49
ಬೆಂಗಳೂರು: ವೈಕುಂಠ ಏಕಾದಶಿ ಅಂಗವಾಗಿ ಶರವಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಒಂದು ಲಕ್ಷ ಲಡ್ಡು ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ.
ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪ್ರಸಾದವನ್ನು ನಮ್ಮ ಸಂಸ್ಥೆ ಮೂಲಕ ವಿತರಿಸುವುದಾಗಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದ್ದಾರೆ.
ಪವಿತ್ರ ದಿನವಾದ ಅಂದು ದೇವಸ್ಥಾನಗಳಲ್ಲಿ ತಿರುಪತಿ ಮಾದರಿಯ ಲಡ್ಡು ಪ್ರಸಾದ ಸ್ವೀಕರಿಸಬೇಕೆಂಬ ಬಯಕೆ ಭಕ್ತರಲ್ಲಿ ಇರುತ್ತದೆ.
ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ, ಈ ಕಾರಣದಿಂದ ನಮ್ಮ ಸಂಸ್ಥೆ ಲಡ್ಡು ಪ್ರಸಾದವನ್ನು ವಿತರಿಸಲಿದೆ ಎಂದರು.