ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸ್ಥಳೀಯರನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಮನೆ ಬಾಗಿಲಿಗೆ ತೆರಳಿ ಆಹ್ವಾನ ನೀಡುತ್ತಿದ್ದಾರೆ.
ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದ್ದು ಇದಕ್ಕೆ ಸ್ಥಳೀಯರ ಉಪಸ್ಥಿತಿಗೆ ಒತ್ತುಕೊಡಲು ಪ್ರಧಾನಿ ಅವರೇ ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ಕೆಲವು ಬಡಾವಣೆಗಳಿಗೆ ಹಠಾತ್ತನೆ ತೆರಳಿ ಪ್ರತಿ ಮನೆ ಬಾಗಿಲು ಬಡಿದು ಮಂತ್ರಾಕ್ಷತೆ ನೀಡಿ ರಾಮನ ಪ್ರತಿಷ್ಠಾಪನೆಗೆ ಖುದ್ದು ಹಾಜರಾಗುವಂತೆ ಮನವಿ ಮಾಡಿದ್ದಾರೆ.
ಪ್ರಧಾನಿ ಅವರ ಹಠಾತ್ ಭೇಟಿಯಿಂದ ಸಾರ್ವಜನಿಕರು ದಿಗ್ಭಾಂತ್ರರಾಗಿ ಮೋದಿ ಅವರಿಗೆ ಜೈಕಾರ ಹಾಕಿ ಮಂತ್ರಾಕ್ಷತೆ ಪಡೆದು ಬೀಳ್ಕೊಟ್ಟಿದ್ದಾರೆ.
ಮೋದಿ ಅವರಿಗಿರುವ ಬಿಗಿ ಭದ್ರತೆ ನಡುವೆಯೂ ಸಾರ್ವಜನಿಕರು ರಸ್ತೆಗೆ ಬಂದು ಮಂತ್ರಾಕ್ಷತೆ ಪಡೆದು, ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಬರುವುದಾಗಿ.. ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ.. ಜೈ ಶ್ರೀ ರಾಮ್.. ಜೈ..ಜೈ..ಶ್ರೀ ರಾಮ್..! ಎಂದು ಘೋಷಣೆ ಕೂಗುತ್ತಿರುವ ದೃಶ್ಯ ಕಂಡಬಂದಿತು.