ಸಿಟಿ ಕಮಾಂಡ್ ಸೆಂಟರ್ ಸದುಪಯೋಗವಾಗಬೇಕು
ಬೆಂಗಳೂರು: ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೆಚ್ಚಿನ ಗಮನಹರಿಸಬೇಕು, ’ಬೆಂಗಳೂರು ಸುರಕ್ಷಿತ ನಗರವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಲಹೆ ನೀಡಿದ್ದಾರೆ.
ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಸರಗಳ್ಳತನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ, ಕೊಲೆಗಳೂ ನಡೆಯುತ್ತಿವೆ, ಕಾನೂನುಬಾಹಿರ ಚಟುವಟಿಕಗೆಗಳಿಗೆ ಕಡಿವಾಣ ಹಾಕಲು ನಿರ್ಭಯಾ ನಿಧಿಯಡಿ ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣವಾಗಿದೆ, ಇದರ ಸದುಪಯೋಗವಾಗಬೇಕು ಎಂದರು.
ರಕ್ಷಿತ ಸೌಲಭ್ಯಗಳು ಜನರನ್ನು ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ, 668 ಕೋಟಿ ರೂ. ವೆಚ್ಚದಲ್ಲಿ ಕಮಾಂಡ್ ಸೆಂಟರ್ ನಿರ್ಮಾಣವಾಗಿದೆ, ನಗರದಲ್ಲಿ ಸಂಚಾರ ದಟ್ಟಣೆ, ಒಂಟಿ ಮನೆಗಳಲ್ಲಿ ಇರುವವರು, ಒಂಟಿಯಾಗಿರುವ ವೃದ್ಧರ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು.
ಅಪರಾಧ ನಡೆದ ನಂತರ ಶಿಕ್ಷೆ ಕೊಡುವುದು ಒಂದು ಭಾಗ, ಆದರೆ ಅಪರಾಧಗಳು ನಡೆಯದ ರೀತಿ ತಡೆಯಬೇಕು, ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಕಮಾಂಡ್ ಸೆಂಟರ್ನಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ, ಇವುಗಳ ಸದುಪಯೋಗವಾಗಬೇಕು ಎಂದರು.