ಫೆಬ್ರವರಿ 29 ರವರೆಗೂ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ
ಬೆಂಗಳೂರು: ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಹೊಸ ಸದಸ್ಯತ್ವ ನೋಂದಣಿ ಅರ್ಜಿ ವಿತರಣಾ ಅವಧಿ ವಿಸ್ತರಣೆ ಮಾಡಿದೆ.
ಫೆಬ್ರವರಿ 29 ರ ವರೆಗೂ ಸದಸ್ಯತ್ವ ನೋಂದಣಿ ಅರ್ಜಿ ವಿತರಣೆ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿದಾರರಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಹಿಂತಿರುಗಿಸಲು ಅರ್ಜಿ ಪಡೆದ ದಿನದಿಂದ 30 ದಿನಗಳ ಕಾಲಾವಕಾಶವಿರುತ್ತದೆ ಎಂದು ಸಂಘ ತಿಳಿಸಿದೆ.
ನವೆಂಬರ್ 21 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ಹೊಸ ಸದಸ್ಯತ್ವ ನೋಂದಣಿ ಅರ್ಜಿ ವಿತರಣಾ ಅವಧಿ ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ರಾಜ್ಯ ಒಕ್ಕಲಿಗರ ಸಂಘದ ಸದಸ್ಯತ್ವ ನೋಂದಣಿ ಅಭಿಯಾನವು ಪ್ರಾರಂಭಗೊಂಡಿದ್ದು, ಡಿ.ಸಿ.ಸಿ ಬ್ಯಾಂಕ್ಗಳಲ್ಲಿ ದಿನಾಂಕ: 17-02-2023 ರಿಂದ 30-11-2023 ರವರೆಗೆ ಅರ್ಜಿ ವಿತರಿಸಲು ಕಾಲಾವಕಾಶ ನೀಡಲಾಗಿತ್ತು.
ಆದರೆ, ಸಮುದಾಯದ ಜನರ ಬೇಡಿಕೆ ಮೇರೆಗೆ, ದಿನಾಂಕ 21-11-2023 ರ ರಾಜ್ಯ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ
ದಿನಾಂಕ: 29-02-2024 ರ ವರೆಗೂ ಸದಸ್ಯತ್ವ ನೋಂದಣಿ ಅರ್ಜಿ ವಿತರಣೆ ಅವಧಿಯನ್ನು ವಿಸ್ತರಿಸಲಾಗಿದೆ.