Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

2 ಲಕ್ಷ ಕೋಟಿ ರೂ. ಪರಿಶಿಷ್ಟರ ಕಲ್ಯಾಣಕ್ಕೆ ವೆಚ್ಚ

by KM Shivaraju November 20, 2023
written by KM Shivaraju November 20, 2023 0 comments 2 minutes read
2FacebookTwitterPinterestEmail
401
 ಎಸ್‌ಇಪಿ-ಟಿಎಸ್‌ಪಿ ಹಣ ಬಳಕೆಯ ಮೌಲ್ಯ ಮಾಪನ

ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕೆ ಒದಗಿಸಲಾಗಿರುವ ವಿಶೇಷ ಘಟಕ ಯೋಜನೆ (ಎಸ್‌ಇಪಿ-ಟಿಎಸ್‌ಪಿ) ಅಡಿ ಹಣ ಬಳಕೆಯ ಬಗ್ಗೆ ಮೌಲ್ಯ ಮಾಪನ ಮಾಡಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಅನುಷ್ಟಾನಗೊಂಡ ನಂತರ ಇದುವರೆಗೂ ಎರಡು ಲಕ್ಷ ಕೋಟಿ ರೂ. ಈ ಸಮಾಜದ ಕುಟುಂಬಗಳಿಗೆ ವೆಚ್ಚ ಮಾಡಲಾಗಿದ್ದು ,ಅದು ಸಮರ್ಪಕವಾಗಿ ಜಾರಿಗೊಂಡಿದೆಯೇ, ಇಲ್ಲವೆ ಎಂದು ತಿಳಿಯಲು ಮಾಲ್ಯ ಮಾಪನ ಮಾಡಲಾಗುತ್ತಿದೆ.

ಎಸ್‌ಸಿ, ಎಸ್‌ಸ್ಟಿಗೆ ಮೀಸಲಿರಿಸಿದ ಈ ಹಣವನ್ನು ಕೆಲವು ಇಲಾಖೆಗಳು ದುರುಪಯೋಗ ಪಡಿಸಿಕೊಂಡಿವೆ ಎಂಬ ದೂರಿದೆ. ಜೊತೆಗೆ ಯೋಜನೆಯನ್ನು ಸಮರ್ಪಕವಾಗಿ ಕೆಲವು ಇಲಾಖೆಗಳು ಜಾರಿಗೊಳಿಸಿಲ್ಲ ಎಂಬ ದೂರಿನ ಮಾಹಿತಿಯ ಹಿನ್ನೆಲೆಯಲ್ಲಿ ಮಾಪನ ಮಾಡಲಾಗುತ್ತಿದೆ ಎಂದರು.

ಕುಟುಂಬ ಸಮಾಜದ ಮುಖ್ಯ ವಾಹಿನಿಗೆ

ಸರ್ಕಾರ ನೀಡಿರುವ ಯೋಜನೆಯಿಂದ ಒಂದು ಕುಟುಂಬ ಸಮಾಜದ ಮುಖ್ಯ ವಾಹಿನಿಗೆ ಬಂದಿದೆಯೇ, ಇಲ್ಲವೇ, ಬಾರದಿದ್ದರೆ ಮತ್ತೆ ಎರಡನೇ ಬಾರಿಗೆ ಧನಸಹಾಯ ನೀಡಬೇಕೆ ಎಂದು ತಿಳಿಯಲು ನಮಗೆ ಈ ಬಗ್ಗೆ ಮಾಹಿತಿ ದೊರೆಯಲಿದೆ.

ಎಸ್.ಸಿ.ಪಿ-ಟಿ.ಎಸ್.ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಇದುವರೆಗೆ ನೀಡಿರುವ ಹಣ ಸಮರ್ಪಕವಾಗಿ ಬಳಕೆಯಾಗಿದೆಯೋ, ಇಲ್ಲವೋ ಎಂಬ ಅನುಮಾನವನ್ನು ದೂರ ಮಾಡಲು ಇಂತಹ ತೀರ್ಮಾನ ಕೈಗೊಂಡಿದ್ದೇವೆ.

ಆರು ತಿಂಗಳಲ್ಲಿ ಮೌಲ್ಯಮಾಪನ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ

ಈ ಮೌಲ್ಯಮಾಪನ ಕಾರ್ಯವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಈ ಮೌಲ್ಯಮಾಪನದ ವರದಿಯ ಆಧಾರದ ಮೇಲೆ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಬಯಸಲಾಗಿದೆ ಎಂದರು.

ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸುವಂತಿಲ್ಲವಾದರೂ ಅನಿವಾರ್ಯ ಸಂದರ್ಭಗಳಲ್ಲಿ ಸೆಕ್ಷನ್ ೭ಡಿ ಅಡಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಸೆಕ್ಷನ್ ಅನ್ನು ತೆಗೆದುಹಾಕಲು ತೀರ್ಮಾನಿಸಲಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದರು.

ಸೆಕ್ಷನ್ 7ಡಿಗೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ

ಈ ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೆಕ್ಷನ್ 7ಡಿ ಅನ್ನು ಬಳಸಿಕೊಂಡು ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗ ಮಾಡಿತ್ತು ಎಂದು ನುಡಿದರು.

ಕಳೆದ ಸಾಲಿನಲ್ಲಿ ಕಾಯ್ದೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ ಶೇ.76ರಷ್ಟು ಹಣವನ್ನು ವೆಚ್ಚ ಮಾಡಲಾಗಿತ್ತಾದರೆ, ನಾವು ಅಧಿಕಾರಕ್ಕೆ ಬಂದ ನಂತರ ಈ ವರ್ಷ ಶೇ.78 ರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು.

ಈ ವರ್ಷ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು, ನಿಗದಿತ ಅವಧಿಯೊಳಗಾಗಿ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದರು.

ಈ ಮಧ್ಯೆ ರಾಜ್ಯದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿಲ್ಲದ ಪರಿಶಿಷ್ಟರಿಗೆ ಸರ್ಕಾರದ ವೆಚ್ಚದಲ್ಲೇ ಸದಸ್ಯತ್ವ ಒದಗಿಸಿ ಕೊಡಲು ಸೂಚನೆ ನೀಡಲಾಗಿದೆ.

15 ಲಕ್ಷ ಮಂದಿ ವ್ಯವಸಾಯ ಭೂಮಿಗೆ ಪೋಡಿ ಸಿಕ್ಕಿಲ್ಲ

ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ಸುಮಾರು  15 ಲಕ್ಷ ಮಂದಿ ವ್ಯವಸಾಯ ಭೂಮಿ ಹೊಂದಿದ್ದರೂ ಶೇ.50ರಷ್ಟು ಮಂದಿಯ ಭೂಮಿಗೆ ಪೋಡಿ ಸಿಕ್ಕಿಲ್ಲ.  ಇದೇ ಕಾರಣಕ್ಕೆ ಅವರಿಗೆ ಪ್ರಧಾನಮಂತ್ರಿಗಳ  ಫಸಲ್  ಬಿಮಾ ಯೋಜನೆ ಸೌಲಭ್ಯ ಸೇರಿದಂತೆ ಸರ್ಕಾರಗಳ ಹಲವು ಸವಲತ್ತುಗಳು ಸಿಗುತ್ತಿಲ್ಲ ಎಂದರು.

ಪೋಡಿ ಮಾಡಿಸಿಕೊಂಡಿರದ ದಲಿತರಿಗೆ ತಕ್ಷಣ ಪೋಡಿ ಮಾಡಿಸಿಕೊಡಲು ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಲಜೀವನ್ ಮಿಷನ್ ಅಡಿ ರಾಜ್ಯದ 30 ಲಕ್ಷ ಪರಿಶಿಷ್ಟ ಕುಟುಂಬಗಳಿಗೆ ಕೊಳಾಯಿ ಸಂಪರ್ಕ ನೀಡಲಾಗಿದ್ದು, ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬ ಸಂಬಂಧ ಮೌಲ್ಯಮಾಪನ ವರದಿ ನೀಡಲು ಸೂಚಿಸಲಾಗಿದೆ  ಎಂದು ಸಚಿವರು ಹೇಳಿದರು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
2lack coreBelagavidr-h c mahadevappakmssc-stsection-d amendmentsep-tsp grantsession
2 FacebookTwitterPinterestEmail
KM Shivaraju

previous post
ಭ್ರಷ್ಟ ಅಧಿಕಾರಿಗಳಿಗೆ ಕಾನೂನಿನ ರುಚಿ ತೋರಿಸಲಾಗಿದೆ
next post
ಆರು ತಿಂಗಳಲ್ಲಿ ಸರ್ಕಾರ ರೂಪಿಸಿದ ಯೋಜನೆಗಳು ಯಶಸ್ವಿ

You may also like

ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

March 7, 2026

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (405)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,903)
  • ರಾಜ್ಯ (2,214)
  • ರಾಷ್ಟ್ರ (2,184)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

    March 7, 2026
  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026

KMS Special

  • ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

    March 7, 2026
  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

March 7, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ