುನ್ನವೇ ನಾನೇ ಖುದ್ದಾಗಿ ಪೋಲಿಸ್‌ ಆಯುಕ್ತರ ಕಚೇರಿಗೆ ಬಂದಿದ್ದೇನೆ, ವಿಚಾರಣೆ ನಡೆಸಿ ಎಂದು ಧರಣಿ ನಡೆಸಿದೆ.

ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಧರಣಿ ಕೈಬಿಟ್ಟಿದ್ದೇನೆ, ಆದರೆ, ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಬೇಕು, ಇಲ್ಲವಾದರೆ, ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದೇನೆ.

ರಾಕೇಶ್‌ ಶೆಟ್ಟಿ, ಕೃಪಾ ಆಳ್ವ

ಸ್ಟಿಂಗ್‌ ಆಪರೇಷನ್‌ನಲ್ಲಿ ರಾಕೇಶ್‌ ಶೆಟ್ಟಿ ಮತ್ತು ಕೃಪಾ ಆಳ್ವ ಹೆಸರುಗಳು ಸಿದ್ದರಾಮಯ್ಯ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲೇ ಇದೆ, ಹೇಗೆಲ್ಲಾ ಈ ಕಾರ್ಯಾಚರಣೆ ನಡೆದಿದೆ ಎಂಬುದನ್ನು ಅದರಲ್ಲಿ ವಿವರಿಸಿದ್ದಾರೆ.

ಈ ವಿಚಾರ ಸಿದ್ದರಾಮಯ್ಯ ಅವರಿಗೆ ತಿಳಿದಿತ್ತು, ಆದರೂ, ಶೆಟ್ಟಿ ನೀಚ ಎಂಬುದು ಗೊತ್ತಿದ್ದರೂ ಅವರ ಮನೆಗೆ ಸಿದ್ರಾಮಣ್ಣ ಪದೇ ಪದೇ ಭೇಟಿ ನೀಡುತ್ತಿದ್ದುದು ಏತಕ್ಕೆ ಎಂದು ಪ್ರಶ್ನಿಸಿದರು.

ಇಷ್ಟೆಲ್ಲಾ ಮಾಹಿತಿ ಇದ್ದರೂ, ಪೋಲಿಸರು ಸರ್ಕಾರದ ಒತ್ತಡಕ್ಕೆ ಮಣಿದು ನನ್ನ ಕಾರ್ಯಕರ್ತರನ್ನು ಬಂಧಿಸಿ, ನತಮಗೆ ಬೇಕಾದ ರೀತಿ ಹೇಳಿಕೆ ಬರೆಸಿಕೊಂಡಿದ್ದೀರಿ, ನಿಮಗೆ ತಾಕತ್ತಿದ್ದರೆ, ನನ್ನ ಮೇಲೆ ಎಫ್‌ಐಆರ್‌ ಹಾಕಿ ಎಂದು ಸವಾಲು ಹಾಕಿದರು.

ಕೋಟ್ಯಂತರ ರೂ. ಲೂಟಿ

ರಾಕೇಶ್‌ ಶೆಟ್ಟಿ ಜೊತೆ ಕೈಜೋಡಿಸಿರುವ ರೌಡಿ ಶೀಟರ್‌ ಬಾಗೇಪಲ್ಲಿ ಪ್ರಶಾಂತ್‌, ನೂರಾರು ಮಂದಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಸ್ಟಿಂಗ್‌ ಆಪರೇಷನ್‌ ಮಾಡಿ, ಬೆದರಿಕೆ ಒಡ್ಡಿ, ಕೋಟ್ಯಂತರ ರೂ. ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಆರೋಪಿಗಳು ಇರುವ ಕೆಲವು ಛಾಯಾಚಿತ್ರಗಳನ್ನೂ ಬಿಡುಗಡೆ ಮಾಡಿದರು.

‌

ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ, ಮುನಿರತ್ನ, ಕೆ.ಎನ್.ರಾಜಣ್ಣ ಅವರನ್ನು ಹೇಗೆ ಮುಗಿಸಿದ್ದೀರಾ ಎಂಬುದು ಗೊತ್ತು, ನನ್ನ ಜೊತೆ ಆಟ ಆಡಿದರೆ ಸುಮ್ಮನಿರಲ್ಲ, ಸಂಶಯ ಬಂದರೆ ನನ್ನನ್ನು ವಶಕ್ಕೆ ಪಡೆಯುತ್ತಾರಂತೆ, ಯಾರನ್ನು ಕೇಳಿ ಬಂಧಿಸುತ್ತೀರಾ, ನಮ್ಮ ಪಕ್ಷದ ಕಾರ್ಯಕರ್ತನನ್ನು ಬೆಳಗ್ಗೆಯಿಂದ ರಾತ್ರಿವರೆಗೆ ಕೂರಿಸಿದ್ದೀರಲ್ಲಾ, ಏನು ಸಿಕ್ಕಿತು ನಿಮಗೆ ಎಂದು ಕಿಡಿಕಾರಿದರು.

ಸಂಶಯವಿದೆಯೆಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಇಷ್ಟ ಬಂದಂತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದ ಅವರು, ನನ್ನ ತಾಳೆ ಪರೀಕ್ಷೆ ಮಾಡಬೇಡಿ, ಹೋರಾಟಕ್ಕೆ ಸಿದ್ಧವಿದ್ದೇನೆ, ಅಖಾಡಕ್ಕೆ ಬನ್ನಿ ಎಂದರು.

ನ್ಯಾಯಾಧೀಶರ ನೇತೃತ್ವದ ತನಿಖೆ

ಸ್ಟಿಂಗ್ ಆಪರೇಷನ್ ಸ್ಕ್ರಿಪ್ಟ್ ರೈಟರ್ ನಾನಾ, ನೀವಾ, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ಆಪರೇಷನ್ ಸ್ಟಿಂಗ್ ಮಾಡಿದ್ದ ಬಗ್ಗೆ ತನಿಖೆ ಮಾಡಿಸಲಿ, ನೀವು ತಯಾರಾಗಿರಿ, ನೋಟಿಸ್ ಕೊಟ್ಟರೆ ಹೆದರಿಕೊಂಡು ಕುಳಿತುಕೊಳ್ಳುತ್ತೀನಾ, ಹೋರಾಟಕ್ಕೆ ಅಖಾಡ ಸಿದ್ಧವಾಗಿದೆ.

ತಪ್ಪು ಮಾಡಿದ್ದರೆ ನಾನು ತಲೆಬಾಗುತ್ತೇನೆ, ಒತ್ತಾಯಿಸಿ, ಹೆದರಿಸಿ, ಬೆದರಿಸಿ ಹೇಳಿಕೆ ತೆಗೆದುಕೊಂಡರೆ, ನಾವು ಸುಮ್ಮನೆ ಇರಲ್ಲ, ಬರಬೇಕೆಂದರೆ ನಾನೇ ಬರುತ್ತೇನೆ, ಬಾರಪ್ಪಾ ಅರೆಸ್ಟ್ ಮಾಡು ನೋಡುತ್ತೇನೆ ಎಂದು ಗುಡುಗಿದರು.

ತಾವು ಎತ್ತಿರುವ ಹಲವು ಪ್ರಶ್ನೆಗಳಿಗೆ‌ ಉತ್ತರ ಕೊಡಲು ಆಗುವುದಿಲ್ಲವಂತೆ, ಹಾಗಾದರೆ ಏತಕ್ಕೆ ಇರೋದು ಸರ್ಕಾರ, ಸ್ಟಿಂಗ್ ಆಪರೇಷನ್‌ನಲ್ಲಿ ಶಾಮೀಲಾದ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವ ಅವರನ್ನು ಪ್ರಶ್ನಿಸದೆ, ನಮ್ಮ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸುತ್ತಾರೆ.

ಹೋರಾಟಕ್ಕೆ ರೆಡಿ, ಅಖಾಡಕ್ಕೆ ಬನ್ನಿ

ಗೃಹ ಇಲಾಖೆ ಏನು ನಿಮ್ಮ ಅಪ್ಪನ ಆಸ್ತಿನಾ, ತಾಕತ್‌, ಯೋಗ್ಯತೆ ಇದ್ದರೆ ಕರ್ಮಕಾಂಡದ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ ಎಂದರು.

ನಾನು ನೋಡದೆ ಇರುವ ಅಧಿಕಾರನಾ ನಿಮ್ಮದು, ಮುಖ್ಯಮಂತ್ರಿನಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್​ ಮಾಡ್ತಾನೆ, ಮೊದಲು ಅವನನ್ನು ಅರೆಸ್ಟ್​ ಮಾಡಿ, ಕರ್ನಾಟಕ ರಾಜ್ಯವನ್ನು ಇಂತಹ ಪರಿಸ್ಥಿತಿಗೆ ತಂದು ಬಿಟ್ಟಿದ್ದಾರೆ, ಅದಕ್ಕಾಗಿ ಇಷ್ಟು ಆಕ್ರೋಶವಾಗಿ ಪದ ಬಳಸಿ ಮಾತನಾಡಿದ್ದೇನೆ, ಅದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ, ನನ್ನ ರಕ್ತ ಕುದಿಯುತ್ತಿದೆ, ನಮ್ಮ ರಾಜ್ಯ ಉಳಿಯಬೇಕು.

ನಿಮ್ಮ ಮುಖ್ಯಮಂತ್ರಿ ಮಾತನಾಡಿದ್ದಾರಲ್ಲಾ, ಆ ಆಡಿಯೋ ಬಗ್ಗೆ ತನಿಖೆ ಮಾಡಿ, ತನಿಖೆಗೆ ಒಳಗಾಗಬೇಕಿದ್ದ ವ್ಯಕ್ತಿ ಪೊಲೀಸ್ ಠಾಣೆಯಲ್ಲೇ ಆರಾಮವಾಗಿ ಮಾತನಾಡುತ್ತಾನೆ, ನಿನ್ನೆ ಡಿಸಿಪಿ ಒಬ್ಬರ ಕಚೇರಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂತಿದ್ದನಂತೆ, ಮೊದಲು ಅವನನ್ನು ಬಂಧಿಸಿ ಎಂದರು.

ಮುಖ್ಯಮಂತ್ರಿ ಮೊಬೈಲ್ ತನಿಖೆ

ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಶಿವಕುಮಾರ್ ಮೊದಲು ತಮ್ಮ ಮೊಬೈಲ್ ತನಿಖೆಗೆ ಕೊಡಬೇಕು, ಒಂದು ಹೆಣ್ಣು ಮಗಳನ್ನು ಕಳುಹಿಸಿ 5 ದಿನ ಮಾಜಿ ಮಂತ್ರಿ ರೇವಣ್ಣ ಅವರನ್ನು ಜೈಲಿಗೆ ಕಳುಹಿಸಿದಿರಲ್ಲಾ, ಹಾಗೇ ನನ್ನನ್ನೂ ಒಳಗೆ ಕಳುಹಿಸಲು ಯತ್ನಿಸಲಾಗುತ್ತಿದೆ.

ಮುಖ್ಯಮಂತ್ರಿ ಶಿವಕುಮಾರ್ ಮತ್ತು ಅವರ ಜೊತೆ ಇರುವವರ ಮೊಬೈಲ್ ಚೆಕ್ ಮಾಡಿ, ನಾವು ಸ್ಟಿಂಗ್ ಆಪರೇಷನ್ ಮಾಡಿದ್ದನ್ನು ಜೆ.ಪಿ.ನಗರದಲ್ಲಿ ಇಟ್ಟುಕೊಳ್ಳುತ್ತೀವಾ.

ಸಿದ್ದರಾಮಯ್ಯ ಅವರ ಕುರಿತ ಪೆನ್​ಡ್ರೈವ್​ ಶಿವಕುಮಾರ್​ ಅವರಿಗೆ ಕೊಟ್ಟ ಆ ಹೆಣ್ಣುಮಗಳು ಯಾರು, ಸಿದ್ದರಾಮಯ್ಯ ಎಲ್ಲಿ ದೂರು ಕೊಟ್ಟಿದ್ದಾರೆ, ಆ ಬಗ್ಗೆ ಮಾಹಿತಿ ಇಲ್ಲ, ಎಫ್​ಐಆರ್​ ಆದ ಮೇಲೆ ಪೋಲಿಸ್‌ ವೆಬ್‌ಸೈಟ್ ನ ಆನ್‌ಲೈನ್‌ನಲ್ಲಿ ವಿಷಯ ಅಪ್‌ಡೇಟ್ ಆಗಬೇಕು, ಏಕೆ ಆಗಿಲ್ಲ.

ಸರ್ಕಾರ ಕಿತ್ತು ಹಾಕುವ ಸಮಯ

ಸಿದ್ದರಾಮಯ್ಯ ಅವರನ್ನು ಏಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು, ಸಿದ್ದರಾಮಯ್ಯ ಹರಕೆ ಕುರಿ ಆಗಬೇಡಿ, ಧೈರ್ಯವಾಗಿ ಎದುರಿಸಿ, ಈ ಸರ್ಕಾರ ಕಿತ್ತು ಹಾಕುವ ಸಮಯ ಬಂದಿದೆ ಎಂದರು.

ಸಿದ್ದರಾಮಯ್ಯ ವಿರುದ್ಧ ನಾನೂ ಹೋರಾಟ ಮಾಡಿದ್ದೇನೆ, ಆದರೆ, ನಿಮ್ಮ ರೀತಿ ವಿಡಿಯೋ ಇಟ್ಟುಕೊಂಡಿಲ್ಲ, ಸ್ಟಿಂಗ್​ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದು ಯಾರು, ಸ್ಟಿಂಗ್ ಆಪರೇಷನ್ ವಿಚಾರ ನಾನು ಚರ್ಚಿಸಿದ್ದೇನೆಯೇ, ಸಂಪುಟದಲ್ಲಿ ನಡೆದ ರಹಸ್ಯವನ್ನು ಮಾಧ್ಯಮಗಳಿಗೆ ಬಿಟ್ಟಿದ್ಯಾರು, ಸ್ಟಿಂಗ್ ಫೈಲ್​ ಸಂಪುಟ ಸಭೆಗೆ ತೆಗೆದುಕೊಂಡು ಹೋಗಿದ್ಯಾರು, ರಾಜ್ಯದ ಜನರಿಗೆ ಕೇಳುತ್ತೇನೆ, ಇಂತಹ ವಿಕೃತ ಮನಸ್ಸಿನ ಮುಖ್ಯಮಂತ್ರಿ ನಮಗೆ ಬೇಕಾ.

ನಾನು ಆರಾಮವಾಗಿ ನಿದ್ದೆ ಮಾಡ್ತೇನೆ, ನಿದ್ದೆಗೆಡುತ್ತಿರುವುದು ನೀವು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
central ministercome to open fightH D KumaraswamyPriyank Khargestate ministersting operation
0 FacebookTwitterPinterestEmail
KM Shivaraju

previous post
ಡಿಸೆಂಬರ್‌ ಒಳಗೆ 17,000 ಶಾಲಾ ಶಿಕ್ಷಕರ ನೇಮಕ

You may also like

ಡಿಸೆಂಬರ್‌ ಒಳಗೆ 17,000 ಶಾಲಾ ಶಿಕ್ಷಕರ ನೇಮಕ

October 14, 2026

ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

October 13, 2026

ಚುನಾವಣೆ ವೇಳೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ

October 12, 2026

2027ರ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲ ಪುನಾರಚನೆ

October 10, 2026

ಸ್ಟಿಂಗ್‌ ಆಪರೇಷನ್‌ ಮಾಡಿ ಮುಖ್ಯಮಂತ್ರಿಯಾದ ಡಿಕೆಶಿ

October 7, 2026

ಚುನಾವಣಾ ವ್ಯವಸ್ಥೆ ದುರ್ಬಳಕೆ: ಬಿಜೆಪಿ ಕುತಂತ್ರ

October 6, 2026

ಶೀಘ್ರದಲ್ಲೇ ಬಸ್ ಪ್ರಯಾಣ ದರ ಶೇ.25ರಿಂದ ಶೇ.50 ಏರಿಕೆ

October 5, 2026

ಡಿಕೆಶಿ ಕುಟುಂಬ 2,000 ಕೋಟಿ ರೂ. ಅಕ್ರಮ ಸಂಪಾದನೆ

October 3, 2026

ಸಚಿವ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

October 1, 2026

ಜನವರಿಯಲ್ಲಿ ಪಂಚಾಯತ್‌ ಚುನಾವಣೆಗೆ ತೀರ್ಮಾನ

September 30, 2026

Social Networks

Facebook Twitter Instagram Linkedin Youtube Email Rss

KMS Analysis

  • ನಾಗೇಂದ್ರ, ಜಮೀರ್ , ಜನಾರ್ಧನರೆಡ್ಡಿ ವಿರುದ್ಧ ತನಿಖೆಗೆ ರಾಜ್ಯಪಾಲರ ಪತ್ರ

    August 28, 2026
  • ಮಂತ್ರಿಮಂಡಲ ಪುನಾರಚನೆಗೆ ಕಾಂಗ್ರೆಸ್ ವರಿಷ್ಠರಿಂದ ಅನುಮತಿ

    August 27, 2026
  • ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ಸಚಿವ ಚೌಹಾಣ್

    August 19, 2026
  • ಸಂಪುಟ ವಿಸ್ತರಣೆ ವಿಳಂಬ :ವಿಧಾನಮಂಡಲದ ಮುಂಗಾರು ಅಧಿವೇಶನ ಮುಂದೂಡಿಕೆ

    July 24, 2026
  • ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ

    July 9, 2026

Categories

  • Special Story (590)
  • ಅಂಕಣ (109)
  • ಉದ್ಯೋಗ (356)
  • ದಿನ ಭವಿಷ್ಯ (110)
  • ರಾಜಕೀಯ (2,083)
  • ರಾಜ್ಯ (2,398)
  • ರಾಷ್ಟ್ರ (2,362)
  • ವಿಶ್ಲೇಷಣೆ (202)
  • ಶಿಕ್ಷಣ (413)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸ್ಟಿಂಗ್‌ ಆಪರೇಷನ್‌: ಹೋರಾಡಲು ಅಖಾಡಕ್ಕೆ ಬನ್ನಿ

    October 15, 2026
  • ಡಿಸೆಂಬರ್‌ ಒಳಗೆ 17,000 ಶಾಲಾ ಶಿಕ್ಷಕರ ನೇಮಕ

    October 14, 2026
  • ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

    October 13, 2026

KMS Special

  • ಸ್ಟಿಂಗ್‌ ಆಪರೇಷನ್‌: ಹೋರಾಡಲು ಅಖಾಡಕ್ಕೆ ಬನ್ನಿ

    October 15, 2026
  • ಡಿಸೆಂಬರ್‌ ಒಳಗೆ 17,000 ಶಾಲಾ ಶಿಕ್ಷಕರ ನೇಮಕ

    October 14, 2026
  • ಸ್ಟಿಂಗ್ ಆಪರೇಷನ್‌ ಆರೋಪ ಸಿಬಿಐ ತನಿಖೆ ಆಗಬೇಕು

    October 13, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಡಿಸೆಂಬರ್‌ ಒಳಗೆ 17,000 ಶಾಲಾ ಶಿಕ್ಷಕರ ನೇಮಕ

October 14, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ