ವ್ಯವಸಾಯ ಪದ್ಧತಿ ಸುಧಾರಣೆಗೆ ಒತ್ತು, ವಿಸ್ತೃತ ಚರ್ಚೆ
ಬೆಂಗಳೂರು:ರಾಜ್ಯದಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಕುರಿತಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಎಫ್ಐಸಿಸಿಐ ಪದಾಧಿಕಾರಿಗಳು ಹಾಗೂ 13 ಮಂದಿ ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ವಿಕಾಸಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಎಫ್ಐಸಿಸಿಐ ಪದಾಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ” ನಮ್ಮ ರಾಜ್ಯ ನಮ್ಮ ಕೃಷಿ ” ಸಮ್ಮೇಳನ ಆಯೋಜನೆ, ಕೃಷಿ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ಮೌಲ್ಯವರ್ಧನೆ, ಕೃಷಿ ಯಾಂತ್ರಿಕರಣಗಳ ಕುರಿತು ಸಚಿವರು ವಿಸೃತವಾದ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಯಾಂತ್ರಿಕರಣ ಯೋಜನೆಯನ್ನು ಒಳಪಡಿಸುವಾಗ ಕರ್ನಾಟಕದಲ್ಲಿಯೇ ಯಂತ್ರಗಳನ್ನು ತಯಾರಿಸುವ ಉದ್ದಿಮೆದಾರರಿಗೆ ಆದ್ಯತೆ ನೀಡುವುದು..
ಆಂಧ್ರದ ಮಾದರಿಯಂತೆ ರಾಜ್ಯದಲ್ಲಿ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ಹಾಗೂ ಉತ್ಪಾದನೆ ಹೆಚ್ಚಿಸಲು ವಿದೇಶಗಳಿಂದ ಬೀಜಗಳನ್ನು ಆಮದು ಮಾಡಿಕೊಳ್ಳಲು ಪ್ರಸ್ತುತವಿರುವ ಮಾರ್ಗಸೂಚಿಗಳನ್ನು ಸುಲಭಗೊಳಿಸುವುದು.
ಉದ್ದಿಮೆದಾರರು ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ಶೇ 70 ರಷ್ಟು ಹಣ, ಭೂಮಿ ಖರೀದಿಸಲು ವೆಚ್ಚವಾಗುವುದರಿಂದ ವಿಶೇಷವಾಗಿ ರಾಜ್ಯ ಸರ್ಕಾರವು ಬೀಜ ಸಂಶೋಧನೆ, ಬೀಜ ಸಂಸ್ಕರಣೆ ಕೃಷಿ ಉಪಕರಣಗಳ ತಯಾರಿಕೆಗೆ ಆದ್ಯತೆಯ ಮೇಲೆ ಕಡಿಮೆ ದರದಲ್ಲಿ ಭೂಮಿ ಒದಗಿಸುವುದರ ಬಗ್ಗೆ ಚರ್ಚಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒದಗಿಸಿರುವ 150 ಕಬ್ಬು ಕತ್ತರಿಸುವ ಯಂತ್ರಗಳನ್ನು ಒದಗಿಸಿದ್ದು ಬಹುತೇಕ ರೈತರು ಇಲ್ಲಿಯವರೆಗೆ ನೋಂದಣಿ ಶುಲ್ಕ ದುಬಾರಿಯಾಗಿರುವುದರಿಂದ ಹಾಗೂ ಈ ವರ್ಷದ ಆಯವ್ಯಯದಲ್ಲಿ ಹಾರ್ವೆಸ್ಟರ್ ಹಬ್ ಮಾಡುವಾಗ ಕಬ್ಬು ಕಟಾವು ಯಂತ್ರಗಳ ನೋಂದಣಿ ಶುಲ್ಕವನ್ನು ಆಂಧ್ರ ಹಾಗು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕಡಿತಗೊಳಿಸುವುದು.
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿರುವುದರಿಂದ ದೆಹಲಿ, ಚೆನೈ, ಮುಂಬೈನಲ್ಲಿರುವಂತೆ ಬೆಂಗಳೂರಿನಲ್ಲಿ Regional plant ಕ್ವಾರಟೈನ್ ಸ್ಥಾಪನೆ ಮಾಡಿ ವಿದೇಶಗಳಿಂದ ಉತ್ತಮ ತಳಿಯ ಬೀಜಗಳನ್ನು ಆಮದು ಮಾಡಿಕೊಳ್ಳಲು ನಿಯಮಗಳನ್ನು ಸಡಿಲಗೊಳಿಸುವುದು.
ಕೃಷಿ ಸಚಿವರು ಎಫ್ಐಸಿಸಿಐ ಮನವಿಯನ್ನು ಪರಿಶೀಲಿಸಿ ‘ನಮ್ಮ ರಾಜ್ಯ ನಮ್ಮ ಕೃಷಿ’ ಕಾರ್ಯಕ್ರಮಕ್ಕೆ ಬರುವುದಾಗಿ ಸಮ್ಮತಿಸಿದರು, ಹಾಗೂ ಚರ್ಚಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿಗಳ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಧಾರಿತ ಸಂಸ್ಥೆಗಳನ್ನು ಸ್ಥಾಪಿಸಲು ಸೂಕ್ತ ನಿಯಮಗಳನ್ನು ತರಲು ಪ್ರಯತ್ನಿಸುತ್ತೇನೆ.
ಒಟ್ಟಾರೆ ರಾಜ್ಯದ ಕೃಷಿ ಅಭಿವೃದ್ಧಿಯಲ್ಲಿ ರೈತರು ಅಧಿಕಾರಿಗಳು, ಉದ್ದಿಮೆದಾರರು ಹಾಗೂ ವಿಜ್ಞಾನಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಲು ಎಲ್ಲಾ ಪ್ರಯತ್ನ ಮಾಡುತ್ತೆನೆಂದೂ ಸಚಿವರು ತಿಳಿಸಿದರು.
ಸಭೆಯಲ್ಲಿ ಎಫ್ಐಸಿಸಿಐ ಮುಖ್ಯಸ್ಥ ಶಾಜ್ ಮಂಗಲಂ, ಹಾಗೂ ರವೀಂದ್ರ ಅಗರವಾಲ್ ಸೇರಿದಂತೆ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.