ಸದನದಲ್ಲಿ ಯಾವುದೇ ವಿಚಾರ ಎತ್ತಿದರೂ ಉತ್ತರ ಕೊಡಲು ಸರ್ಕಾರ ಸಿದ್ಧ
ಬೆಳಗಾವಿ: ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ಒದ್ದಾಡುತ್ತಿದ್ದು, ಈಗಿನ ಸರ್ಕಾರ ಪತನಗೊಳ್ಳುತ್ತೆ, ನಮಗೆ ಅಧಿಕಾರ ಸಿಗುತ್ತೆ ಎಂಬ ಭ್ರಮಾಲೋಕದಲ್ಲಿದ್ದಾರೆ ಎಂದು ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಳಗೆ ಸಮನ್ವಯ ಇಲ್ಲವೇ ಇಲ್ಲ, ಅವರಲ್ಲಿ ಎರಡು ಗುಂಪುಗಳಿವೆ, ಅವರು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು, ನಂತರ ಜನ ಅವರನ್ನು ತಿರಸ್ಕರಿಸಿದರು ಎಂದರು.
ವಿರೋಧ ಪಕ್ಷಗಳು ಸದನದಲ್ಲಿ ಯಾವುದೇ ವಿಚಾರ ಎತ್ತಿದರೂ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ, ಇದುವರೆಗೆಯೂ ಬರಗಾಲದ ಚರ್ಚೆಯಾಯಿತು, ಅದಕ್ಕೆ ಇಂದು ಉತ್ತರ ನೀಡುತ್ತೇವೆ.
ಸಾವರ್ಕರ್ ಭಾವಚಿತ್ರ ತೆರವು ವಿಷಯ ಸಭಾಧ್ಯಕ್ಷರಿಗೆ ಸಂಬಂಧಿಸಿದ್ದು
ಸುವರ್ಣ ಸೌಧದಲ್ಲಿರುವ ಸಾವರ್ಕರ್ ಭಾವಚಿತ್ರ ತೆಗೆಯುವ ವಿಷಯ ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ್ದು.
ಇದೇ 13 ರಂದು ವಿಧಾನಸಭೆ ಅಧಿವೇಶನ ಮುಗಿದ ನಂತರ ಬೆಳಗಾವಿಯಲ್ಲಿ ಪಂಚಾಮಸಾಲಿ ನಾಯಕರು ಹಾಗೂ ಸ್ವಾಮೀಜಿ ಅವರೊಂದಿಗೆ ಮಾತನಾಡುತ್ತೇನೆ.
ಬೆಳಗಾವಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.